

ಭಾರತೀಯ ಸೇನೆಯಲ್ಲಿ ಕೆಲಸಮಾಡುತ್ತಿರುವ ಯೋಧನೊಬ್ಬನ ಕುಟುಂಬ ತಮಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿರುವ ಪ್ರಸಂಗ ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾದಿಂದ ಸುದ್ದಿಯಾಗಿದೆ.


ಭಾರತೀಯ ಸೇನೆಯಲ್ಲಿ ಸೈನಿಕನಾಗಿರುವ ಹಾರ್ಸಿಕಟ್ಟಾದ ಮನೋಜ್ ಕುಮಾರ ತಮ್ಮ ಕುಟುಂಬವನ್ನು ಊರಿನಲ್ಲಿ ಬಿಟ್ಟು ಪರ ಊರಿನಲ್ಲಿ ಸೇವೆ ಸಲ್ಲಿಸುತಿದ್ದಾರೆ. ಇವರ ಪತ್ನಿ ತನ್ನ ಮಗುವಿನೊಂದಿಗೆ ಹಾರ್ಸಿಕಟ್ಟಾದಲ್ಲಿ ವಾಸಿಸುತಿದ್ದಾರೆ.
ಕುಟುಂಬದ ಆಸ್ತಿ ಯ ವಿಚಾರದಲ್ಲಿ ವ್ಯಾಜ್ಯ ಹೂಡಿರುವ ಇವರ ದಾಯಾದಿಗಳು ಸೈನಿಕನ ವೃದ್ಧ ತಾಯಿ ಮತ್ತು ಶಿಕ್ಷಕಿಯಾಗಿರುವ ಯೋಧನ ಪತ್ನಿಯ ವಿರುದ್ಧ ಜೀವಬೆದರಿಕೆ, ಜಾತಿ ನಿಂದನೆ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುತ್ತ ತೊಂದರೆ ಕೊಡುತಿದ್ದಾರೆ ಎಂದು ದೂರಿರುವ ಯೋಧನ ತಾಯಿ ೭೦ ವರ್ಷಗಳ ವೃದ್ಧೆ ಲಕ್ಷ್ಮೀ ಸೂರಾ ನಾಯ್ಕ ಈ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಒಟ್ಟೂ ಐದು ಜನರಿಂದ ತಮ್ಮ ಮೇಲಾದ ಹಲ್ಲೆ ಉಲ್ಲೇಖಿಸಿ ದೇಶರಕ್ಷಣೆಗೆ ತೆರಳಿರುವ ತನ್ನ ಮಗನ ಕಾರಣಕ್ಕಾಗಿಯಾದರೂ ತಮ್ಮ ಕುಟುಂಬ ರಕ್ಷಿಸಿ ಎಂದು ದೂರಿನಲ್ಲಿ ಕೋರಿದ್ದಾರೆ.


ಕಳೆದ ಇಪ್ಪತ್ತು ವರ್ಷಗಳಿಗಿಂತ ಹೆಚ್ಚುಕಾಲ ಸೇನೆಯಲ್ಲಿರುವ ತಮ್ಮ ಮಗ ಮನೋಜ್ ಕುಮಾರ ತನ್ನ ಅನುಕೂಲ ನೋಡದೆ ಸೇನೆಯಲ್ಲಿ ಸೇವೆ ಸಲ್ಲಿಸುತಿದ್ದಾರೆ. ನಮ್ಮ ಮನೆಯಲ್ಲಿ ಗಂಡು ಮಕ್ಕಳು ಇರದಿರುವುದರಿಂದ ನಮ್ಮ ವಿರೋಧಿಗಳಾಗಿರುವ ದಾಯಾದಿಗಳು ದೂರದ ಶಿರಸಿಯಿಂದ ಗೂಂಡಾಗಳನ್ನು, ಕೆಲವು ಬಾಡಿಗೆ ವ್ಯಕ್ತಿಗಳನ್ನು ಕರೆತಂದು ನಮ್ಮ ಕುಟುಂಬಕ್ಕೆ ಹಿಂಸೆ ನೀಡುತಿದ್ದಾರೆ.
ಶಿಕ್ಷಕಿಯಾಗಿರುವ ನಮ್ಮ ಸೊಸೆ ದೂರದ ಊರಿಗೆ ಕೆಲಸಕ್ಕೆ ಹೋಗಬೇಕು, ವೃದ್ಧೆಯಾದ ನಾನು ಮನೆಯಲ್ಲಿ ಇರಬೇಕು ಈ ಅನಿವಾರ್ಯತೆ ಅರಿತ ನಮ್ಮ ವಿರೋಧಿಗಳು ನಮ್ಮ ಕುಟುಂಬಕ್ಕೆ ತೊಂದರೆ ನೀಡುತ್ತಾ ಜೀವ ಬೆದರಿಕೆ ಒಡ್ಡುತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಸೈನಿಕನ ಮನೆಯ ನಮ್ಮ ಪಾಡೇ ಹೀಗಾದರೆ ಇಲ್ಲಿರುವ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸುವ ಲಕ್ಷ್ಮೀ ನಾಯ್ಕ ಈ ಬಗ್ಗೆ ರಾಷ್ಟ್ರಪತಿಗಳು ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿ ನ್ಯಾಯ ಕೇಳುವುದಾಗಿ ತಿಳಿಸಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






