


ಸಾಹಿತ್ಯ,ಸಂಗೀತ ಸಿನೆಮಾ ವರ್ತಮಾನಕ್ಕೆ ಮೂಖಾಮುಖಿಯಾದರೆ ಎಷ್ಟು ಜನಪರ, ಜೀವಪರ ಇರಬಹುದು ಎಂಬುದಕ್ಕೆ ತಾಜಾ ಉದಾಹರಣೆ ಸು.ಫ್ರಾಮ್ ಸೋ.

ಧರ್ಮಸ್ಥಳ, ರಾಜ್ಯ, ದೇಶದಾದ್ಯಂತ ದೇವಮಾನವರ ಹಾವಳಿ ಎಷ್ಟು ವಿಪರೀತವಾಗಿದೆಯೆಂದರೆ…. ಅಧಿಕ ಲಾಭದ ಕಾಂಟ್ರ್ಯಾಕ್ಟ್, ಬಿಲ್ಡರ್ ಉದ್ಯಮಕ್ಕಿಂತ ದೇವರವ್ಯಾಪಾರ ಹೆಚ್ಚು ಲಾಭದಾಯಕ, ನಿರಾಯಾಸ ಎನ್ನುವ ಗ್ರಹಿಕೆ ಹಿನ್ನೆಲೆಯಲ್ಲಿ ಕಂಡಕಂಡಲ್ಲಿ ದೇವರು, ದೇವ ಮಾನವರ ಉದ್ಭವವಾಗುತ್ತಿದೆ. ಇಂಥ ಕಟುವಾಸ್ಥವವನ್ನು ಹಾಸ್ಯದೊಂದಿಗೆ ಬೆರೆಸಿ ಉತ್ತಮ ಸಂದೇಶವೊಂದನ್ನು ನೀಡಿದರೆ ಅದು ಸುಪ್ರಾಸೋ ಆಗುತ್ತದೆ.

ಅಶೋಕ, ಗ್ರಾಮದ ಹುಡುಗಿಯನ್ನು ಕದ್ದು ನೋಡಲು ಹೋಗಿ ಜನರ ಸಾಹಸಕ್ಕೆ ನೆಲೆ ಒದಗಿಸುತ್ತಾನೆ. ಸಹಜ ಮನುಷ್ಯ ಕಿಡಿಗೇಡಿತನ ಮಾಡಿ ಬಚಾವಾಗುವುದು ಕಷ್ಟವಾದಾಗ ಈ ಕುಚೇಷ್ಟೆಗೆ ದೈವದ ರೂಪ ಪ್ರಾಪ್ತವಾಗುತ್ತದೆ.


ಸಹಜ ವಾಂಚೆಯ ಮನುಷ್ಯ ಅಸಹಜ ಪ್ರೇತವಾಗುತ್ತಾ ಬದಲಾಗುವ ಪರಿ ವಾಸ್ತವದಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತದೆ. ಸಕತ್ ಮೆಲೋಡ್ರಾಮಾದ ನಂತರ ದೈವವಾಗಿ ಕೆಟ್ಟವನನ್ನು ಶಿಕ್ಷಿಸುವ ಸುಲೋಚನಾ ಎಷ್ಟು ಸಹಜವಾಗಿ ಜನರನ್ನು ಆವಾಹಿಸಿಕೊಳ್ಳುತ್ತಾಳೆಂದರೆ ಚಿತ್ರ ಮುಗಿದಾಗಲೂ ಅಲ್ಲಿಯ ತಮಾಸೆ, ಕಲಾವಿದರ ನಟನೆ ನೆನಪಾಗಿ ನಗೆ ಉಕ್ಕಿಸುತ್ತದೆ.
ಹಾಗೆ ನೋಡಿದರೆ ಇದು ಸಿನೆಮಾ ಕತೆಯೇ ಅಲ್ಲ ಆದರೆ ಇದು ಸಿನೆಮಾ ಎನ್ನುವುದನ್ನೇ ಮರೆಸುವ ಲವಲವಿಕೆಯ ನಿರೂಪಣೆ ಈ ಚಿತ್ರವನ್ನು ಅದ್ಭುತ ದ್ರಶ್ಯಕಾವ್ಯವಾಗಿಸಿದೆ.

ದಕ್ಷಿಣ ಕನ್ನಡ, ಕರಾವಳಿಯಲ್ಲಿ ತುಸು ಹೆಚ್ಚಾಗಿರುವ ಈ ಮೂಢನಂಬಿಕೆ ಸಾರ್ವತ್ರಿಕ ಆದರೆ ರಾಜ್ ಬಿ. ಶೆಟ್ಟಿ ಬಂಡವಾಳ ಹಾಕಿ, ನಯನಮನೋಹರ ಎನ್ನುವಂತೆ ನಟಿಸಿ ಈ ಸಿನೆಮಾದ ತೂಕ ಹೆಚ್ಚಿಸಿದ್ದಾರೆ. ರಂಗಭೂಮಿ ಹಿನ್ನೆಲೆಯ ಇಲ್ಲಿಯ ಕಲಾವಿದರ ಬಳಗ ಪಾತ್ರಗಳನ್ನು ಅಭಿನಯಿಸಿಲ್ಲ ಬದಲಾಗಿ ಜೀವಿಸಿದೆ. ಇದರಲ್ಲಿ ಪ್ರಮುಖ ನಟ,ನಿರ್ಧೇಶಕ ಜೆ.ಪಿ.ತುಮಿನಾಡ್ ಬುದ್ಧಿವಂತಿಕೆ ಜೊತೆ ಇಡೀ ತಂಡದ ಶ್ರಮ ಉತ್ತಮ ಚಿತ್ರವಾಗಿ ಫಲಕೊಟ್ಟಿದೆ.

ಕೇಳುವುದು, ಓದುವುದಕ್ಕಿಂತ ನೋಡುವುದು ಹೆಚ್ಚು ಪರಿಣಾಮ ಎನ್ನುವಂತೆ ಸು.ಫ್ರಾಮ್ ಸೋ ಓದಿ, ಕೇಳುವುದಕ್ಕಿಂತ ನೋಡಿ ಹಗುರಾಗುವ ಸಿನೆಮಾ. ಈ ಹೊಸ ಅಲೆ ಕನ್ನಡದ ಮಹತ್ವ ಹೆಚ್ಚಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಧರ್ಮಸ್ಥಳದ ಅಬ್ಬರದ ಪ್ರಚಾರದ ನಡುವೆ ಈ ಧಾರ್ಮಿಕ ವ್ಯಾಪಾರದ ವಿಡಂಬನೆಯಂತಿರುವ ಈ ಚಿತ್ರ ಈ ಕಾಲದ ಅನಿವಾರ್ಯ ಸಿನೆಮಾವೂ ಹೌದು ಎನ್ನುವಲ್ಲಿ ಚಿತ್ರರಂಗದ ಸಮಕಾಲಿನ ಸ್ಫಂದನೆ ಇದೆ ಎನ್ನುವ ಸತ್ವ,ಸತ್ಯ, ವಾಸ್ತವಗಳೂ ಮೇಳೈಸಿವೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






