

ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗೆ ಮೊದಲು ರಾಜ್ಯ ಚುನಾವಣಾ ಆಯೋಗ ಕ್ಷೇತ್ರಗಳ ಮರುವಿಂಗಡನೆ ಪ್ರಕ್ರಿಯೆಯಲ್ಲಿ ತೊಡಗಿದೆ.



ಬೆಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗೆ ಮೊದಲು ರಾಜ್ಯ ಚುನಾವಣಾ ಆಯೋಗ ಕ್ಷೇತ್ರಗಳ ಮರುವಿಂಗಡನೆ ಪ್ರಕ್ರಿಯೆಯಲ್ಲಿ ತೊಡಗಿದೆ.
ಮುಂದಿನ ಮೇ ಅಥವಾ ಜೂನ್ ತಿಂಗಳಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆಯಿದ್ದು, ರಾಜಕೀಯ ಪಕ್ಷಗಳು ಈಗಾಗಲೇ ಸಿದ್ದತೆ ನಡೆಸುತ್ತಿವೆ. ಈ ಬಾರಿ ಜಿಲ್ಲಾ ಪಂಚಾಯತ್ ಸೀಟುಗಳು 100ರಿಂದ 1,190ರವರೆಗೆ ಏರಿಕೆಯಾಗಲಿದ್ದು ಮತ್ತು ತಾಲ್ಲೂಕು ಪಂಚಾಯತ್ ಸೀಟುಗಳು 600ರಿಂದ 3,273ರಷ್ಟಿರಲಿವೆ.
ಜಿಲ್ಲಾ ಪಂಚಾಯತ್ ಸೀಟುಗಳ ಸಂಖ್ಯೆಯನ್ನು ಪ್ರತಿ ಕ್ಷೇತ್ರಗಳ ಮಿತಿಗಳಿಗನುಗುಣವಾಗಿ 40 ಸಾವಿರದಿಂದ 35 ಸಾವಿರಕ್ಕೆ ಕಡಿಮೆ ಮಾಡಲಾಗುವುದು ಮತ್ತು ತಾಲ್ಲೂಕು ಪಂಚಾಯತ್ ಗಳ ಸೀಟುಗಳನ್ನು ಪ್ರತಿ ಕ್ಷೇತ್ರದ ಜನಸಂಖ್ಯೆಗನುಗುಣವಾಗಿ 10ಸಾವಿರದಿಂದ 12,500ಕ್ಕೆ ಹೆಚ್ಚಿಸಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ಆಯುಕ್ತ ಡಾ ಬಿ ಬಸವರಾಜು ತಿಳಿಸಿದ್ದಾರೆ.
ತಾಲ್ಲೂಕು ಪಂಚಾಯತ್ ಗಳ ಸ್ಥಾನ ಕ್ಷೇತ್ರ ಮರುವಿಂಗಡನೆ ನಂತರ 600ಕ್ಕೆ ಇಳಿಕೆಯಾಗಲಿದೆ, ಜಿಲ್ಲಾ ಪಂಚಾಯತ್ ಸ್ಥಾನ 100ರಷ್ಟು ಏರಿಕೆಯಾಗಲಿದೆ ಎಂದರು. ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸ್ಥಾನಗಳ ಸಂಖ್ಯೆಯನ್ನು ಜಿಲ್ಲಾಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ರಾಜ್ಯ ಚುನಾವಣಾ ಆಯೋಗ ಅಂತಿಮಗೊಳಿಸಿದೆ.
ಇದೀಗ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಗಳ ಕ್ಷೇತ್ರಗಳ ಗಡಿಯ ವಿವರಗಳನ್ನು ಫೆಬ್ರವರಿ 22ರೊಳಗೆ ನೀಡುವಂತೆ ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ನಾವು ಕ್ಷೇತ್ರಮರುವಿಂಗಡನೆ ಪ್ರಕ್ರಿಯಿಯೆನ್ನು ಆರಂಭಿಸಿದ್ದು ಜಿಲ್ಲಾಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಸಿಕ್ಕಿದ ಮೇಲೆ ಅಂತಿಮಗೊಳಿಸಲಾಗುವುದು. ಆಕ್ಷೇಪ ಸಲ್ಲಿಸಲು ಜನರಿಗೆ ಅವಕಾಶವಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. (kpc)
