

ಸಿದ್ದಾಪುರ
ಇಲ್ಲಿಯ ಹೊಸೂರಿನ ಶ್ರೀ ಬಂಕೇಶ್ವರ ದೇವರ ಅಷ್ಟಬಂಧ,ಪುನ:ಪ್ರತಿಷ್ಠೆ, ಶ್ರೀ ವೀರಭದ್ರ ನೂತನ ದೇವಾಲಯ ಸಮರ್ಪಣೆ, ಗಣಪತಿ.ಪಾರ್ವತಿ,ನಂದಿ, ವೀರಭದ್ರ ಸಹಿತ ದೇವರ ಪ್ರತಿಷ್ಠೆ ಹಾಗೂ ಧ್ವಜಪೂಜೆ ಮಹೋತ್ಸವ ಏ.೨೨.೨೩ ಹಾಗೂ ೨೪ರಂದು ಜರುಗಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಆರ್.ಆಯ್.ನಾಯ್ಕ ಹೊಸೂರು ತಿಳಿಸಿದರು.
ಅವರು ಅಷ್ಟಬಂಧ ಮಹೋತ್ಸವದ ಕುರಿತು ವಿವರಗಳನ್ನು ನೀಡಿ ಶ್ರೀ ಕ್ಷೇತ್ರ ಮಂಜಗುಣಿಯ ವೇ| ಮಂಜುನಾಥ ಭಟ್ಟರ ಮಾರ್ಗದಶ್ನ, ವೇ| ಕುಮಾರ ಭಟ್ಟ ಕೊಳಗಿಬೀಸ್ ರ ಆಚಾರ್ಯತ್ವದಲ್ಲಿ ಏ.೨೨ರಂದು ಗಣಪತಿಪೂಜೆ, ವೀರಭದ್ರ ದೇವಾಲಯ ಪರಿಗ್ರಹ,ಪೀಠಪ್ರತಿಷ್ಠೆ, ೨೩ರಂದು ವೀರಭದ್ರ ದೇವಾಲಯದ ಶಿಖರ ಪ್ರತಿಷ್ಠೆ,ದೇವಾಲಯ ಸಮರ್ಪನೆ, ಶ್ರೀ ಬಂಕೇಶ್ವರ ದೇವರ ಲಿಂಗ ಸ್ಥಾಪನೆ, ಪ್ರಾಣಪ್ರತಿಷ್ಠೆ, ಅಷ್ಟಬಂಧ, ಧ್ವಜಪೂಜೆ ಮುಂತಾಗಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ೨೪ರಂದು ಕಲಾವೃದ್ಧಿ ಹೋಮ, ರುದ್ರ, ಗಣಪತಿ,ಪಾರ್ವತಿ, ವೀರಭದ್ರ ನಾಗಮಂತ್ರ ಮುಂತಾದ ಹೋಮಗಳು, ಯಾಗ ಪೂರ್ಣಾಹುತಿ,ಅನ್ನಸಂತರ್ಪಣೆ ಜರುಗುವದು.

ಆ ದಿನ ಮಧ್ಯಾಹ್ನ ೧ ಗಂಟೆಗೆ ಧರ್ಮಸಭೆ ಜರುಗಲಿದ್ದು ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಆಶ್ರಮದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು, ಶ್ರೀ ಕ್ಷೆತ್ರ ಸಿಗಂದೂರು ಧರ್ಮಾಧಿಕಾರಿ ರಾಮಪ್ಪನವರು, ಶ್ರೀ ಕ್ಷೇತ್ರ ಮಂಜಗುಣಿಯ ಪ್ರಧಾನ ಅರ್ಚಕ ವೇ|ಶ್ರೀನಿವಾಸ ಭಟ್ಟರು ದಿವ್ಯ ಸಾನಿಧ್ಯವಹಿಸುವರು. ಶಾಸಕ ಭೀಮಣ್ಣ ಟಿ.ನಾಯ್ಕ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ದೇವಾಲಯ ಸಮಿತಿ ಅಧ್ಯಕ್ಷ ಆರ್.ಆಯ್.ನಾಯ್ಕ, ಊರಿನ ಪ್ರಮುಖರಾದ ಕೆ.ಜಿ.ನಾಗರಾಜ, ಆನಂದ ಐ.ನಾಯ್ಕ, ಪ್ರಕಾಶ ಹೊಸೂರು ಗೌರವ ಉಪಸ್ತಿತಿವಹಿಸುವರು .
ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ,ನಾಟಕ ಪ್ರದರ್ಶನಗೊಳ್ಳುವದು ಎಂದರು.
ಉದ್ಯಮಿ, ಊರಿನ ಪ್ರಮುಖ ಕೆ.ಜಿ.ನಾಗರಾಜ ಮಾತನಾಡಿ ಶ್ರೀ ಬಂಕೇಶ್ವರ ದೇವಾಲಯ ಬಿಳಗಿ ಅರಸರ ಕಾಲದ ೫೦೦ ವರ್ಷಗಳ ಪುರಾತನ ದೇವಾಲಯ ೩೫ ವರ್ಷಗಳ ನಂತರ ಅಷ್ಟಬಂಧ ನಡೆಯುತ್ತಿದೆ.ಬಂಕಾಸುರನ ಸಂಹಾರ ಮಾಡಿದ ಈಶ್ವರ ಇಲ್ಲಿಯ ಎತ್ತರದ ಗಿರಿಯಲ್ಲಿ ನೆಲೆಗೊಂಡಿದ್ದಾನೆ. ಬಿಳಗಿ ಅರಸರ ಸೇನೆಯ ಪ್ರಮುಖ ನಾಯಕನಾಗಿದ್ದ ಬೊಮ್ಮ ನಾಯಕ ಇಲ್ಲಯವನು. ಸ್ವಾತಂತ್ರ ಹೋರಾಟವೂ ಸೇರಿದಂತೆ ಅನೇಕ ವಿಶಿಷ್ಠ ಕಾರ್ಯಗಳಲ್ಲಿ ಈ ಊರು ಪಾಲ್ಗೊಂಡಿದೆ. ೩೫ ವರ್ಷಗಳ ಹಿಂದೆ ನೂತನ ದೇವಾಲಯ ನಿರ್ಮಾಣಗೊಂಡಿತ್ತು. ಈಗ ಸುಮಾರು ೫೦ ಲಕ್ಷ ರೂ.ವೆಚ್ಚದಲ್ಲಿ ದೇವಾಲಯ ನವೀಕರಣವಾಗಿದ್ದು ವೀರಭದ್ರ ಆಲಯ ನಿರ್ಮಾಣವಾಗಿದೆ. ದೇವಾಲಯ ಸಮಿತಿ ಉಪಾಧ್ಯಕ್ಷ ರವಿ ಪಾಟೀಲ್ ಸ್ವಂತವೆಚ್ಚದಲ್ಲಿ ಯಾಗಶಾಲೆ ನಿರ್ಮಿಸಿಕೊಟ್ಟಿದ್ದಾರೆ. ಊರಿನ ಎಲ್ಲರ ಹಾಗೂ ಹೊರ ಊರಿನವರ ಭಕ್ತರು ಈ ಕಾರ್ಯಗಳಲ್ಲಿ ಸಹಕರಿಸುತ್ತಿದ್ದಾರೆ. ಹಿಂದಿನ ಆಡಳಿತ ಕಮಿಟಿಯವರು ದೇವಾಲಯದ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿದ್ದಾರೆ. ಊರಿನ ಜನತೆ ಈ ಧಾರ್ಮಿಕ ಕಾರ್ಯಕ್ರಮದ ಮೂಲಕ ಊರಿನ ಒಳಿತಿಗಾಗಿ ೨೪ ದಿನಗಳ ಕಾಲ ಸ್ವಯಂಪ್ರೇರಿತರಾಗಿ ಮಾಂಸಾಹಾರವನ್ನು ತ್ಯಜಿಸಿದ್ದು ಅವರ ಭಕ್ತಿ,ಶೃದ್ಧೆಯ ದ್ಯೋತಕ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ರವಿ ಪಾಟೀಲ್, ಕಾರ್ಯದರ್ಶಿ ಜೆ.ಆರ್.ಹೊಸೂರು,ಸದಸ್ಯರಾದ ಬಸವರಾಜ, ಕೆ.ಜಿ.ಕಡಕೇರಿ,ಸದಾರಮೆ ಮಡಿವಾಳ, ಜಿ.ಬಿ.ಕಬಗದ್ದೆ, ಪ್ರಮುಖರಾದ ಪಿ.ಬಿ.ಹೊಸೂರ, ಸುರೇಂದ್ರ ದಪೇದಾರ್, ಹಿಂದಿನ ಆಡಳಿತ ಕಮಿಟಿ ಅಧ್ಯಕ್ಷ ಶಿವಾನಂದ ನಾಯ್ಕ ಇದ್ದರು.
