


- ಒಂದು ವಾರದ ಸಿದ್ಧಾಪುರ ಅವರಗುಪ್ಪಾ ಮಾರಿಕಾಂಬಾ ಜಾತ್ರೆ ಮುಕ್ತಾಯವಾಗಿದೆ. ಮಳೆಯ ರಗಳೆ ನಡುವೆ ಅದ್ಧೂರಿಯಾಗಿ ನಡೆದ ಈ ಜಾತ್ರಾಮಹೋತ್ಸವದ ಮುಕ್ತಾಯದ ಮಾರಿ ವಿಸರ್ಜನೆ ಅಹೋರಾತ್ರಿ ನಡೆಯಿತು. ಸ್ಥಳೀಯರು ವಿಶೇಶವಾಗಿ ಯುವಕರು ಕುಣಿದು ಕುಪ್ಪಳಿಸಿ ಮಾರಿಕಾಂಬೆಯ ವಿಸರ್ಜನಾ ವಿಧಿ ಪೂರೈಸಿದರು..
- ಬೆಲೆ ಏರಿಕೆ ಖಂಡಿಸಿ ಸಿದ್ಧಾಪುರ ಬಿ.ಜೆ.ಪಿ. ಮಂಡಳದಿಂದ ಸಿದ್ಧಾಪುರ ರಾಮಕೃಷ್ಣ ಹೆಗಡೆ ವೃತ್ತದ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದರು.

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ – 9740598884
ಹವಾಮಾನ ವರದಿ: ಬೆಂಗಳೂರು ಸೇರಿ ರಾಜ್ಯದ 15 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ!
ಚಂಡಮಾರುತದ ಪರಿಣಾಮವಾಗಿಯೇ ಮುಂಗಾರು ಪೂರ್ವ ಮಳೆ ಚುರುಕಾಗುತ್ತಿದ್ದು, ಒಂದು ವಾರ ಸಮೃದ್ಧ ಮಳೆಯಾಗಲಿದೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಮಳೆ (ಸಾಂದರ್ಭಿಕ ಚಿತ್ರ)online desk
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿರುವುದರಿಂದಾಗಿ ರಾಜ್ಯದ ಮೇಲೆ ಪರಿಣಾಮ ಉಂಟಾಗಿದ್ದು, ಇಂದಿನಿಂದ ಏ.17 ವರೆಗೆ ಬೆಂಗಳೂರು ಸೇರಿ 15 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಂಡಮಾರುತದ ಪರಿಣಾಮವಾಗಿಯೇ ಮುಂಗಾರು ಪೂರ್ವ ಮಳೆ ಚುರುಕಾಗುತ್ತಿದ್ದು, ಒಂದು ವಾರ ಸಮೃದ್ಧ ಮಳೆಯಾಗಲಿದೆ ಎಂದು ತಿಳಿದುಬಂದಿದೆ. ಈ ಮಧ್ಯೆ ಕಲಬುರಗಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬಿಸಿಲ ಝಳವೂ ಹೆಚ್ಚಾಗಿದೆ.

ಬೆಂಗಳೂರು: ಮುಂದಿನ ಎರಡು ದಿನ ರಾಜ್ಯದ ಕೆಲ ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆ ಸಾಧ್ಯತೆ
ಕರಾವಳಿಯ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇನ್ನು ಉತ್ತರ ಒಳನಾಡಿನಲ್ಲಿ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ. ಇದರೊಂದಿಗೆ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು IMD ವರದಿ ಹೇಳಿದೆ. ಏ.08 ರಂದು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ 4 ಸೆಂಟೀಮೀಟರ್ ಮಳೆಯಾಗಿದೆ. ಇನ್ನು ಬೆಂಗಳೂರಿನಲ್ಲಿ 24 ಗಂಟೆಗಳು ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ 35 ಡಿಗ್ರಿ ಮತ್ತು ಕನಿಷ್ಟ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
