b.v nayak- ನಿಜ ನಾಯಕ ಬಿ.ವಿ. ನಾಯಕ!

ಒಬ್ಬ ನಾಯಕನಿದ್ದ ಆತ ಉತ್ತರ ಕನ್ನಡದ ಮೊಟ್ಟಮೊದಲ ಸ್ಥಳಿಯ ಜಿಲ್ಲಾಧಿಕಾರಿಗಳ ಮಗ!

ಅವರು ಓದಿದ್ದು ಅಮೇರಿಕಾದಲ್ಲಿ ಜಿಲ್ಲೆಯ ಹೆಗ್ಗಳಿಕೆಯ ಸಹಕಾರಿ ಕ್ಷೇತ್ರದ ಬಗ್ಗೆ ವಿದೇಶದಲ್ಲಿ ಓದಿದ್ದ ಆ ಹುಡುಗ ಕೆಲವು ಕಾಲ ರಾಯಚೂರಿನಲ್ಲಿ ಸರ್ಕಾರಿ ಅಧಿಕಾರಿಯ ಕೆಲಸಮಾಡಿದ್ದರಂತೆ. ನಂತರ ಒಂದೇ ಒಂದು ಅವಧಿಗೆ 1971ರಿಂದ 76 ಕೆನರಾ ಕ್ಷೇತ್ರದ ಲೋಕಸಭಾ ಸದಸ್ಯರಾದರು. ಅನುಭವ, ಶಿಕ್ಷಣದ ಆಧಾರದಲ್ಲಿ ಕೇಂದ್ರ ಮಂತ್ರಿಯಾಗಬೇಕಿದ್ದವರು ಮೋಸಹೋದರು.ಅವರ ಸಚಿವಗಿರಿ ಕೈ ತಪ್ಪಿ ಹೋಯಿತು. ನಂತರ ಲೋಕಸಭಾ ಸದಸ್ಯತ್ವ.

ಈ ನಿಜನಾಯಕನ ಜೀವನದ ಪಯಣದ ಮೊದಲರ್ಧ ಇದಾದರೆ…. ನಂತರ ಲೊಕೇಶನ್ ಬದಲು.

ಮಾಜಿ ಎಂ.ಪಿ. ಯಾಗಿ ಬಂಕಿಕೊಡ್ಲು ಹನೇಹಳ್ಳಿಯ ಹಳ್ಳಿಮನೆ ಸೇರಿದ ಈ ನಾಯಕ ಸೈಕಲ್ ತುಳಿಯುತ್ತಾ, ಹಸು-ಎಮ್ಮೆ ಸಾಕುತ್ತಾ ಗೋಕರ್ಣ ಬೀದಿಯಲ್ಲಿ ಹಾಲು ಮಾರತೊಡಗುತ್ತಾರೆ. ಕೃಷಿ,ಸಾಹಿತ್ಯ,ರಾಜಕಾರಣದ ವ್ಯವಸಾಯದಲ್ಲಿ ತೊಡಗುವ ಘಾಟಿ ಬಾಲಕೃಷ್ಣ ನಾಯಕ ಪತ್ರಿಕೆ ಹೊರಡಿಸುತ್ತಾರೆ. ಚುನಾವಣೆಗಳಲ್ಲಿ ಸ್ಫರ್ಧಿಸಿ ಏಕಾಂಗಿಯಾಗಿ ಕಾರ್ ಏರಿ ಮೈಕ್ ಹಿಡಿದು ಭಾಷಣ ಜಡಿಯುತ್ತಾರೆ. ಹೀಗೆ ತುಸು ವಿಚಿತ್ರವಾಗೇ ಕಾಣುವ ಬಾಲಕೃಷ್ಣ ನಾಯಕ ಬರೆಯತೊಡಗಿದರು, ಕೊರೆಯ ! (ಭಾಷಣ) ತೊಡಗಿದರೆಂದರೆ ದಕ್ಷಿಣ- ಉತ್ತರ ಒಂದಾಗಬೇಕು. ಅಂಥ ಪಾಂಡಿತ್ಯ, ಮಾಹಿತಿ,ನೆನಪು.

ಇಂಥ ಮಾಜಿ ಎಂ.ಪಿ. ಬಿ.ವಿ.ನಾಯಕ ಕರಾವಳಿ ಮುಂಜಾವು ಪತ್ರಿಕೆಯ, ಅಂಕಣ,ಸಾಂಗತ್ಯದಿಂದ ತೀರಾ ಹತ್ತಿರವಾದರು.

ಒಂದು ದಿನ ಅವರ ಮನೆಗೆ ಹೋಗಿದ್ದಾಗ ಬಿ.ವಿ.ನಾಯಕ ಓದುತ್ತಾ ಕೂತಿದ್ದರು. ಅವರ ಮೊಮ್ಮಗನ ವಯಸ್ಸಿನ ನನಗೆ ನಾಯ್ಕರಿಗೆ ನಮಸ್ಕಾರ ಜಯವಾಗಲಿ ಬರಬೇಕು ಎಂದರು. ಅದೇ ಧಾಟಿಯಲ್ಲಿ ತಮ್ಮ ಹೆಂಡತಿಗೆ ಮೆಡಂ ನಾಯ್ಕರಿಗೆ ಟೀ..ಗಂಜಿ ಏನು ಕೊಡಬಹುದು ಎಂದರು.

ಅದೇ ಮಾತನ್ನೇ ಮುಂದುವರಿಸಿ ನಿಮಗೆ ಸಮಯ ಉಂಟಲ್ಲಾ ಟೀ..ಊಟ, ಮಾತು- ಕತೆಗೆ ಎಂದರು. ನಾನಾಗ ಮೂಕವಿಸ್ಮಿತ.

ಸಿನೆಮಾದ ಫ್ಲಾಶ್ ಬ್ಯಾಕ್ ನಂತೆ ಅವರ ಅಪ್ಪ ಡಿ.ಸಿ. ವೆಂಕಣ್ಣ ನಾಯಕ, ಇವರ ಅಮೇರಿಕಾದ ಸಹಕಾರಿ ಶಿಕ್ಷಣ, ಒಂದವಧಿಯ ಲೋಕಸಭಾ ಸದಸ್ಯತ್ವ ಇಂದಿರಾ ಮತ್ತು ಅವರ ರಾಜಕೀಯದ ಬಗ್ಗೆ ಇವರೇ ಬರೆದ long long way to go!

ಎಲ್ಲಾ ನೆನಪಾಗಿ ಹನೇಹಳ್ಳಿಯ ಆ ಉರಿಬಿಸಿಲಿನ ಸೆಕೆಯ ನಡುವೆ ತಂಗಾಳಿಯಂಥ ತಂಪು ನನ್ನ ಮನ ತಟ್ಟಿತು. ಇಲ್ಲಿಂದ ಅಂದು ನಾವು ಕೂತು ಮಾತನಾಡಿದ ಆ ಕರಿಇಸಾಡು ಮಾವಿನ ಮರದ ಬುಡದಲ್ಲಿ ಬಿ.ವಿ.ನಾಯಕಸ್ಥಾವರ ಆಗುವ ವರೆಗೆ ನಮ್ಮ ಸಂಪರ್ಕ-ಸಂಬಂಧ ಮುಂದುವರಿಯಿತು. ಈಗ ಬಿ.ವಿ.ನಾಯಕ ನೆನಪು ಮಾತ್ರ. ಆದರೆ ಆ ವ್ಯಕ್ತಿಯ ಸಹಜತೆ, ಸಾಧನೆ,ತಿಕ್ಕಲುತನ ಎನ್ನಬಹುದಾದ ಬದ್ಧತೆ, ಕಠಿಣಜವಾರಿತನ ಅವುಗಳಿಗೆ, ಅವರಿಗೆ ಅವರು ಮಾತ್ರ ಸಾಟಿ, ಹೋಲಿಕೆ……..( ಮುಂದುವರಿದಿದೆ….)

ಸಂದರ್ಶನದ ನನ್ನ ಪ್ರಶ್ನೆಗೆ ಅವರ ಉತ್ತರ…… ಸರ್ ನೀವ್ಯಾಕೆ ಬ್ರಷ್ಟರಾಗಲಿಲ್ಲ…

ಬಿ.ವಿ.ನಾಯಕ……ಹೇಡಿ ನಾನು . ಅದಕ್ಕೂ ಧೈರ್ಯ ಬೇಕು….i am unabale to do it. you don,t think iam able… non corrupt, pure…!

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *