

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ ಗ್ಯಾರಂಟಿ ಯೋಜನೆಗಳ ಟೀಕೆ ಕೇಳಿಬಂದಿದೆ. ಇದಕ್ಕೆ ಇಂದು ಸಿದ್ಧಾಪುರದಲ್ಲಿ ಪ್ರತಿಕ್ರೀಯಿಸಿದ ಶಾಸಕ ಭೀಮಣ್ಣ ನಾಯ್ಕ ಬೆಲೆ ಏರಿಕೆಗೆ ಕಾರಣವಾಗಿರುವ ಕೇಂದ್ರ ಸರ್ಕಾರ ನಡೆಸುತ್ತಿರುವ ಬಿ.ಜೆ.ಪಿ. ಇಲ್ಲಿ ಯಾವ ಮುಖ, ನೈತಿಕತೆ ಇಟ್ಟುಕೊಂಡು ಪ್ರತಿಭಟಿಸುತ್ತಿದೆ, ವಿರೋಧಿಸುತ್ತಿದೆ ಎಂದು ಕೇಳಿದ್ದಾರೆ.
ದನದ, ಶವದ ರಾಜಕಾರಣ ಮಾಡುವ ಬಿ.ಜೆ.ಪಿ.ರೈತಬೆಳೆಯುವ ಹಾಲಿನದರ ಏರಿಸಿದರೆ ಕಿರುಚಾಡುತ್ತಿದೆ, ರೈತ ವಿರೋಧಿ, ಜಾನುವಾರು ವಿರೋಧಿ ಬಿ.ಜೆ.ಪಿ. ಜನಸಾಮಾನ್ಯರ ಗ್ಯಾರಂಟಿ ಯೋಜನೆ ಟೀಕಿಸುವುದು ಅವರ ಆದ್ಯತೆ, ಉದ್ದೇಶವನ್ನು ಪ್ರತಿಬಿಂಬಿಸುತ್ತದೆ ಎಂದು ಟಾಂಗ್ ನೀಡಿದ್ದಾರೆ.
* ಸಿದ್ದಾಪುರ ಸೇರಿದಂತೆ ಉತ್ತರ ಕನ್ನಡ ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಬುಡಕಟ್ಟು ಸಮೂದಾಯ ಖರೆ ಒಕ್ಕಲಿಗರ ಸಮೂದಾಯ ಭವನದ ಶಂಕುಸ್ಥಾಪನೆ ಇಂದು ಸಿದ್ಧಾಪುರ ಕೋಲಶಿರ್ಸಿ ಹಲಗಡೆಕೊಪ್ಪದಲ್ಲಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದ ಶಿಸ್ತು, ನೆರೆದ ಜನಸಮೂಹ ಒಕ್ಕಲಿಗರ ಒಗ್ಗಟ್ಟು ಪ್ರದರ್ಶನದ ಜೊತೆಗೆ ಅವರ ಸಾಮರ್ಥ್ಯ ಬಿಂಬಿಸಿತು.

* ಮಿನಿಟ್ಯಾಕ್ಟರ್, ಪೈಪ್, ಟಿಲ್ಲರ್ ಗಳನ್ನು ನೀಡುವ ಕೃಷಿ ಇಲಾಖೆಯ ಕಾರ್ಯಕ್ರಮ ಸರಳವಾಗಿ ನಡೆಯಿತು. ಶಾಸಕ ಭೀಮಣ್ಣ ನಾಯ್ಕ ರೈತರಿಗೆ ಸೌಲಭ್ಯ ವಿತರಿಸಿ ಅವುಗಳ ಸದ್ಭಳಕೆಗೆ ಸಲಹೆ ನೀಡಿದರು.
ಪತ್ರಕರ್ತ ಶಿವಶಂಕರ್ ಕೋಲಶಿರ್ಸಿ ಸ್ಮರಣಾರ್ಥ ಬೇಸಿಗೆ ಶಿಬಿರ ಇಂದು ಕೋಲಶಿರ್ಸಿ ಹಿ.ಪ್ರಾ.ಶಾಲೆಯಲ್ಲಿ ಪ್ರಾರಂಭವಾಯಿತು. ಆಧಾರ್ ಸಂಸ್ಥೆ ಸಂಘಟಿಸಿರುವ ಈ ಶಿಬಿರದ ಉದ್ಘಾಟನೆಯ ವೇಳೆ ಶಿವಶಂಕರ್ ಕಟ್ರನ್ ಸ್ಮರಿಸಲಾಯಿತು.

