

ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಹಂಗಾರಕಂಡದ ಯುವಕ ಸಂದೀಪ ನಾಯ್ಕ ಸಾವು ಈಗ ಬೇರೆಯದೇ ಕಾರಣಕ್ಕೆ ಚರ್ಚೆಯ ವಿಷಯವಾಗಿದೆ.
ಹಂಗಾರಕಂಡದ ಸಂದೀಪ ನಾರಾಯಣ ನಾಯ್ಕ ಜಾರ್ಕಂಡ ಬರ್ರಿ ಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾಗಿದ್ದರು. ಅವರ ಪಾರ್ಥಿವ ಶರೀರ ಶುಕ್ರವಾರ ಬೆಳಿಗ್ಗೆ ಸ್ವಗ್ರಾಮಕ್ಕೆ ಬಂದು ಮಧ್ಯಾಹ್ನದ ವೇಳೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.


ಸಂದೀಪನಾಯ್ಕ ಹಿತೈಶಿಗಳು,ಜಿಲ್ಲಾಡಳಿತ, ಸೇನೆಯ ಸಿಬ್ಬಂದಿಗಳು ಉಪಸ್ಥಿತರಿದ್ದು ಅಂತಿಮ ಕ್ರೀಯಾವಿಧಿ ನೆರವೇರಿಸಿದ್ದರು. ಈ ಸಮಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಸೇರಿದಂತೆ ಕೆಲವು ಪ್ರಮುಖರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಆದರೆ ಈ ಯೋಧನ ಪಾರ್ಥಿವಶರೀರ ದರ್ಶನ ಮತ್ತು ಅಂತ್ಯ ಸಂಸ್ಕಾರದ ವೇಳೆ ಸ್ಥಳಿಯ ಪ್ರಮುಖ ರಾಜಕೀಯ ನಾಯಕರು ಜನಪ್ರತಿನಿಧಿಗಳಾದ ತಾಲೂಕು ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಸ್ಥಳಿಯ ಶಾಸಕರು ಮತ್ತು ಸಂಸದರು ಬಾರದೆ ಸೇನೆ, ಸೈನಿಕನಿಗೆ ಅವಮಾನ ಮಾಡಿದ್ದಾರೆಂಬ ಬಗ್ಗೆ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರೀಯಿಸಿರುವ ಕಾಂಗ್ರೆಸ್ ಸೇನೆ ಸೈನಿಕನಿಗೆ ಅವಮಾನ ಮಾಡಿದ ಪ್ರಮುಖ ವ್ಯಕ್ತಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪೋಸ್ಟ್ ಹರಿಬಿಡುತ್ತಿರುವ ಸ್ಥಳಿಯ ಯುವಕರು ಶಿರಸಿಯಲ್ಲಿದ್ದು ಕೊಂಡ್ಲಿ ಜಾತ್ರೆಗೆ ಬೆಂಬಲಿಗರೊಂದಿಗೆ ಬರುವ ಜನಪ್ರತಿನಿಧಿಗಳಿಗೆ ಮಾರ್ಗ ಮಧ್ಯದಲ್ಲಿ ನಡೆಯುತ್ತಿದ್ದ ಸೈನಿಕನ ಅಂತ್ಯ ಸಂಸ್ಕಾರ ಬೇಡದ ವಿಚಾರವಾಯಿತೆ ಎಂದು ಪ್ರಶ್ನಿಸಿದ್ದಾರೆ.
ಜವಾಬ್ಧಾರಿಯುತ ಜನಪ್ರತಿನಿಧಿಗಳು ಯೋಧರು, ಸೇನೆಯ ಬಗ್ಗೆ ಗೌರವ, ಆದರ ಹೊಂದಿರಬೇಕು ಆದರೆ ವೇದಿಕೆ ಮೇಲೆ ದೇಶಪ್ರೇಮದ ಭಾಷಣ ಮಾಡುವವರು ಸೈನಿಕನ ಪಾರ್ಥಿವ ಶರೀರವನ್ನೂ ನೋಡದೆ ಜಾತ್ರೆ ಮಾಡುವುದೆಂದರೆ…. ಅದು ಯೋಧರಿಗೆ ಸೇನೆಗೆ ಮಾಡುವ ಅವಮಾನ ಸಂಸದ ಶಾಸಕರಿಗೆ ನೈತಿಕ ಜವಾಬ್ಧಾರಿ ಇದ್ದರೆ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು.- ಭೀಮಣ್ಣ ನಾಯ್ಕ (ಡಿ.ಸಿ.ಸಿ. ಅಧ್ಯಕ್ಷರು)
ಸೈನಿಕ ಮೃತನಾಗಿ ಅಂತಿಮ ಯಾತ್ರೆ ನಡೆಯುತಿದ್ದಾಗ ಅದೇ ಮಾರ್ಗದಲ್ಲಿ ಬಂದ ಸಂಸದ ಶಾಸಕರು ಸೌಜನ್ಯಕ್ಕೂ ಮೃತರ ಪಾರ್ಥಿವ ಶರೀರ ದರ್ಶನ ಮಾಡದಿರುವುದು, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳದಿರುವುದು ಜನಪ್ರತಿನಿಧಿಗಳು, ನಾಯಕತ್ವಕ್ಕೆ ಶೋಭೆಯಲ್ಲ. ಜನಪ್ರತಿನಿಧಿಗಳಾಗಿ ಪಕ್ಷಪಾತ, ಜಾತೀಯತೆ ಮಾಡಿದ ಸಂಸದರು, ಶಾಸಕರು ಇದಕ್ಕೆ ಬೆಲೆ ತೆರಬೇಕಾಗುತ್ತದೆ. ಈಗಲೂ ಕ್ಷಮೆ ಕೇಳಿ, ನೈತಿಕತೆ, ಜವಾಬ್ಧಾರಿ ಇದ್ದರೆ ರಾಜೀನಾಮೆ ನೀಡಿ. – ವಸಂತ ನಾಯ್ಕ ಮಳಲವಳ್ಳಿ ( ಸಿದ್ಧಾಪುರ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ)
