ಎಲ್ಲವೂ ಮಾ..ಮೂ..ಲು…. ಇದು ಮಾಜಿ ಸಚಿವ, ನಾಯಕ ನಟನ ಹೊಸ ಹಾಡು!

ಯಡಿಯೂರಪ್ಪ ನವರ ವಿರುದ್ಧ ಈಶ್ವರಪ್ಪ ಸಮರ ಸಾರಿದಂತಿದೆ… ನೋ.. ಯುದ್ಧ, ಸಮರ ಏನಿಲ್ಲ ಇದೆಲ್ಲ ಮಾಮೂಲು ಯಾವ ಕಾಲದಲ್ಲಿ ಆಗಿಲ್ಲ ಹೇಳಿ ದೊಡ್ಡ ಸಾಯಬರ (ಬಂಗಾರಪ್ಪ) ಹೆಸರು ಗೋಪಾಲಗೌಡ ಹೇಳಿದಾಗ ಬೇರೆಯವರು ವಿರೋಧ ಮಾಡಿಲ್ಲವೆ. ಆಯಾ ಕಾಲದಲ್ಲಿ ಆಯಾ ಕಾಲದನಾಯಕರಿಗೆ ವಿರೋಧ,ಭಿನ್ನಮತ, ಬಂಡಾಯ ಎಲ್ಲವೂ ಮಾಮೂಲೇ.

ನೀವು..ಮಂತ್ರಿಯಾಗಲಿಲ್ಲ ಸೊರಬಾಕ್ಕೆ ಸೀಮಿತ ಆಗಿಬಿಟ್ಟಿರಾ… ಇಲ್ಲ ಸಚಿವನಾಗುವುದು,ಕೆಲಸಮಾಡುವುದು,ಅಧಿಕಾರ ಇವೆಲ್ಲಾ ಒಂದಕ್ಕೊಂದು ಪೂರಕ ಮತ್ತು ಪೂರಕ ಅಲ್ಲ ಕೂಡಾ…. ಮುಖ್ಯಮಂತ್ರಿಗಳೇ ನಮ್ಮ ಜಿಲ್ಲೆಯವರು, ಹಿರಿಯರು ಸಚಿವ ಈಶ್ವರಪ್ಪ ಇದ್ದಾರೆ. ಎಲ್ಲರ ಸಹಕಾರದಿಂದ ಕೆಲಸ ಮಾಡ್ತಾ ಇದ್ದೇನೆ. ಸೊರಬಾಕ್ಕೆ ಸೀಮಿತ ಅಂತಲ್ಲ,ಸೊರಬಾದಲ್ಲೂ ಕೆಲಸ ಮಾಡಲು ಅವಕಾಶ, ಸ್ಕೋಪ್, ಸ್ಫೇಸ್ ಎಲ್ಲಾ ಇದೆ. ನಾನಂತೂ ಸುರಕ್ಷಿತವಾಗಿದ್ದೇನೆ.

ಇದು ಮಾಜಿ ನಟ, ಮಾಜಿ ಸಚಿವ ಶಾಸಕ ಕುಮಾರ ಬಂಗಾರಪ್ಪ ಮಾತು. ಕೊಂಡ್ಲಿ ಜಾತ್ರೆ ನಿಮಿತ್ತ ಸಿದ್ಧಾಪುರಕ್ಕೆ ಬಂದಿದ್ದ ಸೊರಬದ ಸರದಾರ ಕುಮಾರ ಬಂಗಾರಪ್ಪ ರಾಜ್ಯ ಬಿ.ಜೆ.ಪಿ. ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕರ ಮನೆಯಲ್ಲಿ ಮಾತಿಗೆ ಸಿಕ್ಕಿದ್ದರು. ಒಂದರ್ಧಗಂಟೆ ಕಾಲ ನಮ್ಮೊಂದಿಗೆ ಮಾತನಾಡಿದ ಕುಮಾರ ಬಂಗಾರಪ್ಪಸೊರಬಾದಿಂದ ಪ್ರಾರಂಭವಾಗಿ ರಾಜ್ಯ, ದೇಶದ ವಿದ್ಯಮಾನಗಳ ಬಗ್ಗೆ ಹರಟಿದರು. ಅವರ ಜೊತೆಗಿನ ಮಾಮೂಲಿ ಮಾತುಕತೆಯನ್ನು ಸಮಾಜಮುಖಿ ಗೃಹಿಸಿದ್ದು ಹೀಗೆ.

ಕ- ಶಿರಸಿ, ಶಿಕಾರಿಪುರ ಪ್ರತ್ಯೇಕ ಜಿಲ್ಲೆಗಳ ಬಗ್ಗೆ ನಿಮ್ಮ ಅಭಿಪ್ರಾಯ? ಕು.ಬಂ.- ಅಗತ್ಯ ಏನಿಲ್ಲ. ಶಿಕಾರಿಪುರ ಜಿಲ್ಲೆಯ ಪ್ರಸ್ಥಾಪ ನಮ್ಮ ಮುಂದಿಲ್ಲ ಎಂದು ಮುಖ್ಯಮಂತ್ರಿಗಳೇ ಸ್ಫಷ್ಟ ಪಡಿಸಿದ್ದಾರೆ. ಅಖಂಡ ಶಿವಮೊಗ್ಗ ಜಿಲ್ಲೆ ಹಾಗೇ ಉಳಿಯಲಿದೆ. ಶಿರಸಿ ಕೂಡಾ ಜಿಲ್ಲೆಯಾಗಬೇಕೆಂದೇನಿಲ್ಲ. ದೂರ ಎಂದು ರಾಷ್ಟ್ರಕ್ಕೆ ಇನ್ನೊಂದು ರಾಜಧಾನಿ ಮಾಡಲು ಸಾಧ್ಯವೆ? ಬೀದರ್, ಗುಲಬರ್ಗಾ ಬೆಂಗಳೂರಿಗೆ ಬಹಳ ದೂರದಲ್ಲಿವೆ ಅದೇ ಕಾರಣದ ಮೇಲೆ ರಾಜ್ಯ, ದೇಶದ ರಾಜಧಾನಿಗಳನ್ನು ಪ್ರತ್ಯೇಕಿಸಬೇಕಿಲ್ಲ. ಆಡಳಿತಾತ್ಮಕ ಅನುಕೂಲಕ್ಕೆ ಬೇರೆ ಸಾಧ್ಯತೆಗಳಿವೆ. ಜನರ ಭಾವನೆಗೆ ನನ್ನ ಗೌರವವಿದೆ. ಆದರೆ ವಾಸ್ತವ, ಆದ್ಯತೆ ಎಲ್ಲವೂ ಬೇರೆ, ಬೇರೆ. ಕರಾವಳಿ ದೂರ ಎಂದು ಶಿರಸಿ ಪ್ರತ್ಯೇಕ ಜಿಲ್ಲೆ ಬೇಡಿಕೆ ಇದೆ. ಇದು ಬಹಳ ಹಳೆಯ ಬೇಡಿಕೆ.

ಕ-ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಬಗ್ಗೆ… ಕು.ಬಂ.- ಕರ್ನಾಟಕ ಸಾರಿಗೆ ವ್ಯವಸ್ಥೆ ಸೇವೆಯಂತಿದೆ. ಇದು ಸೇವಾಸಂಸ್ಥೆ, ಸೇವಾ ಉದ್ದೇಶದಿಂದಲೇ ಇರಬೇಕು. ಇದನ್ನು ಖಾಸಗೀಕರಣ ಮಾಡಿದರೆ ಅಲ್ಲಿ ಸೇವಾ ಮನೋಭಾವ ಹುಡಕಬೇಕಷ್ಟೇ. ಸಾರಿಗೆ ಸಂಸ್ಥೆ ನೌಕರರ ಬೇಡಿಕೆ ಕೂಡಾ ತಪ್ಪಲ್ಲ. ಆದರೆ ಇದು ಸಮಯವಲ್ಲ. ರಾಜ್ಯ ಕೋವಿಡ್ ನಿಂದ ತತ್ತರಿಸಿದೆ. ಸರ್ಕಾರದ ಬಳಿ ಹಣವಿಲ್ಲ,ಶಾಸಕರ ಅನುದಾನ ಬಿಡುಗಡೆಯಾಗಿಲ್ಲ ಪರಿಸ್ಥಿತಿ ಅರ್ಥಮಾಡಿಕೊಂಡು ನಾವು ಸ್ಪಂದಿಸಬೇಕು.ರಾಜ್ಯ,ಸರ್ಕಾರ, ಜನತೆ ಎಲ್ಲವೂ, ಎಲ್ಲರೂ ಸಂಕಷ್ಟದಲ್ಲಿದ್ದೇವೆ ವ್ಯವಸ್ಥೆ ಸುಧಾರಿಸಬಹುದು.

ಕ.- ದೇಶ, ರಾಜ್ಯಾದ್ಯಂತ ಎಲ್ಲೆಡೆ ಮುಷ್ಕರ, ಪ್ರತಿಭಟನೆ ವಿರೋಧ ವ್ಯಕ್ತವಾಗುತ್ತಿದೆಯಲ್ಲ.. ಕು.ಬಂ.-ಸರಿ ಪ್ರತಿಭಟನೆ ಜನರ ಹಕ್ಕು,ಜನರ ಧ್ವನಿ-ಬೇಡಿಕೆ ಕೇಳಬೇಕು ಆದರೆ ಇವೆಲ್ಲಕ್ಕೂ ಈಗ ಸಮಯವಲ್ಲ

ಕ- ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ.ಅದು ನಿಮಗೆ ಹೇಗೆ ಮಾರಕ-ಪೂರಕ ಆಗಬಹುದು ಕು.ಬಂ- ಇನ್ನೂ ಸಮಯವಿದೆ ಚುನಾವಣೆ ಬರುತ್ತಲೇ ಇಲ್ಲಿದ್ದವರು, ಅಲ್ಲಿಗೆ ಅಲ್ಲಿದ್ದವರು ಇಲ್ಲಿಗೆ ಬರಬಹುದು ನೋಡೋಣ. ಈ ಪಕ್ಷಾಂತರ ನಿಷೇಧ ಮಾಡಲೇ ಒಂದು ದೇಶ, ಒಂದು ಚುನಾವಣೆ ವಿಚಾರ ಚರ್ಚೆಯಾಗುತ್ತಿದೆ. ಚುನಾವಣಾ ವ್ಯವಸ್ಥೆ ಬದಲಾಗುವುದು, ಎರಡು ಪಕ್ಷಗಳ ಚುನಾವಣೆ ವ್ಯವಸ್ಥೆ ಜಾರಿಯಾಗುವುದು ಇವೆಲ್ಲಾ ಸಾಧ್ಯತೆಗಳು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *