

ತಾಲೂಕಿನ ಹಿರಿಯ ಸಹಕಾರಿ ಕಳೆದ ನಾಲ್ವತ್ತು ವರ್ಷಗಳಿಂದ ನಿರಂತರವಾಗಿ ಕ್ಯಾದಗಿ ವ್ಯವಸಾಯ ಸಹಕಾರಿ ಸಂಘದ ಸದಸ್ಯರು, ಬಹುಅವಧಿಗೆ ಅಧ್ಯಕ್ಷರೂ ಆಗಿದ್ದ ಎನ್.ಆಯ್. ನಾಯ್ಕ ಕ್ಯಾದಗಿ ಇಂದು ನಿಧನರಾಗಿದ್ದಾರೆ.
ಹಿರಿಯ ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ನಾಯ್ಕ ತಮ್ಮ ಶಾಂತ ಸ್ವಭಾವ,ಸಜ್ಜನಿಕೆಗಳಿಂದ ಎಲ್ಲರ ಪ್ರೀತಿಪಾತ್ರರಾಗಿದ್ದರು. ತುಂಬುಕುಟುಂಬದ ಜಯಮಾನರಾಗಿ ಎರಡು ಜನ ಸಹೋದರರು, ಪತ್ನಿ- ಮೂವರು ಪುತ್ರಿಯರೊಂದಿಗೆ ಅಪಾರ ಬಂಧುಗಳನ್ನು ಅಗಲಿರುವ ನಾಯ್ಕ ಇತ್ತೀಚಿನ ತಮ್ಮ ಅಲ್ಫಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳದೆ ಇಂದು ಸಿದ್ಧಾಪುರ ಆಸ್ಫತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ನಾಳೆ ವಿ.ಎಸ್.ಎಸ್. ಗಳು ರಜೆ ಘೋಶಿಸಲಿ-
ತಾಲೂಕಿನ ಹಿರಿಯ, ಸಜ್ಜನ ರಾಜಕಾರಣಿ ಎನ್.ಆಯ್. ನಾಯ್ಕ ಕ್ಯಾದಗಿ ನಮ್ಮ ಬಹುಕಾಲದ ಗೆಳೆಯ. ಸಿದ್ಧಾಪುರ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ನಿರಂತರ ನಾಲ್ವತ್ತು ವರ್ಷಗಳ ಕಾಲ ಸಹಕಾರಿ ಸಂಘದ ನಿರ್ಧೇಶಕರಾಗಿ ಬಹುಅವಧಿಗೆ ಅಧ್ಯಕ್ಷರಾಗಿದ್ದ ಎನ್.ಆಯ್. ಪ್ರಾಮಾಣಿಕ ಸ್ನೇಹ ಜೀವಿಯಾಗಿದ್ದರು. ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಸಾಮಾಜಿಕ, ಸಹಕಾರಿ ಬದುಕಿಗೆ ಗೌರವ ಕೊಟ್ಟು ನಾವು ನಾಳೆ ನಮ್ಮ ವಿ.ಎಸ್.ಎಸ್. ಹೆಮ್ಮನಬೈಲ್ ಸಹಕಾರಿ ಸಂಘಕ್ಕೆ ರಜೆ ಘೋಶಿಸುತಿದ್ದೇವೆ. ತಾಲೂಕಿನ ಎಲ್ಲಾ ವಿ.ಎಸ್.ಎಸ್. ಗಳು ನಾಳೆ ಎನ್.ಆಯ್. ನಾಯ್ಕ ಸ್ಮರಣಾರ್ಥ ರಜೆ ಘೋಶಿಸಿದರೆ ಉತ್ತಮ. – ಬಿ.ಆರ್. ನಾಯ್ಕ ( ಜಾ.ದಳ ಉ.ಕ. ಜಿಲ್ಲಾಧ್ಯಕ್ಷ)
ನಾವು ನಮ್ಮ ಭಾಗದ ಹಿರಿಯ ಸಜ್ಜನ, ಪ್ರಾಮಾಣಿಕ ರಾಜಕಾರಣಿ, ಸಹಕಾರಿ ರತ್ನ ಎನ್. ಆಯ್. ನಾಯ್ಕ ರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವು ನೀಗುವ ಶಕ್ತಿ ಸಿಗಲಿ, ಕಿರಿಯರಿಗೆ ಮಾರ್ಗದರ್ಶಿ, ಹಿರಿಯರಿಗೆ ಆತ್ಮೀಯ ಬಂಧುವಾಗಿದ್ದ ಎನ್.ಆಯ್. ನಾಯ್ಕ ನಿಧನ ಉತ್ತರ ಕನ್ನಡ ಜಿಲ್ಲೆ ಮತ್ತು ಸಹಕಾರಿ ಕ್ಷೇತ್ರಕ್ಕೆ ತುಂಬಲಾರದ ನಷ್ಟ -ಕೆ.ಟಿ. ನಾಯ್ಕ, ಎಸ್.ಆರ್. ನಾಯ್ಕ, ಹೆ್ಗ್ಗೇರಿ ಬಿ.ಆರ್. ನಾಯ್ಕ, ರಾಜೇಶ್ ನಾಯ್ಕ, ರವಿನಾಯ್ಕ ಹೆಗ್ಗಾರಕೈ, ರಾಮಚಂದ್ರ ಸದೆಗುಡ್ಡೆ, ಪಾಂಡು ಕೋಲಶಿರ್ಸಿ ಹಳದೋಟ.




