ಪೊಲೀಸರಿದ್ದಾರೆ ಎಚ್ಚರಿಕೆ….. ಪ್ರತಿಭಾ ನಂದಕುಮಾರ್ ರ ‘ಅನುದಿನದ ಅಂತರಗಂಗೆ’..!

‘ಅಗ್ನಿ’ ಪತ್ರಿಕೆಯ ಭಾಗವಾಗಿದ್ದ ಕವಯತ್ರಿ ಹಾಗೂ ಲೇಖಕಿ ಪ್ರತಿಭಾ ನಂದಕುಮಾರ್ ರವರ ‘ಅನುದಿನದ ಅಂತರಗಂಗೆ’..!

ಕವಯಿತ್ರಿ ಮತ್ತು ಲೇಖಕಿ ಪ್ರತಿಭಾ ನಂದಕುಮಾರ್ ಅವರು ಅಗ್ನಿ ಶ್ರೀಧರರವರ ‘ಅಗ್ನಿ’ ವಾರಪತ್ರಿಕೆಯಲ್ಲಿ ಶುರುವಾಯಿತಿಯ ಸಂಚಿಕೆಯಿಂದಲೂ ‘ಅಗ್ನಿ’ಯ ಸಕ್ರಿಯ ವರದಿಗಾರರು ಮತ್ತು ‘ಅಗ್ನಿ’ಯ ಲೇಖಕಿಯಾಗಿದ್ದರು. ಅಷ್ಟೇ ಅಲ್ಲ ಅಗ್ನಿ ಶ್ರೀಧರರ ‘ಅಗ್ನಿ’ ವಾರಪತ್ರಿಕೆಯ ಜೀವಾಳವೇ ಆಗಿದ್ದರು. ಅದೇ ಹೊತ್ತಿನಲ್ಲಿ ಅಗ್ನಿ ಶ್ರೀಧರರ ಆಗಿನ ಚಾರ್ಮನಲ್ಲಿ ಒಂದಿಷ್ಟು ಹಳೆಯ ಸಂಕಷ್ಟಗಳೂ ಎದುರಾಗಿದ್ದವು. ಆ ದಿನಗಳಲ್ಲಿ ಪ್ರತಿಭಾ ನಂದಕುಮಾರ್ ರು ಶ್ರೀಧರರ ಬೆನ್ನೆಲಬು ಆಗಿ ತೊಡಗಿಕೊಂಡಿದ್ದರು. ‘ಅಗ್ನಿ’ ಗೆ ಎದುರಾದ ಎಲ್ಲ ಕಷ್ಟ-ಕಾರ್ಪಣ್ಯಗಳನ್ನೂ ಆಗಿದ್ದ ಇತರರೊಂದಿಗೆ ಜೊತೆಯಾಗಿ ತೊಡಗಿಕೊಂಡಿದ್ದರು. ಒಂದರ್ಥದಲ್ಲಿ ಆಗ ಶ್ರೀಧರರವರ ಬಲಗೈ ಆಗಿ ‘ಅಗ್ನಿ’ಯಲ್ಲಿ ತೊಡಗಿಕೊಂಡಿದ್ದರು. ಆಗ ಶ್ರೀಧರರವರು ತಮ್ಮ ಹಳೆಯ ‘ದಾದಾಗಿರಿ’ಯ ಛಾರ್ಮನ್ನು ಬಿಡಿಸಿಕೊಳ್ಳಲು ಸಾಕಷ್ಟು ಪ್ರಯತ್ನವನ್ನೂ ಮಾಡಬೇಕಾಗಿತ್ತು. ಆಗ ಅದೇ ಹೊತ್ತಿನಲ್ಲಿ ದೇವೇಗೌಡರ ಸರ್ಕಾರವಿತ್ತು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. ಹಳೆಯ ಪಿ.ಜಿ.ಆರ್.ಸಿಂದ್ಯಾ ಗ್ರಹ ಮಂತ್ರಿಯಾಗಿದ್ದರು. ಆ ಹೊತ್ತಿನಲ್ಲಿ ಶ್ರೀಧರರಿಗೆ ತೀರಾ ಖಾಸಗಿಯಾಗಿ ಆಪ್ತರಾಗಿದ್ದ ದೇವೇಗೌಡರೂ ಪ್ರವಾಸದಲ್ಲಿ ಇದ್ದರು. ಹಾಗಾಗಿ ಆಗ ಗೃಹ ಮಂತ್ರಿಯಾಗಿದ್ದ ಪಿ.ಜಿ.ಆರ್.ಸಿಂಧ್ಯಾ ಶ್ರೀಧರರವರರೊಂದಿಗೆ ಹಳೆಯ ಧ್ವೇಷವನ್ನಿವಿಟ್ಟುಕೊಂಡು ತಮ್ಮ ಗೃಹ ಖಾತೆಯನ್ನು ಬಳಸಿಕೊಂಡು ರಾಜ್ಯದ ಪೋಲಿಸ್ ರನ್ನು ಬಳಸಿಕೊಂಡು ಶ್ರೀಧರರಿಗೆ ತೀರಾ ಕಾಟಕೊಡಲು ಆರಂಭಿಸಿದ್ದರು. ಏಕೆಂದರೆ ಆಗ ಶ್ರೀಧರ ಅವರು ತಮ್ಮ ಹಳೆಯ ‘ಅಂಡರ್ ವರ್ಡ್’ ಡಾನ್ ಛಾರ್ಮನ್ನು ಬಿಡಿಸಿಕೊಳ್ಳಲು ಅತೀವ ಪ್ರಯತ್ನದಲ್ಲಿದ್ದರು. ಇದೇ ಪ್ರಯತ್ನದಲ್ಲಿದ್ದಾಗ ಮುಖ್ಯವಾಹಿನಿಗೆ ಬರಲು ಶ್ರೀಧರ ಅವರು ಶತಪ್ರಯತ್ನದಲ್ಲಿದ್ದಾಗ ಆಗಿನ ಗೃಹ ಮಂತ್ರಿ ಪಿ.ಆರ್.ಸಿಂಧ್ಯಾ ಕಿರಿಕಿರಿ ಮಾಡಲಾರಂಭಿಸಿದ್ದರು. ಅದೂ ಎಂತದೋ ಹಳೆಯ ದ್ವೇಷವನ್ನು ಇಟ್ಟುಕೊಂಡು.

ಸಿಂಧ್ಯಾರವರೊಂದಿಗೆ ದಳದ ಜೀವರಾಜ್ ಆಳ್ವರೂ ಪಿತೂರಿ ಮಾಡಲಾರಂಭಿಸಿದ್ದರು. ಈ ಜೀವರಾಜ್ ಆಳ್ವರೂ ತಮ್ಮ ಬದುಕಿನೊಂದಿಗೆ ‘ಅಂಡರ್ ವರ್ಡ್’ನ ಸಂಪರ್ಕ ಹೊಂದಿದವರು. ಹೀಗಾಗಿ ಪಿ.ಜಿ.ಆರ್.ಸಿಂಧ್ಯಾ ಮತ್ತು ಜೀವರಾಜ್ ಆಳ್ವ ಶ್ರೀಧರರವರಿಗೆ ಬಹಳ ಕಾಟಕೊಡಲು ಆರಂಭಿಸಿದ್ದರು. ಆದರೆ ಶ್ರೀಧರರವರು ‘ನನ್ನನ್ನು ಈ ರಾಜಕಾರಣದ ಧ್ವೇಷ ಮುಗಿಸಬಹುದೇ ಹೊರತು ನನ್ನನ್ನು ಹೆದರಿಸಲು ಸಾಧ್ಯವಿಲ್ಲ’ ಎಂದೂ ‘ಅಗ್ನಿ’ಯ ಸಂಪಾದಕೀಯದಲ್ಲಿ ಬರೆದರು.

ಆಗ ಶ್ರೀಧರರವರು ವಿನಾಕಾರಣ ಈ ಹಳೆಯ ಧ್ವೇಷದಲ್ಲಿ ‘ಬಳ್ಳಾರಿ ಜೈಲಿನಲ್ಲಿ ಇದ್ದರು. ಆಗ ಬಳ್ಳಾರಿ ಜೈಲಿನಲ್ಲಿಯಿಂದಲೇ ತಮ್ಮ ಸಂಪಾದಕೀಯವನ್ನು ಬರೆಯುತ್ತಿದ್ದರು. ಶ್ರೀಧರರವರು ಬರೆಯುತ್ತಿದ್ದ ಸಂಪಾದಕೀಯವನ್ನು ಯಥಾವತ್ತಾಗಿ ಅವರ ಅಕ್ಷರಗಳಲ್ಲೇ ಪತ್ರಿಕೆಗೆ ಫೇಸ್ಟಪ್ ಮಾಡಲಾಗುತ್ತಿತ್ತು. ಇದರೊಂದಿಗೆ ಒಂದು ಬಹು ಮುಖ್ಯ ವಿಷಯವನ್ನು ಹೇಳಲೇಬೇಕು. ಅದು ಈ ರಾಜಕಾರಣದ ದುರಂದರೊಂದಿಗೆ ‘ಕಪ್ಪು ಬಿಳುಪಿ’ನ ವಾರಪತ್ರಿಕೆಯ ಸಂಪಾದಕನೂ ಸೇರಿಕೊಂಡು ಸಾಕಷ್ಟು ಶ್ರೀಧರರವರಿಂದ ಸಹಾಯ-ಅನುಕೂಲ ಪಡೆದುಕೊಂಡರೂ, ಶ್ರೀಧರರವರ ಸಹಾಯದಲ್ಲೇ ಪತ್ರಿಕೆ ಆರಂಭಿಸಿ ನಡೆಸುತ್ತಿದ್ದರೂ ಕೃತಘ್ನ ಅವನೂ ಸೇರಿಕೊಂಡಿದ್ದ.

ಒಟ್ಟಾರೆ ಇವರೆಲ್ಲ ಸೇರಿಕೊಂಡು ‘ಅಗ್ನಿ’ಯನ್ನು ನಿಲ್ಲಿಸಲು ಬಹಳ ಪ್ರಯತ್ನ ನಡೆಸಿದರು.ಆಗ ಪ್ರತಿಭಾ ನಂದಕುಮಾರ್ ರು ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಹಾಗೆಯೇ ಇಂತಹ ಬರಹಗಳಲ್ಲಿ ‘ಪೋಲಿಸ್ ರಿದ್ದಾರೆ ಎಚ್ಚರಿಕೆ’ ಎಂಬ ಬರಹಗಳೂ ತೀರಾ ಓದುಗರ ಗಮನ ಸೆಳೆದಿತ್ತು ಮತ್ತು ಅಗಿನ ಸರ್ಕಾರ ಮತ್ತು ಪೋಲಿಸ್ ರ ನಿದ್ದೆಗೆಡಿಸಿತ್ತು.ಆಗ ಪ್ರತಿಭಾ ನಂದಕುಮಾರ್ ರೊಂದಿಗೆ ಆಗಿನ ‘ಅಗ್ನಿ’ ಪತ್ರಿಕಾಬಳಗವೂ ಸಾಕಷ್ಟು ಸಾಥ್ ನೀಡಿತ್ತು.ಆಗ ಮಂಜುನಾಥ ಅದ್ದೆ, ಮುಳ್ಳಹಳ್ಳಿ ಸೂರಿ, ಬಂಜಗೇರಿ ಜಯಪ್ರಕಾಶ, ಆಗಿನ ಪತ್ರಿಕೆಯ ಪ್ರಸರಣಾಧಿಕಾರಿ ಆರಾಧ್ಯಾ ಇತ್ತ್ಯಾಧಿಗಳೂ ಸಾಕಷ್ಟು ಸಾಥ್ ನೀಡಿದ್ದರು. ಇರಲಿ.ಇದನ್ನೆಲ್ಲಾ ಏಕೆ ಹೇಳುತ್ತಿದ್ದನೆಂದರೆ…..

ಪ್ರತಿಭಾ ನಂದಕುಮಾರ್ ಅವರ ಬಗೆಗೆ ಬರೆಯುವ ಈ ಗಳಿಗೆಯಲ್ಲಿ ಇವೆಲ್ಲವೂ ನೆನಪಾದವು. ಅದಕ್ಕೆ. ಅಲ್ಲದೆ ಮುಖ್ಯವಾಗಿ ಒಬ್ಬ ಏನೂ ತಪ್ಪು ಮಾಡದ ವ್ಯಕ್ತಿಗೆ ಅದೆಷ್ಟು ಸಂಕಷ್ಟಗಳು ಬರುತ್ತವೆ ಎಂದು ಹೇಳಲು ಇದನ್ನೆಲ್ಲಾ ಹೇಳಬೇಕಾಯಿತು..! ಇರಲಿ ಶ್ರೀಧರರವರು ಈಗ ‘ಅಗ್ನಿ ಶ್ರೀಧರ’ ಆಗಿದ್ದಾರೆ.!!ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ. ಅದು ಪ್ರತಿಭಾ ನಂದಕುಮಾರ್ ಅವರ ಕುರಿತ ಬರವಣಿಗೆ ವಿಷಯ.ಲೇಖಕಿ ಪ್ರತಿಭಾ ನಂದಕುಮಾರ್ ಅವರು ಮೂಲತಃ ಬೆಂಗಳೂರಿನವರು. 1955 ಡಿಸೆಂಬರ್ 15ರಂದು ಜನಿಸಿದವರು. ತಂದೆ-ವಿ. ಎಸ್. ರಾಮಚಂದ್ರರಾವ್, ತಾಯಿ- ಯಮುನಾಬಾಯಿ. ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದಿರುವ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ವಾರ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ.ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಪತಿ ನಂದಕುಮಾರ್ ಹಾಗೂ ಮಕ್ಕಳು ಅಭಿರಾಮ್ ಮತ್ತು ಭಾಮಿನಿ ಜೊತೆ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ತಮ್ಮ ಮನೋಧರ್ಮವನ್ನಾಗಿಸಿಕೊಂಡಿರುವ ಕವಿ.ಅವರ ವೈಯಕ್ತಿಕ ಮತ್ತು ವೃತ್ತಿ ಬದುಕುಗಳೆರಡರಲ್ಲೂ ನಿರಂತರ ಸಾಹಸ ಮತ್ತು ಪ್ರಯೋಗಗಳನ್ನು ನಡೆಸಿದವರು. ಉತ್ಕಟವಾಗಿ ಜೀವಿಸುವುದೇ ಬದುಕಿನ ಪರಮ ಸತ್ಯವನ್ನು ತಿಳಿಯಲು ಇರುವ ಏಕೈಕ ದಾರಿ ಎಂದು ನಂಬಿರುವ ಪ್ರತಿಭಾ ಅದೇ ಉತ್ಕಟತೆಯನ್ನು ತಮ್ಮ ಕವಿ ಸಮಯದುದ್ದಕ್ಕೂ ಕಾದುಕೊಂಡಿದ್ದಾರೆ.ಅವರ ಪ್ರಕಟಿತ ಪುಸ್ತಕಗಳು- ನಾನು ಹುಡುಗಿಯರೇ ಹೀಗೆ, ಈತನಕ, ರಸ್ತೆಯಂಚಿನ ಗಾಡಿ, ಕವಡೆಯಾಟ, ಆಹಾ ಪುರುಷಾಕಾರಂ, ಅವರು ಪುರಾವೆಗಳನ್ನು ಕೇಳುತ್ತಾರೆ, ಮುನ್ನುಡಿ ಬೆನ್ನುಡಿಗಳ ನಡುವೆ, ಕಾಫಿ ಹೌಸ್, ಮುದುಕಿಯರಿಗಿದು ಕಾಲವಲ್ಲ ಅವರ ಕವನ ಸಂಕಲನಗಳು. ಯಾನ- ಕಥಾಸಂಕಲನ, ಆಕ್ರಮಣ- ಅನುವಾದಿತ ಕಥೆಗಳು, ಸೂರ್ಯಕಾಂತಿ- ಅನುವಾದಿತ ಡೋಗ್ರಿ ಕವನಗಳು.ಸಾಹಿತ್ಯ ಕ್ಷೇತ್ರದ ಕೃಷಿಗಾಗಿ ‘ಮಹಾದೇವಿ ವರ್ಮಾ ಕಾವ್ಯ ಸಮ್ಮಾನ್’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಮುದ್ದಣ್ಣ ಕಾವ್ಯ ಪ್ರಶಸ್ತಿ’, ‘ಡಾ.ಶಿವರಾಮ ಕಾರಂತ ಪ್ರಶಸ್ತಿ’, ‘ಪು.ತಿ.ನ ಕಾವ್ಯ ಪ್ರಶಸ್ತಿ’ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ.

‘ಅನುದಿನದ ಅಂತರಗಂಗೆ’ ಪ್ರತಿಭಾ ನಂದಕುಮಾರ್ ಅವರ ಆತ್ಮಕಥನವಾಗಿದೆ.’ಅನುದಿನದ ಅಂತರಗಂಗೆ’ ಎಂಬ ಪ್ರತಿಭಾ ನಂದಕುಮಾರ್ ಅವರ ‘ಆತ್ಮಕಥೆ’ಯ ಬಗೆಗೆ ಒಂದಿಷ್ಟು–ಪ್ರತಿಭಾ ನಂದಕುಮಾರ್ ಅವರ ‘ಅನುದಿನದ ಅಂತರಗಂಗೆ’ ಸ್ತ್ರೀ ಸಮಯದ ಮತ್ತು ಸ್ತ್ರೀ ಭಾಷೆಯ ಆತ್ಮಕಥನವಾಗಿದೆ.ಪ್ರತಿಭಾ ನಂದಕುಮಾರರ ಈ ಆತ್ಮಕಥನವಾದ ‘ಅನುದಿನದ ಅಂತರಗಂಗೆ’ಯನ್ನು ಅಹರ್ನಿಶಿ ಪ್ರಕಾಶನ ಹೊರತಂದಿದೆ.ಮತ್ತೊಬ್ಬರ ಆತ್ಮಚರಿತ್ರೆ ಓದಿ ಆ ಬಗ್ಗೆ ಮಾತನಾಡುವುದು ಬಹಳ ಕಷ್ಟ. ಅದು ಅಧಿಕ ಪ್ರಸಂಗತನ ಎನಿಸುತ್ತದೆ. ಆದರೆ, ಇತ್ತೀಚೆಗೆ ಬರುತ್ತಿರುವ ಆತ್ಮಕಥನಗಳನ್ನು ನೋಡಿದಾಗಿ ಈ ಅಭಿಪ್ರಾಯ ಸರಿಯಲ್ಲ ಎನಿಸುತ್ತದೆ. ದಲಿತ ಮತ್ತು ಮಹಿಳಾ ವರ್ಗದಿಂದ ಈಗ ಉತ್ತಮ ಆತ್ಮಕಥನಗಳು ಬರುತ್ತಿವೆ. ಇವುಗಳನ್ನು ಅನಾವರಣ ಪರ್ವದ ಆತ್ಮಕಥನಗಳು ಎನ್ನಬಹುದು.ಕನ್ನಡದಲ್ಲಿ ಆತ್ಮಕಥನಗಳ ದೊಡ್ಡ ಪರಂಪರೆಯೇ ಇದೆ. ಋಣದಲ್ಲಿ ತೋಯ್ದು ಹೋದ, ಸೋಲಿನಲ್ಲಿ ನಲುಗಿದ ಹಾಗೂ ಸೋಲನ್ನು ಗೆಲುವಾಗಿ ಮಾರ್ಪಡಿಸಿಕೊಂಡ ಆತ್ಮಕಥನಗಳು ಕಂಡುಬರುತ್ತವೆ.

ಪ್ರೇಮಾ ಕಾರಂತರ ಆತ್ಮಕಥೆ ಹೆಚ್ಚು ಆಧುನಿಕವಾದ 3ನೇ ಘಟ್ಟದ್ದು. ಈ ವರ್ಗದ ಆತ್ಮಕಥನಗಳು ಬಿಡುಗಡೆಯನ್ನು ಹೊರಗಿನಿಂದ ಬಯಸದೆ ತಮ್ಮ ಒಳಗಡೆಯಿಂದಲೇ ಪಡೆಯಬೇಕೆಂಬ ನಿಲುವು ಹೊಂದಿವೆ. ಪ್ರತಿಭಾ ಅವರ ಆತ್ಮಕಥನ ಈ ಸಾಲಿನದ್ದು. ಅದು ಸೃಷ್ಟಿಸುವ ರೋಚಕತೆ ಅನನ್ಯವಾದುದು.ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ‘ಅನುದಿನದ ಅಂತರಗಂಗೆ’ಯಂತಹ ಕೃತಿ ಇದೇ ಮೊದಲು. ಕನ್ನಡದಲ್ಲಿ ಮಹಿಳೆಯರ ಆತ್ಮಚರಿತ್ರೆಗಳು ಕಡಿಮೆ. ಕಮಲಾದಾಸ್ ಅವರ ‘ಮೈ ಸ್ಟೋರಿ’ ಭಾರತದ ಆಧುನಿಕ ಸಾಹಿತ್ಯದಲ್ಲಿ ದಿಟ್ಟ, ದಿವ್ಯ ನಿಲುವಾಗಿ ಸ್ತ್ರೀಲೋಕದ ವಿಚಾರವನ್ನು ತೆರೆದಿಟ್ಟಿತು. ಅನುದಿನದ ಅಂತರಗಂಗೆ ಕೂಡ ಮತ್ತೆ ಮತ್ತೆ ಕಮಲಾದಾಸ್ ಅವರನ್ನು ನೆನಪಿಸುತ್ತದೆ.’ಅನುದಿನದ ಅಂತರಗಂಗೆ’ಯ ಲೇಖಕಿ ಪ್ರತಿಭಾ ನಂದಕುಮಾರ ಹೀಗೆ ಮಾತನಾಡುತ್ತಾರೆ ಬೆಂಗಳೂರಿನ ಸಾಹಿತ್ಯದ ಇತಿಹಾಸದಲ್ಲಿ ಯಾರಿಗೂ ದಕ್ಕದ ಅಪರೂಪದ ಅನುಭವಗಳು ನನಗೆ ದಕ್ಕಿದವು. ಅವುಗಳನ್ನೆಲ್ಲ ಈ ಕೃತಿಯಲ್ಲಿ ಸೇರಿಸಿಲ್ಲ. ನನ್ನ ಬದುಕಿನ ಇನ್ನೊಂದು ಮಗ್ಗುಲನ್ನು ಮತ್ತೊಂದು ಕೃತಿಯಲ್ಲಿ ಕಟ್ಟಿಕೊಡುತ್ತೇನೆ ಎಂದು.ಹೀಗೆ ‘ಅಗ್ನಿ’ ವಾರಪತ್ರಿಕೆಯಲ್ಲಿ ತೊಡಗಿಸಿಕೊಂಡೇ ‘ಅನುದಿನ ಅಂತರಗಂಗೆ’ಯಂತೆಯೇ ಸಾಹಿತ್ಯಕವಾಗಿ ಸಾಕಷ್ಟು ಕೃತಿಗಳನ್ನು ಹೊರತಂದರು ಪ್ರತಿಭಾ ನಂದಕುಮಾರ್.ಇದಿಷ್ಟೇ ಹೇಳಿ ಪ್ರತಿಭಾ ನಂದಕುಮಾರ್ ಬಗೆಗಿನ ಈ ಮಾತು ಮುಗಿಸುತ್ತೇನೆ..!

# ಕೆ.ಶಿವು.ಲಕ್ಕಣ್ಣವರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *