
ಗುಡ್ಡದ ಮಣ್ಣು ಕುಸಿತದಿಂದ ನಾಲ್ವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಇಡಗುಂದಿ ಗ್ರಾಮದ ಸಂಪೇಬೈಲ್ ನಲ್ಲಿ ಈ ಘಟನೆ ಸಂಭವಿಸಿದೆ.

ಉತ್ತರ ಕನ್ನಡ: ಗುಡ್ಡದ ಮಣ್ಣು ಕುಸಿತದಿಂದ ನಾಲ್ವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಇಡಗುಂದಿ ಗ್ರಾಮದ ಸಂಪೇಬೈಲ್ ನಲ್ಲಿ ಈ ಘಟನೆ ಸಂಭವಿಸಿದೆ.
ಮೃತರನ್ನು ತಾಲ್ಲೂಕಿನ ಕಿರವತ್ತಿ ಬಳಿಯ ಹೊಸಳ್ಳಿ ಗ್ರಾಮದ ಭಾಗ್ಯಶ್ರೀ ಯಡಗೆ (21), ಲಕ್ಷ್ಮೀ ದೋಯಿಪಡೆ (38) ಸಂತೋಷ ದೋಯಿಪಡೆ (18) ಹಾಗೂ ದೋಯಿಪಡೆ ಎಂದು ಗುರುತಿಸಲಾಗಿದೆ.
ಇಂದು ಸಂಜೆಯ ವೇಳೆಗೆ ಗುಡ್ಡದ ಮೇಲಿನ ಮಣ್ಣನ್ನು ಅರ್ಧ ತೆರವು ಮಾಡಿದ್ದ ಕಾರ್ಮಿಕರು, ನೀರು ಕುಡಿಯಲೆಂದು ಕೆಳಗೆ ಬಂದು ಕುಳಿತಿದ್ದಾರೆ.ಆ ಸಂದರ್ಭದಲ್ಲಿ ಏಕಾಏಕಿ ಸುರಿದ ಮಣ್ಣು ಕುಸಿತದಿಂದ ಕಾರ್ಮಿಕರು ಅದರ ಕೆಳಗೆ ಸಿಲುಕಿದ್ದಾರೆ. ಅಲ್ಲಿ ಒಟ್ಟು ಏಳು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. (kpc)
