local news…- ಸರೋಜಾ ಶೇಟ್ ನಿಧನ

ಸರೋಜಾ ಕೆ. ಶೇಟ ನಿಧನ
ಸಿದ್ದಾಪುರ-23 : ಸರೋಜಾ ಕಮಲಾಕರ ಶೇಟ ಹಾಳದಕಟ್ಟಾ ಅವರು (80) ದಿನಾಂಕ : 22 ರಂದು ರಾತ್ರಿ ನಿಧನ ಹೊಂದಿದರು.
ಪಟ್ಟಣದ ಶೇಟ್ ಮೆಡಿಕಲ್ಸ್ ಮಾಲಿಕ ಅನಿಲ ಶೇಟ್‍ರವರನ್ನು ಒಳಗೊಂಡು ಮೂವರು ಗಂಡು ಓರ್ವ ಹೆಣ್ಣುಮಗಳನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಸುದರ್ಶನ ವಿಜಯ ತಾಳಮದ್ದಳೆ ಸಂಪನ್ನ
ಮೂರ್ತವೂ ಅಮೂರ್ತವೂ ಏಕ ಕಾಲಕ್ಕೇ ಗೋಚರಿಸುವ ಅನ್ಯಾದೃಶ ಲೋಕವೊಂದನ್ನು ತೆರೆದಿಡುವ ಈ ತಾಳಮದ್ದಲೆ ಎಂಬ ಪ್ರದರ್ಶನಾ ಕಲಾ ಪ್ರಕಾರವು ಒಂದು ಅದ್ಭುತ ಮಾಧ್ಯಮವೇ ಹೌದು. ಸಂಸ್ಕಾರವನ್ನು ನೀಡುವ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸಿಕೊಳ್ಳುವ ಹೊಣೆ ನಮ್ಮೆಲ್ಲರದ್ಧಾಗಿದೆ ಎಂದು ವಿಜಯಕರ್ನಾಟಕ ಪತ್ರಿಕೆಯ ದಾವಣಗೆರೆ ಸ್ಥಾನಿಕ ಸಂಪಾದಕರಾದ ಸದಾನಂದ ಹೆಗಡೆ ಹರಗಿ ಹೇಳಿದರು.

ಅವರು ತಮ್ಮ ತಂದೆ ರಾಮಚಂದ್ರ ಹೆಗಡೆಯವರ ವರ್ಷಾಂತಿಕದ ನಿಮಿತ್ತ ಅಣ್ಣ ಗಣಪತಿ ಹೆಗಡೆಯವರ ಜತೆಗೂಡಿ ಹರಗಿಯ ಮನೆಯಲ್ಲಿ ಕಲಾಭಾಸ್ಕರ ಇಟಗಿಯರು ನಡೆಸಿದ ಸುದರ್ಶನ ವಿಜಯ ತಾಳಮದ್ದಳೆಯ ಸಮಾರೋಪದಲ್ಲಿ ಮಾತನಾಡುತ್ತಿದ್ದರು. ಬಿಟ್ಟು ಹೋದ ಪರಂಪರೆಯನ್ನು ಪುನಃ ಪ್ರಸಾರ ಮಾಡಿಕೊಳ್ಳಲು ನಮ್ಮನ್ನು ನಾವು ತೊಡಗಿಸಿಕೊಳ್ಳುವ ಉದ್ದೇಶಕ್ಕಾಗಿಯೇ ಈ ತಾಳಮದ್ದಳೆಯನ್ನು ಏರ್ಪಡಿಸಲಾಗಿದೆ. ಮನೆ ಮನೆಗಳಲ್ಲಿ ಸಮಾರಂಭಗಳಲ್ಲಿ ಬಂಧುಗಳನ್ನು ಆಹ್ವಾನಿಸಿ ಸತ್ಕಾರ ಮಾಡಿದಂತೆಯೇ ಇಂತಹ ಸಾಂಸ್ಕೃತಿಕ ಉಣಿಸನ್ನೂ ನೀಡಲು ಉದ್ಯುಕ್ತರಾದಾಗ ಮಾತ್ರ ಕಲೆಯೂ ಉಳಿಯುತ್ತದೆ. ಇಂತಹದ್ದೊಂದು ಅಭಿಯಾನವೇ ಆಗಬೇಕೆಂದರು.

ಕವಿ ಮಧುಕುಮಾರ ಬೋಳೂರು ರಚಿಸಿದ ಸುದರ್ಶನ ವಿಜಯ ಪ್ರಸಂಗವು ಸುಂದರವಾಗಿ ಸಾಕಾರವಾಯಿತು. ಏ.ಟಿ. ಯಜ್ಞೇಶ್ವರ ಸಾಗರ ಭಾಗವತಿಕೆಯಲ್ಲಿ ಶರತ್ ಹೆಗಡೆ ಜಾನಕೈ ಯವರ ಮದ್ದಳೆ ಸಾಥ್ ಅದ್ಭುತವಾಗಿಯೇ ಮೂಡಿಬಂತು. ವಿಷ್ಣುವಾಗಿ ಜಯರಾಮ ಭಟ್ಟ ಗುಂಜಗೋಡು ಸೊಗಸಾಗಿಗ ಪಾತ್ರವನ್ನು ನಿರ್ವಹಿಸಿದರು. ಲಕ್ಷ್ಮಿಯಾಗಿ ಇಟಗಿ ಮಹಾಬಲೇಶ್ವರ ಭಟ್ಟ ಅಚ್ಚುಕಟ್ಟಾಗಿ ತಮ್ಮ ಅನುಭವವನ್ನು ತೆರೆದಿಟ್ಟರು. ಬಿ.ಟ. ಅರುಣ ಸಾಗರ ಸುದರ್ಶನನಾಗಿ ವಿಜೃಂಭಿಸಿದರು. ಕವಲಕೊಪ್ಪ ವಿನಾಯಕ ಶತ್ರುಪ್ರಸೂನನಾಗಿ ಖಳಪಾತ್ರದ ಸಾಧ್ಯತೆಗಳನ್ನು ಅನಾವರಣಗೊಳಿಸಿದರು. ದೇವೇಂದ್ರನಾಗಿ ಗಣಪತಿ ಗುಂಜಗೋಡು ಇ ಕಾಣಿಸಿಕೊಂಡರು. ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಸ್ವಾತಂತ್ರ್ಯ ಉಳಿಸಿಕೊಳ್ಳಲು ಸಾಮಾನ್ಯನೊಬ್ಬನ ಎರಡು ಹೆಜ್ಜೆಗಳು

  • ಡಿ. ರಾಮಪ್ಪ ಸಿರಿವಂತೆ.
    ಸ್ವಾತಂತ್ರ್ಯ ಮತ್ತು ನೈತಿಕತೆಯ ದೃಷ್ಠಿಯಂದ, ಭಾರತ ಒಂದು ಸಂಕಷ್ಟದ ಸ್ಥಿತಿಯಲ್ಲಿದೆ ಎಂಬುದನ್ನು ನಾಗರೀಕರಾದ ನಾವೆಲ್ಲರೂ ಅರಿತಿದ್ದೇವೆ. ಆದರೆ, ಈ ಬಿಕ್ಕಟ್ಟಿನಿಂದ ದೇಶವನ್ನು ಪಾರುಮಾಡಲು ಸಾಮಾನ್ಯರಾದ ನಾವು ಅಸಹಾಯಕರು ಎಂದೂ ಅಂದುಕೊಂಡಿದ್ದೇವೆ. ಏಕೆಂದರೆ, ಸರ್ಕಾರ ಎಂಬ ವ್ಯವಸ್ಥೆ, ವಿರೋಧವನ್ನು ಹೊಸಕಿಹಾಕಬಲ್ಲ ಮನಸ್ಥಿತಿಯ ಮತ್ತು ಬಲಿಷ್ಠ, ಕಪಿಮುಷ್ಟಿಯ ಕೈಯಲ್ಲಿ ಇರುವಾಗ, ಹೀಗೆಂದುಕೊಳ್ಳುವುದು ಸಹಜ. ಅದರೊಟ್ಟಿಗೆ, ಅಧಿಕಾರದಲ್ಲಿರುವವರಿಗೆ ಸ್ವಾರ್ಥ ಮತ್ತು ಸ್ವಜನ ಪಕ್ಷಪಾತದ ರಾವು ಹಿಡಿದರೆ ನಮ್ಮ ಅಸಹಾಯಕತೆಯ ಅರ್ಥ ತಿಳಿಯುತ್ತದೆ. ಆದರೆ ಇದು ಸರಿಯೇ? ಈಗಿರುವ ವ್ಯವಸ್ಥೆಯಲ್ಲಿಯೇ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ನಾವು ಎಚ್ಚರವಹಿಸಿದರೆ, ನಮ್ಮ ಕೈಲಾದ ಏನಾದರೂ ಮಾಡಬಹುದೆ?

ಸರ್ಕಾರ ಮತ್ತು ನಾಗರೀಕರ ಮಧ್ಯೆಯ ಭಿನ್ನಾಭಿಪ್ರಾಯ ಎಲ್ಲಾ ಕಾಲಕ್ಕೂ ಇರುವಂತದೆ. ಆದರೆ, ಸಂಧಿಕಾಲದ ಈ ದಿನಗಳು ಆತಂಕದಿಂದ ಕೂಡಿವೆ. ಉದಾಹರಣೆಗೆ, ಸ್ವತಂತ್ರ ಸುದ್ದಿ ಮಾಧ್ಯಮಗಳನ್ನು ನಿರ್ವೀರ್ಯಗೊಳಿಸುವುದು ಮತ್ತು ಆ ಮೂಲಕ, ತಟಸ್ಥಗೊಳಿಸುವುದು ಹೇಗೆ ಎಂಬ ಬಗ್ಗೆ ಮಾರ್ಗಸೂಚಿಯನ್ನು ಕೇಂದ್ರ ಮಂತ್ರಿಗಳ ಗುಂಪೊಂದು 2020ರಲ್ಲಿ ರೂಪಿಸಿತು. ಇದಕ್ಕಾಗಿ 2020ರ ಜೂನ್-ಜುಲೈ ಮಧ್ಯೆ ಆರು ಬಾರಿ ಸಭೆ ಸೇರಿ ಚರ್ಚಿಸಿತು! ವಿಪರ್ಯಾಸ ಎಂದರೆ, ಕೊವಿಡ್ ಸಾಂಕ್ರಾಮಿಕ ಉತ್ತುಂಗದಲ್ಲಿದ್ದಾಗಲೇ ಇದೊಂದು ತೀರಾ ಮುಖ್ಯ ಮತ್ತು ತುರ್ತಿನ ಕೆಲಸವೆಂದು ಸರ್ಕಾರ ತಿಳಿದಿತ್ತು! ಈ ಚರ್ಚೆಯ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲು, 2020ರ ಡಿಸೆಂಬರ್ 3ರಂದು, ಒಂದು ಕ್ರಿಯಾಯೋಜನೆ ರೂಪಿಸಿ ಎಲ್ಲ ಮಂತ್ರಿಗಳಿಗೂ ಸರ್ಕಾರ ಹಂಚಿತು. ಇದರ ಪರಿಣಾಮವಾಗಿ, ಸುದ್ದಿ ಮಾಧ್ಯಮದ ಮಧ್ಯವರ್ತಿಗಳಿಗೆ ವ್ಯಾಪಕವಾದ ಹೊಸ ಮಾರ್ಗಸೂಚಿಗಳ ಅಧಿಸೂಚನೆಯನ್ನು ಹೊರಡಿಸಿತು. ‘ಸುದ್ದಿಗಳ ತಪ್ಪು ಬಳಕೆ ಮತ್ತು ದುರುಪಯೋಗಕ್ಕೆ,‘ ಸಾಮಾಜಿಕ ಮಾಧ್ಯಮಗಳನ್ನು ಮತ್ತು ಸುದ್ದಿ ಪ್ರಕಾಶಕರನ್ನು ಹೊಣೆಗಾರರನ್ನಾಗಿಸಲು ಇದು ಅವಶ್ಯ ಎಂದು ಹೇಳಿತು. ಇದನ್ನು, ‘ಸಾಫ್ಟ್ ಟಚ್ ಓವರ್ಸೈಟ್’ – ‘ಮೃದು ಸ್ಪರ್ಶ ಮೇಲ್ವಿಚಾರಣೆ’ – ಎನ್ನುತ್ತಾರೆ. ‘ಸುದ್ದಿಗಳ ತಪ್ಪು ಬಳಕೆ ಮತ್ತು ದುರುಪಯೋಗ’ ಎಂದರೆ ಏನು? ವಸ್ತುನಿಷ್ಟವಲ್ಲದ ಬಳಕೆ ಎಂದೆ ಅಥವಾ ಸರ್ಕಾರಕ್ಕೆ ಮುಜುಗುರ ತರುವಂತಹದ್ದು ಎಂದೆ?

ಸರ್ಕಾರ ಇರಲಿ, ಸಂಸ್ಥೆಗಳಿರಲಿ ಅಥವಾ ನಾಗರಿಕನಿರಲಿ – ಎಲ್ಲರೂ – ತಮ್ಮ ನ್ಯಾಯಯುತ ಮತ್ತು ನೈತಿಕವಾದ ಹಿತಾಸಕ್ತಿಗೆ ವಿರುದ್ಧವಾದ ಜನ/ಗುಂಪು/ಸಂಸ್ಥೆಗಳಿಂದ ತೊಂದರೆಯಾಗದಂತೆ ಕಾಪಾಡಿಕೊಳ್ಳಬೇಕು. ಇಂತಹ ಒಂದು ಮನೋಭೂಮಿಕೆಯನ್ನು ಚುನಾಯಿತ ಸರ್ಕಾರದಿಂದ ನಾಗರಿಕ ಸಮಾಜ ಆಶಿಸುತ್ತದೆ. ಸಮಾಜದ ಕಾನೂನುಬದ್ಧ ಹಕ್ಕಾದ, ಉತ್ತಮ ಆಡಳಿತ ಮತ್ತು, ಸಾಂವಿಧಾನಿಕ ಮೌಲ್ಯಗಳನ್ನು ನಾಶ ಮಾಡಲು ಪ್ರಯತ್ನಿಸುವ ಜನ ಮತ್ತು ಸಂಸ್ಥೆಗಳನ್ನು ಹಿಡಿತದಲ್ಲಿಡಲು ತುರ್ತು ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು.

ಆದರೆ ಇಲ್ಲಿ, ರಕ್ಷಣೆ ಮಾಡಬೇಕಾದ ಸರ್ಕಾರವೇ – ತನ್ನ ಸ್ಥಾನಮಾನಕ್ಕೆ ಎದುರಾದ ತೊಂದರೆ ಎಂದು – ಸಾರ್ವಜನಿಕ, ಚರ್ಚೆ-ವಿಮರ್ಶೆ, ಮತ್ತು ವಿರೋಧವನ್ನು ಹತ್ತಿಕ್ಕಲು ಅದನ್ನು ದುರುಪಯೋಗಪಡಿಸಿಕೊಂಡರೆ? ಇದರೊಟ್ಟಿಗೆ, ಬಡಜನರಾದ ನಾವೇನೂ ಮಾಡಲಾಗದು ಎಂಬ ಮನಸ್ಥಿತಿ ನಮ್ಮಲ್ಲಿದೆ. ಸ್ವಾತಂತ್ರ್ಯ ಕೈತಪ್ಪಿಹೋಗಬಹುದಾದ ಇಂತಹÀ ಗಂಭೀರ ಪರಿಸ್ಥತಿಯಲ್ಲಿ ನಾವಿದ್ದರೂ, ಈ ನೈತಿಕ ಅಧಃಪತನದಿಂದ ಹೊರಬರಲು ತಾವೇನು ಮಾಡಲಾಗದ ಅಸಹಾಯಕರು ಎಂದು ನಾವು ತಿಳಿದಿದ್ದೇವೆ. ನಮ್ಮ – ನಿಮ್ಮ ಮನಸ್ಥಿತಿಯ ಈ ಬಿಕ್ಕಟ್ಟಿಗೆ ಪರಿಹಾರ ಏನು?……………

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *