ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ ಎಂಬ ಅಮಾಯಕ ವಾಹನ ಚಾಲಕನ ಮನೆಗೆ ನುಗ್ಗಿ ಖ್ಯಾತೆ ತೆಗೆಯುತ್ತಾರೆ. ಅವರು ಬಂದದ್ದು ಈ ವಸಂತ ನಾಯ್ಕ ತಮ್ಮ ಮಹೇಶನ ಮಗಳನ್ನು ಶಿವಮೊಗ್ಗಕ್ಕೆ ಕೊಂಡೊಯ್ಯಲು!

ಹೀಗೆ ರಾತ್ರಿ ವೇಳೆ ಸಿದ್ಧಾಪುರ ಅವರಗುಪ್ಪ ಮನೆಗೆ ನುಗ್ಗಿ ದಾಂಧಲೆ ಮಾಡಿದ ಅಪರಿಚಿತರೊಂದಿಗೆ ಬಂದು ಕಾರಿನಲ್ಲಿ ಕೂತವರು ಇದೇ ವಸಂತನ ನಾದಿನಿ ಸುಚಿತ್ರ ಇವಳೊಂದಿಗೆ ಬಂದಿದ್ದವನು ಮಹಾನ್‌ ಗುರು ಕಮಲಾಕರ ಭಟ್ಟ!

ಹೀಗೆ ಶಿವಮೊಗ್ಗದಿಂದ ದುಬಾರಿ ಕಾರಿನಲ್ಲಿ ಬಾಡಿಗೆ ಹಂತಕರೊಂದಿಗೆ ಬಂದ ನಾಲ್ಕೈದು ಜನರ ತಂಡದ ಉದ್ದೇಶ ಮಹೇಶ್‌ ಮತ್ತು ಸುಚಿತ್ರಾ ದಂಪತಿಗಳ ಮಗಳನ್ನು ಶಿವಮೊಗ್ಗಕ್ಕೆ ಕರೆದೊಯ್ಯುವುದು! ಆದರೆ ಆದದ್ದೇ ಬೇರೆ….

ತಮ್ಮನ ಮಗಳನ್ನು ಬಲಾತ್ಕಾರವಾಗಿ ಕರೆದೊಯ್ಯಲು ಬಂದ ಅನ್ಯ ಧರ್ಮೀಯರನ್ನು ತಡೆದು ಕೇಳಿದ ವಸಂತ ಜೊತೆಗೆ ಊರು ಕೇರಿಯವರು ಬಂದು ಸೇರುವುದರೊಳಗೆ ವಸಂತನ ರಕ್ಷಣೆಗೆ ಬಂದ ಕುಮಾರನಿಗೆ ಚಾಕುವಿನಿಂದ ತಿವಿಯುತ್ತಾರೆ. ನಂತರ ವಸಂತ.. ಈ ತಿವಿತಕ್ಕೆ ವಸಂತ ಸ್ಥಳದಲ್ಲೇ ಕುಸಿದು ಬಿದ್ದರೆ…. ಕುಮಾರ ಮತ್ತು ಮಹೇಶ ತೀವ್ರವಾಗಿ ಗಾಯಗೊಳ್ಳುತ್ತಾರೆ. ರಾತ್ರಿ ಸಮಯದಲ್ಲಿ ನಡೆದ ಈ ಭೀಕರ ಕೊಲೆಯ ಜಾಡು ಹಿಡಿದು ಹೋದರೆ….

ಹೆಣ್ಣೊಬ್ಬಳ ಮಾರಿಯ ಅವತಾರದ ದರ್ಶನವಾಗುತ್ತದೆ.

ನಂ ೧ ಆರೋಪಿ ಸುಚಿತ್ತಾ ೨೦ ವರ್ಷಗಳ ಕೆಳಗೆ ಮಹೇಶನನ್ನು ಪ್ರೀತಿಸಿ ಮದುವೆಯಾಗಿ ಬೆಂಗಳೂರು ಸಾಕಾಗಿ ಸಿದ್ಧಾಪುರಕ್ಕೆ ಮರಳಿ ಬಂದವಳು! ಇವಳ ಹುಟ್ಟೂರು ಹೊಸೂರು, ಹೊಸೂರಿನ ಜನತಾ ಕಾಲನಿಯ ಏಕನಾಥನ ಮಗಳು ಸಣ್ಣ ವಯಸ್ಸಿನಿಂದ ವಿಪರೀತ ನಡವಳಿಕೆಗಳಿಂದ ಕುಖ್ಯಾತಳಾಗಿದ್ದವಳು. ಇವಳ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿ ಮರಳಿ ಸಿದ್ಧಾಪುರಕ್ಕೆ ಬಂದು ಮೆರಯಬೇಕೆಂದಿದ್ದಳು!

ಆದರೆ ತಾನೊಂದು ಬಗೆದರೆ…. ಮುಂದೆ ಜ್ಯೋತಿಷ್ಯ, ಭಜನೆ, ಉಪದೇಶಗಳಿಂದ ಪ್ರಖ್ಯಾತನಾದ ಕಮಲಾಕರ ಗುರು ಎನ್ನುವ ದಿಢೀರ್‌ ಶ್ರೀಮಂತನ ವಶವಾಗಿ ಅವನಿಗೇ ಬೋಳು ತಿಕ್ಕಿದವಳು ಎಂಬುದು ಶಿವಮೊಗ್ಗದ ಸುದ್ದಿ!

ಈ ವಿಚಿತ್ರ ಹೆಂಗಸು ಸುಚಿತ್ರ ಗಂಡನೊಂದಿಗೆ ಖ್ಯಾತೆ ತೆಗೆದು ಸ್ವಾಮಿಯೊಂದಿಗೆ ಸೇರಿ ಗುಟ್ಟಾಗಿ ಸಂಸಾರ ನಡೆಸುತಿದ್ದಳು ಎಂಬ ಮಾಹಿತಿ. ಈ ರಂಗಬಿರಂಗಿ ವ್ಯವಹಾರಗಳಿಂದ ಬೇಸತ್ತ ಸುಚಿತ್ರಾ ಮಗಳು ತಾಯಿಯ ಕಿರುಕುಳ ತಾಳಲಾರದೆ ಅಪ್ಪನೊಂದಿಗೆ ಬಂದು ದೊಡ್ಡಪ್ಪ ವಸಂತ ಮನೆಯಲ್ಲಿ ಸೇರಿಕೊಳ್ಳುತ್ತಾಳೆ.

ಈ ಪ್ಲ್ಯಾಶ್‌ ಬ್ಯಾಕ್‌ ಕತೆಯ ಖಳನಾಯಕಿ ಸುಚಿತ್ತಾ ತನ್ನ ಗುರು ಕಮಲಾಕರ ಭಟ್ಟನೊಂದಿಗೆ ಮತ್ತಿಬ್ಬರು ವ್ಯಕ್ತಿಗಳನ್ನು ಜೊತೆಗಿಟ್ಟುಕೊಂಡು ಲೇಡಿಡಾನ್‌ ಗೆಟಪ್ಪಿನಲ್ಲಿ ಅವರಗುಪ್ಪಾ ಪ್ರವೇಶಿಸುತ್ತಾಳೆ.

ಆಮೇಲೆ ಇದೆಲ್ಲಾ ತಗಾದೆ, ಗಲಾಟೆ ನಡೆದಿದ್ದು!

ಲೇಡಿಡಾನ್‌ ಹೊಸೂರಿನ ವಿಚಿತ್ರ ತನ್ನ ಸಕಲೆಂಟು ದುರ್ಗುಣಗಳ ಜೊತೆಗೆ ಕುಖ್ಯಾತಿಗಳಿಸಿದ್ದವಳು. ಈ ಅತಿರೇಖಿಯೊಂದಿಗೆ ಸೇರಿಕೊಂಡ ಕಮಲಾಕರ್‌ ಭಟ್ಟ ತನ್ನ ವಾಹನದೊಂದಿಗೆ ಪ್ರೇಯಸಿಗೆ ನೆರವಾಗಲು ಹೋಗಿ ಈಗ ಕಂಬಿ ಹಿಂದೆ ನಿಂತಿದ್ದಾನೆ! ಈ ಪ್ರಕರಣದಲ್ಲಿ ಕೊಲೆಯಾದ ವಸಂತ, ಗಾಯಗೊಂಡ ಕುಮಾರ ಅಮಾಯಕರು, ಮಹೇಶ ಕೂಡಾ ಒಂಥರಾ ಅಮಾಯಕನೇ ಆದರೆ ಈ ಘಟನೆಯ ಕೇಂದ್ರ ಬಿಂದು ಸುಚಿತ್ರಾ ಎನ್ನುವ ನೀತಿಗೆಟ್ಟ ಹೆಣ್ಣು. ಹಣ-ಹೆಣ್ಣು, ಲಾಭದ ವೈದಿಕತೆಯ ಕಮಲಾಕರ ಭಟ್ಟ ಈ ಪ್ರಕರಣದ ಸೂತ್ರಧಾರ ಈತ ಕೊಲೆಗೆ ಬಳಸಿಕೊಂಡಿದ್ದು ಅನ್ಯ ಧರ್ಮೀಯರನ್ನು! ಸೂಕ್ತ ಪೊಲೀಸ್‌ ತನಿಖೆಯ ಮೂಲಕ ದುಷ್ಟ ಸುಚಿತ್ರಾ ಮತ್ತು ಕಮಲಾಕರ ಭಟ್ಟ ಜೀವನ ಪರ್ಯಂತ ಜೈಲುವಾಸಿಗಳಾದರೆ ಸಮಾಜಕ್ಕೊಂದು ಒಳ್ಳೆಯ ಸಂದೇಶ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *