


ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ ಅಂಥದ್ದೇ ಸಂಭವನೀಯ ದುರಂತದಿಂದ ಸಿದ್ಧಾಪುರ ಬಚಾವಾಗಿದೆ.

ಸಿದ್ಧಾಪುರದಿಂದ ಸಾಗರ ಗ್ರಾಮೀಣ ಭಾಗದ ಮೂಲಕ ಹೊನ್ನಾಳಿಗೆ ತೆರಳುವ ಖಾಸಗಿ ಬಸ್ ಎಂದಿನಂತೆ ಇಂದು ಕೂಡಾ ಮಧ್ಯಾನ್ಹ ೨.೩೦ ರ ಸುಮಾರಿಗೆ ಇಲ್ಲಿಂದ ಹೊರಟಿದೆ. ಕೆ.ಡಿ.ಸಿ.ಸಿ. ಬ್ಯಾಂಕ್ ಇರುವ ಏರು ಪ್ರದೇಶದಿಂದ ಜೋಗ ರಸ್ತೆಗೆ ಬಸ್ ತಿರುಗಿಕೊಳ್ಳುವ ಮೊದಲು ಬ್ರೇಕ್ ಫೇಲಾಗಿ ಕಾರೊಂದಕ್ಕೆ ಗುದ್ದಿದೆ. ಚಾಲಕನ ಸಮಯಪ್ರಜ್ಞೆ ಜಾಗ್ರತವಾಗದಿದ್ದರೆ ಬಸ್ ಎಡಕ್ಕೆ ತಿರುಗುವ ಬದಲು ಬಲಕ್ಕೆ ತಿರುಗಿದ್ದರೆ… ಅಲ್ಲಿದ್ದ ಗೂಡಂಗಡಿಗಳ ಪೈಕಿ ಒಂದು ಸಿದ್ಧ ಆಹಾರದ ಮೊಬೈಲ್ ಅಂಗಡಿ ಜೊತೆಗೆ ಕನಿಷ್ಟ ಮೂರ್ನಾಲ್ಕು ಸಾವಾಗುವ ಅಪಾಯವಿತ್ತು!.
ನಿಯಂತ್ರಣ ತಪ್ಪಿದ ಬಸ್ಸನ್ನು ಚಾಲಕ ಎಡಕ್ಕೆ ತಿರುವಿಸುತ್ತಲೇ ಅದು ಕೆ.ಡಿ.ಸಿ.ಸಿ. ಬ್ಯಾಂಕ್ ಎ.ಟಿ.ಎಂ. ತಡೆದು ನಿಂತಿತು. ತಕ್ಷಣ ಪೊಲೀಸ್ ಸಹಕಾರದಲ್ಲಿ ಬಸ್ ತೆರವು ಮಾಡಿ ಪ್ರಕರಣ ದಾಖಲಿಸಲಾಗಿದೆ. ಅದೃಷ್ಟವಶಾತ್ ಈ ಘಟನೆ ದುರಂತವಾಗಿ ಬದಲಾಗಿಲ್ಲ. ಬಸ್ ಎ.ಟಿ.ಎಂ. ಗೆ ಬಡಿದು ನಿಲ್ಲದಿದ್ದರೆ ಆ ಏರು ಪ್ರದೇಶದಲ್ಲಿದ್ದ ಕಾರು, ಬೈಕ್ ಸೇರಿದ ಕನಿಷ್ಟ ೮-೧೦ ವಾಹನಗಳು ಜಖಂ ಆಗುತಿದ್ದವು. ಬಲಕ್ಕೆ ತಿರುಗಿದ್ದರೆ ಗೂಡಂಗಡಿಗಳು ನೆಲಸಮವಾಗುತಿದ್ದವು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
