

ಕೃಷಿ ಕಾನೂನು ಕುರಿತಂತೆ ದೇಶಾದ್ಯಂತ ರೈತರ ಪ್ರತಿಭಟನೆ ಮುಂದುವರೆದಿರುವಂತೆಯೇ ಇತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ರಘುನಂದನ್ ಶರ್ಮಾ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

ಕೃಷಿ ಕಾನೂನುಗಳ ರದ್ಧತಿಗೆ ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್ 2 ರವರೆಗೆ ಕಾಲಾವಕಾಶ: ರಾಕೇಶ್ ಟಿಕಾಯತ್
ಕೃಷಿ ಕಾನೂನುಗಳ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್ 2ರವರೆಗೂ ಕಾಲಾವಕಾಶ ನೀಡಿವೆ.

ನವದೆಹಲಿ: ಕೃಷಿ ಕಾನೂನುಗಳ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್ 2ರವರೆಗೂ ಕಾಲಾವಕಾಶ ನೀಡಿವೆ. ತಮ್ಮ ಬೇಡಿಕೆ ಕೇಳುವವರೆಗೂ ಮತ್ತು ಮೂರು ಕೃಷಿ ಕಾನೂನುಗಳು ರದ್ದಾಗದೆ ನಮ್ಮ ಮನೆಗಳಿಗೆ ವಾಪಸ್ ಹೋಗಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಗಾಜಿಪುರ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಅವರು, ಕೃಷಿ ಕಾನೂನುಗಳನ್ನು ರದ್ದುಪಡಿಸಲು ಅಕ್ಟೋಬರ್ 2ರವರೆಗೂ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದೇವೆ. ತದನಂತರ ಮುಂದಿನ ಯೋಜನೆ ಮಾಡುತ್ತೇವೆ. ಒತ್ತಡದಲ್ಲಿ ಸರ್ಕಾರದ ಜೊತೆಗೆ ಮಾತುಕತೆಯನ್ನು ನಡೆಸಲ್ಲ ಎಂದು ಹೇಳಿದರು. ಕನಿಷ್ಠ ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಗೂ ಕಾನೂನು ರೂಪಿಸಬೇಕೆಂದು ಅವರು ಒತ್ತಾಯಿಸಿದರು.


https://imasdk.googleapis.com/js/core/bridge3.438.0_debug_en.html#goog_1528321093
ರೈತ ಸಂಘಟನೆಗಳು ಇಂದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೂ ದೇಶಾದ್ಯಂತ ಚಕ್ಕ ಜಾಮ್ ಪ್ರತಿಭಟನೆಯನ್ನು ನಡೆಸಿದವು. ದೆಹಲಿ ಹಾಗೂ ಸುತ್ತಮುತ್ತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಕೃಷಿ ಕಾನೂನುಗಳ ರದ್ದತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಪ್ರತಿಭಟನಾನಿರತ ರೈತ ನಿಯೋಗದೊಂದಿಗೆ ಹನ್ನೊಂದು ಸುತ್ತಿನ ಮಾತುಕತೆಗಳು ನಡೆದಿದ್ದು, 18 ತಿಂಗಳ ಕಾಲ ನೂತನ ಕೃಷಿ ಕಾನೂನುಗಳನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಸರ್ಕಾರದ ಆಫರ್ ನ್ನು ತಿರಸ್ಕರಿಸಿರುವ ರೈತ ಸಂಘಟನೆಗಳು ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಲೇಬೇಕೆಂದು ಪಟ್ಟು ಹಿಡಿದಿದ್ದು, ಪ್ರತಿಭಟನೆ ನಡೆಸುತ್ತಿವೆ.
ನವದೆಹಲಿ: ಕೃಷಿ ಕಾನೂನು ಕುರಿತಂತೆ ದೇಶಾದ್ಯಂತ ರೈತರ ಪ್ರತಿಭಟನೆ ಮುಂದುವರೆದಿರುವಂತೆಯೇ ಇತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ರಘುನಂದನ್ ಶರ್ಮಾ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ರಘುನಂದನ್ ಶರ್ಮಾ ಅವರು, ನರೇಂದ್ರ ಜೀ.. ನೀವು ಸರ್ಕಾರದ ಭಾಗವಾಗಿದ್ದೀರಿ. ರಾಷ್ಟ್ರೀಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಿಮ್ಮ ಉದ್ದೇಶ ರೈತರಿಗೆ ಸಹಾಯ ಮಾಡುವ ಉದ್ದೇಶವಾಗಿರಬಹುದು, ಆದರೆ ಕೆಲವು ಜನರಿಗೆ ಸಹಾಯ ಬೇಡ ಎಂದಾಗ, ಅಂತಹ ಒಳ್ಳೆಯದನ್ನು ಮಾಡುವುದರಿಂದ ಏನು ಪ್ರಯೋಜನ?.. ಯಾರಾದರೂ ಬೆತ್ತಲೆಯಾಗಿರಲು ಬಯಸಿದರೆ, ಅವನಿಗೆ ಬಲವಂತವಾಗಿ ಬಟ್ಟೆ ತೊಡಿಸುವುದರಿಂದ ಏನು ಪ್ರಯೋಜನ? ನಿಮ್ಮ ಶ್ರಮದ ಫಲವನ್ನು ನೀವು ಪಡೆಯುತ್ತಿದ್ದೀರಿ ಎಂದು ನೀವು ಭಾವಿಸಿದ್ದರೆ ಇದು ಕೇವಲ ಭ್ರಮೆಯಷ್ಟೇ.. ಎಂದು ಹೇಳಿದ್ದಾರೆ.
ಅಂತೆಯೇ ಇಂದು ಅಧಿಕಾರದ ದುರಹಂಕಾರವು ನಿಮ್ಮ ತಲೆಗೆ ಹೋಗಿದೆ. ನೀವು ಜನಾದೇಶವನ್ನು ಏಕೆ ಕಳೆದುಕೊಳ್ಳುತ್ತಿದ್ದೀರಿ? ನಮಗೆ ಆಸಕ್ತಿಯಿಲ್ಲದ ಕಾಂಗ್ರೆಸ್ಸಿನ ಎಲ್ಲಾ ಕೊಳೆತ ನೀತಿಗಳನ್ನು ನಾವು ಅನುಮೋದಿಸುತ್ತಿದ್ದೇವೆ. ಒಂದು ಪಾಟ್ ನಲ್ಲಿ ಹನಿ ಹನಿಯಾಗಿ ನೀರು ಸೋರಿಕೆಯಾಗುತ್ತಿದೆ ಎಂದು ನಾವು ಸುಮ್ಮನಾದರೆ ಆ ಸೋರಿಕೆ ಇಡೀ ಪಾಟ್ ಅನ್ನು ಖಾಲಿ ಮಾಡುತ್ತದೆ. ಅದೇ ರೀತಿ ಜನ ಬೆಂಬಲ ಕೂಡ.. ರಾಷ್ಟ್ರೀಯತೆಯನ್ನು ಬಲಪಡಿಸಲು ಎಲ್ಲ ಶಕ್ತಿಯನ್ನು ಬಳಸಿಕೊಳ್ಳಿ, ಇಲ್ಲದಿದ್ದರೆ ನಾವು ವಿಷಾದಪಡಬೇಕಾಗುತ್ತದೆ. ಸಿದ್ಧಾಂತವನ್ನು ಕಾಪಾಡುವ ಸೂಚನೆಯನ್ನು ನೀವು ಓದಿರಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಕೇಂದ್ರದಲ್ಲಿ ರಾಷ್ಟ್ರೀಯತಾವಾದಿ ಸರ್ಕಾರವನ್ನು ಸ್ಥಾಪಿಸಲು ಆರ್‌ಎಸ್‌ಎಸ್ ದಶಕಗಳಿಂದ ತ್ಯಾಗ ಮತ್ತು ಬಲಿದಾನ ಮಾಡಿದೆ. ಆರ್ ಎಸ್ ಎಸ್ ತನ್ನ ಸಿದ್ಧಾಂತಗಳಿಂದ ದೇಶದಲ್ಲಿ ಹೆಜ್ಜೆಗುರುತುಗಳನ್ನು ವಿಸ್ತರಿಸಲು, ಮಾತೃಭೂಮಿಗೆ ಸೇವೆಯನ್ನು ಪ್ರಚಾರ ಮಾಡಲು, ರಾಷ್ಟ್ರೀಯತೆಗೆ ಪ್ರಥಮ ಸ್ಥಾನವನ್ನು ನೀಡಲು ಒಂದು ಶತಮಾನದಿಂದ ಶ್ರಮ, ತ್ಯಾಗ ಮಾಡಿದೆ. ಇಂದಿನ ರಾಷ್ಟ್ರೀಯತಾವಾದಿ ಸರ್ಕಾರಕ್ಕಾಗಿ ಸಾವಿರಾರು ರಾಷ್ಟ್ರೀಯವಾದಿಗಳು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಹೇಳಿದ್ದಾರೆ. (kpc)
