

ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ ಹರೀಶ್ ಕುಮಾರ್ ಉದ್ಯೋಗ ಮತ್ತು ತರಬೇತಿ ಕೇಂದ್ರದ ಕಮೀಷನರ್ ಆಗಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದು ಅವರ ಜಾಗಕ್ಕೆ ಮುಲ್ಲಾ ಎಂ. ರನ್ನು ನೇಮಕ ಮಾಡಲಾಗಿದೆ.
ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ 9 ಜಿಲ್ಲಾಧಿಕಾರಿಗಳು ಸೇರಿದಂತೆ 42 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೂತನ ಆಯುಕ್ತರಾಗಿ ಕೆ.ವಿ. ತ್ರಿಲೋಕಚಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ. ತ್ರಿಲೋಕ್ ಅವರು ಈ ಹಿಂದೆ ಕರ್ನಾಟಕ ಕೋವಿಡ್ -19 ಕ್ರಿಟಿಕಲ್ ಕೇರ್ ಸಪೋರ್ಟ್ ಕಮಿಟಿಯ ಮುಖ್ಯಸ್ಥರಾಗಿದ್ದರು.
ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರಿಗೆ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜೊತೆಗೆ ಹೆಚ್ಚುವರಿಯಾಗಿ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ನೀಡಲಾಗಿದೆ.
ವರ್ಗಾವಣೆಗೊಂಡ ಇತರೆ ಅಧಿಕಾರಿಗಳು
ರಾಮ್‍ಪ್ರಸಾದ್ ಮನೋಹರ್-ವ್ಯವಸ್ಥಾಪಕ ನಿರ್ದೇಶಕರು ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮ.
ಆರ್.ವೆಂಕಟೇಶ್ ಕುಮಾರ್- ಜಂಟಿ ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕಲ್ಬುರ್ಗಿ).
ಜಿ.ಎನ್.ಶಿವಮೂರ್ತಿ – ಆಯುಕ್ತರು. ಕೇನ್ ಡೆವಲಪ್‍ಮೆಂಟ್ ಮತ್ತು ನಿರ್ದೇಶಕರು, ಸಕ್ಕರೆ ಇಲಾಖೆ (ಬೆಂಗಳೂರು).
ಜೆ.ಮಂಜುನಾಥ್-ಜಿಲ್ಲಾಧಿಕಾರಿಗಳು. ಬೆಂಗಳೂರು ನಗರ.
ಡಾ.ಬಿ.ಆರ್.ಮಮತಾ- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಾರ್ವಜನಿಕ ಭೂ ನಿಗಮ. (ಬೆಂಗಳೂರು).
ಹೆಬ್ಸಿಬಾ ರಾಣಿ ಕೋರ್ಲಪತಿ – ಜಂಟಿ ವ್ಯವಸ್ಥಾಪಕ ನಿರ್ದೇಶಕರು ಕೆಯುಐಡಿಎಫ್‍ಸಿ (ಬೆಂಗಳೂರು).
ಡಾ.ರಾಕೇಶ್ ಕುಮಾರ್ -ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ (ಬೆಂಗಳೂರು).
ಡಾ.ಸೆಲ್ವಮಣಿ – ಜಿಲ್ಲಾಧಿಕಾರಿ (ಕೋಲಾರ).
ರಶ್ಮಿ ಮಹೇಶ್- ಪ್ರಧಾನ ಕಾರ್ಯದರ್ಶಿ. ಹಿಂದುಳಿದ ವರ್ಗ ಮತ್ತು ಕಲ್ಯಾಣ ಇಲಾಖೆ (ಬೆಂಗಳೂರು).
ಡಾ.ಜೆ.ರವಿಶಂಕರ್ -ಕಾರ್ಯದರ್ಶಿ. ಕನ್ನಡ ಮತ್ತು ಸಂಸೃತಿ ಇಲಾಖೆ.
ಡಾ.ಕೆ.ವಿ.ತ್ರಿಲೋಕ್‍ಚಂದ್ರ- ಆಯುಕ್ತರು , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
ಡಾ.ಎಂ.ಬಿ.ವೆಂಕಟೇಶ್- ಆಯುಕ್ತರು, ವಾಟರ್ ಶೆಡ್ ಡೆವಲಪ್‍ಮೆಂಟ್ ಬೋರ್ಡ್.
ಡಾ.ಬಗಾದಿ ಗೌತಮ್- ಹೆಚ್ಚುವರಿ ಆಯುಕ್ತರು , ವಾಣಿಜ್ಯ ತೆರಿಗೆ ಇಲಾಖೆ ಜಾರಿ (ಬೆಂಗಳೂರು). (kpc)
