

ಕನ್ನಡ ಚಿತ್ರರಂಗದ ಕಿಂಗ್ ಶಿವರಾಜ್ ಕುಮಾರ ಈಗ ರೈತರ ಕಣ್ಮಣಿ ಆಗಿ ಅವತರಿಸಿದ್ದಾರೆ. ಶಿವರಾಜ್ ಕುಮಾರ ಸಾಲು ಸಾಲು ಚಿತ್ರಗಳ ಗೆಲುವು, ಮಾನವೀಯತೆಯಿಂದ ಪ್ರಸಿದ್ಧರಾದವರು. ಅವರ ಬಡವ,ರೈತ, ಜನಸಾಮಾನ್ಯರ ಪಾತ್ರದ ಅಭಿನಯ ಎಲ್ಲರಿಗೂ ಪ್ರೀಯ. ಕನ್ನಡದ ಸ್ಯಾಂಡಲ್ ವುಡ್ ಕಿಂಗ್ ಎನಿಸಿಕೊಳ್ಳುತ್ತಿರುವ ಶಿವರಾಜ್ ಕುಮಾರ ರೈತಪರವಾಗಿ ನಿಲ್ಲುವ ಮೂಲಕ ತಾನೂ ರೈತನ ಮಗ ೆಂದು ಸಾಬೀತುಮಾಡಿದ್ದಾರೆ. ಕನ್ನಡದ ನಟರು, ಸೆಲಿಬ್ರಿಟಿಗಳು ರೈತರ ಪರವಾಗಿ ಮಾತನಾಡಲು ಹಿಂಜರಿಯುತ್ತಿರುವ ಸಮಯದಲ್ಲಿ ರೈತರ ಪರವಾಗಿ ನಿಲ್ಲುವ ಮೂಲಕ ಸಹನಟರು, ಚಿತ್ರರಂಗಕ್ಕೆ ಮಾದರಿಯಾಗಿದ್ದಾರೆ. ವಿವಾದ, ರಗಳೆ,ಪ್ರಚಾರಗಳಿಂದ ಕೂಡಾ ಅಂತರ ಕಾಪಾಡಿಕೊಳ್ಳುವ ಶಿವರಾಜ್ ಕುಮಾರ ರೈತಪರ ನಿಲುವು ಕನ್ನಡಿಗರ ಪ್ರಶಂಸೆಗೆ ಪಾತ್ರವಾಗಿದೆ.

ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಮಾದ್ಲಮನೆಯ ಜನಾರ್ಧನ ಕೃಷ್ಣ ಗೌಡ ಹಾಗೂ ಪಾರ್ವತಿ ಜನಾರ್ಧನ ಗೌಡ ಅವರಿಗೆ ಹುಟ್ಟಿದ ಎರಡೂ ಮಕ್ಕಳು ಹುಟ್ಟುವಾಗಲೇ ನಿಶ್ಯಕ್ತರಾಗಿದ್ದಾರೆ. ನಿರಂಜನ(7) ಹಾಗೂ ಪೂರ್ವಿ(3) ಇವರಿಬ್ಬರನ್ನು ನೋಡಿದರೆ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.
ಎರಡು ಜನ ಮಕ್ಕಳಿದ್ದರೂ ಮಾನಸಿಕವಾಗಿ ನೆಮ್ಮದಿ ಇಲ್ಲ. ಇಬ್ಬರೂ ನಿಶ್ಯಕ್ತರಾಗಿದ್ದು ಅವರ ದಿನ ನಿತ್ಯದ ಎಲ್ಲ ಕೆಸಲಗಳನ್ನು ಹೆತ್ತವರೇ ಮಾಡಬೇಕಾದ ಸ್ಥಿತಿ. ಮಣಿಪಾಲ್, ಮಂಗಳೂರು, ಕುಂದಾಪುರ, ಶಿರಸಿ ಮತ್ತಿತರ ಆಸ್ಪತ್ರೆಗಳಿಗೆ ಕರೆದುಕೊಂಡಿ ಹೋಗಿ ಚಿಕಿತ್ಸೆ ಕೊಡಿಸಿದರೂ ಏನೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ಮಾಡಿದ ವೈದ್ಯರುಗಳೆಲ್ಲ ಗುಣಮುಖರಾಗುತ್ತಾರೆ. ನರ ದೌರ್ಬಲ್ಯ ಇರುವುದರಿಂದ ಈ ರೀತಿ ಆಗಿದ್ದಾರೆ ಎಂದು ಹೇಳಿದ್ದಾರೆ. ಆದರೂ ಏನೂ ಪ್ರಯೋಜನವಾಗಿಲ್ಲ. ಅಲ್ಲದೇ ಹಿರಿಯರು ಹೇಳಿದಂತೆ ಕೆಲವು ದೇವಸ್ಥಾನಗಳಿಗೆ ಬೇಟಿ ನೀಡಿ ಪೂಜೆ ಸಲ್ಲಿಸಿದ್ದೇವೆ ಅದರಿಂದಲೂ ಗುಣಮುಖರಾಗಿಲ್ಲ ಎಂದು ಹೆತ್ತವರು ಕಂಬನಿ ಇಡುತ್ತ ತಮ್ಮ ಮಕ್ಕಳ ಸ್ಥಿತಿಯನ್ನು ವಿವರಿಸುತ್ತ ಮಕ್ಕಳ ಔಷಧಿಗಾಗಿ ಪ್ರತಿ ತಿಂಗಳು ಎಂಟು ನೂರು ಬೇಕಾಗುತ್ತದೆ. ಮಕ್ಕಳಿಗೆ ಹೊರ ಪ್ರಪಂಚದ ಅರಿವಿಲ್ಲ. ಇದ್ದಲ್ಲಿಯೇ ಆಟ ಆಡುತ್ತಿರುತ್ತಾರೆ ಎಂದು ಹೇಳುತ್ತಾರೆ.
ಎಂಡೋಸಲ್ಪಾನ್ ಶಂಕೆ: ಪಾರ್ವತಿ ಗೌಡ ರ ತವರುಮನೆ ಹೊನ್ನಾವರ ತಾಲೂಕಿನ ಅಪ್ಸರಕೊಂಡ. ಇವಳಿಗೆ 2011ರಲ್ಲಿ ವಿವಾಹವಾಗಿದೆ. ವಿವಾಹ ಆಗುವ ಪೂರ್ವದಲ್ಲಿ ಅಂದರೆ ಮೂರ್ನಾಲ್ಕು ವರ್ಷದ ಮೊದಲು ಹೊನ್ನಾವರ ತಾಲೂಕಿನಲ್ಲಿ ಎಂಡೋಸಲ್ಪಾನ್ ಕಾಣಿಸಿಕೊಂಡಿದ್ದು ಇದರ ಪರಿಣಾಮ ಮಕ್ಕಳ ಮೇಲೂ ಬಿದ್ದಿರಬಹುದೇ ಎಂದು ಹೇಳಲಾಗುತ್ತಿದೆ.
ಕೂಲಿ ಜೀವನ: ನಿತ್ಯ ಕೂಲಿ ಮಾಡಿದರೆ ಮಾತ್ರ ಜನಾರ್ಧನ ಗೌಡ ಅವರ ಕುಟುಂಬದ ಜೀವನ ಸಾಗುತ್ತದೆ. ಇಲ್ಲದಿದ್ದರೆ ನಿತ್ಯದ ಊಟಕ್ಕೂ ತೊಂದರೆ ಅನುಭವಿಸುವ ಸ್ಥಿತಿ. ಒಂದೆಡೆ ಮಕ್ಕಳನ್ನು ನೋಡಿಕೊಳ್ಳಬೇಕು. ಮತ್ತೊಂದೆಡೆ ಕುಟುಂಬ ನಿರ್ವಹಣೆ ಮಾಡುವ ಜವಾಬ್ದಾರಿ. ಇವೆರಡನ್ನು ಸರಿಯಾಗಿ ನಿರ್ವಹಿಸುತ್ತಿರುವ ಜನಾರ್ಧನ ಗೌಡ ತಮ್ಮ ಮನದಾಳದ ನೋವನ್ನು ಯಾರಲ್ಲಿಯೂ ಹೇಳಿಕೊಳ್ಳದೇ ಹಸನ್ಮುಖಿಯಾಗಿಯೇ ಜೀವನ ನಡೆಸುತ್ತಿದ್ದಾರೆ.
ಸಹಕಾರಕ್ಕೆ ಬ್ಯಾಂಕ ಖಾತೆ-ಎಸ್‍ಬಿಐ ಸಿದ್ದಾಪುರ.ಐಎಫ್‍ಎಸ್ ಕೋಡ್ ನಂ-ಎಸ್‍ಬಿಐಎನ್0040131. ಬ್ಯಾಂಕ್ ಖಾತೆ ನಂ:64211090874.
ಮಕ್ಕಳಿಬ್ಬರ ಸ್ಥಿತಿ ಹೀಗಾಗಿದೆ. ನಿತ್ಯ ಇವರ ಕೆಲಸಮಾಡುವುದೇ ಆಗಿದೆ. ಈಗ ಹೇಗೂ ನಡೆಯುತ್ತದೆ. ಮುಂದೆ ದೊಡ್ಡವರಾದ ಮೇಲೆ ಹೇಗೆ? ಎನ್ನುವ ಚಿಂತೆ ಕಾಡುತ್ತಿದೆ. ಮಕ್ಕಳ ಮುಂದಿನ ಜೀವನಕ್ಕೆ ಸರ್ಕಾರ ಹಾಗೂ ಜನತೆ ಆರ್ಥಿಕ ಸಹಕಾರ ನೀಡಿದರೆ ಒಳ್ಳೆಯದು.- ಪಾರ್ವತಿ ಜನಾರ್ಧನ ಗೌಡ ಮಾದ್ಲಮನೆ.ಮಕ್ಕಳ ತಾಯಿ.
ಮಕ್ಕಳ ಆರೋಗ್ಯದ ಕುರಿತು ಶಾಲಾ ಆರೋಗ್ಯ ತಂಡವನ್ನು ಅವರ ಮನೆಗೆ ಕಳುಹಿಸಿ ಸಂಪೂರ್ಣ ವಿವರ ಪಡೆದು ಪರಿಶೀಲಿಸಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಳುಹಿಸಲಾಗುವುದು. ಎಂಡೋಸಲ್ಪಾನ್ ಇದ್ದರೆ ಆ ಕುರಿತು ಸರ್ಕಾರದ ಗಮನಕ್ಕೂ ತರಲಾಗುವುದು. – ಡಾ.ಲಕ್ಷ್ಮೀಕಾಂತ ನಾಯ್ಕ. ತಾಲೂಕು ಆರೋಗ್ಯಾಧಿಕಾರಿ. ಸಿದ್ದಾಪುರ.
ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ಸಮೀಪದ ದೇವಾಸದಲ್ಲಿ ಚೌಡೇಶ್ವರಿ ಮತ್ತು ನಾಗದೇವರ ಪ್ರತಿಷ್ಠಾಪನಾ ಮಹೋತ್ಸವ ವೇ.ಮೂ. ಚಂದ್ರಶೇಖರ ಭಟ್ಟ ಗಾಳೀಮನೆ ಹಾಗೂ ವೇ.ಮೂ. ಗಜಾನನ ಭಟ್ಟ ಕವಲಕೊಪ್ಪ ಅವರ ಪೌರೋಹಿತ್ಯದಲ್ಲಿ ಫೆ.11 ಹಾಗೂ 12ರಂದು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ.
ಫೆ.11ರಂದು ನಾಗದೇವರ ಪ್ರತಿಷ್ಠಾಪನೆ,12ರಂದು ಬೆಳಗ್ಗೆ ಚೌಡೇಶ್ವರಿ ದೇವಿಯ ಪ್ರತಿಷ್ಠಾಪನೆ,ಮಧ್ಯಾಹ್ನ ಪ್ರಸಾದ ವಿತರಣೆ,ಅನ್ನಸಂತರ್ಪಣೆ, 3.30ರಿಂದ ಪುರೋಹಿತರಿಂದ ಆಶೀರ್ವಚನ. 4.30ರಿಂದ ಹಾರ್ಸಿಕಟ್ಟಾ ದಿವಾನ್ ಯಕ್ಷಸಮೂಹ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
