

ಮುಂಡಗೋಡು ತಾಲೂಕಿನ ಸನವಳ್ಳಿ ಬಳಿ ಮೇಯಲು ಹೋದ ಎತ್ತು ನಾಡಬಾಂಬ್ ತಿನ್ನಲು ಹೋಗಿ ತೀವೃಗಾಯಗೊಂಡ ಘಟನೆ ನಡೆದಿದೆ. ಇದರಿಂದಾದ ತೀವೃತರ ಗಾಯದಿಂದಾಗಿ ಎತ್ತು ನೀರು-ಆಹಾರ ಸೇವಿಸದ ಸ್ಥಿತಿಯಲ್ಲಿದೆ. ಸನವಳ್ಳಿಯ ನಾರಾಯಣ ನಾಯರ್ ಎನ್ನುವ ರೈತಿಗೆ ಸೇರಿದ ಎತ್ತು ಇದಾಗಿದೆ. ಕಾಡುಪ್ರಾಣಿ ಭೇಟೆ ಮಾಡುವ ಜನರು ಈ ನಾಡಬಾಂಬ್ ಇಟ್ಟಿರುವ ಸಾಧ್ಯತೆಯಿದ್ದು ಇದೇ ಭಾಗದ ಅರಣ್ಯದಲ್ಲಿ ಮತ್ತೊಂದು ಸಜೀವ ಬಾಂಬ್ ಪತ್ತೆಯಾಗಿರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ.
ಸಂಸದ ಅನಂತ ಹೆಗಡೆಯವರಿಗೆ ಜೀವ ಬೆದರಿಕೆ- ಉತ್ತರ ಕನ್ನಡ ಸಂಸದ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರಿಗೆ ಜೀವಬೆದರಿಕೆಯ ಕರೆಯೊಂದು ಬಂದಿರುವ ಬಗ್ಗೆ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದೆ. ಅನಾಮಧೇಯ ವ್ಯಕ್ತಿಯೊಬ್ಬರು ಏ.5 ರ ಮುಂಜಾನೆ ಸೋಮವಾರ ಬೆಳಿಗ್ಗೆ 2 ಗಂಟೆಯ ಸಮಯಕ್ಕೆ ಫೋನಾಯಿಸಿ ಉರ್ದು ಮಿಶ್ರಿತ ಹಿಂದಿಯಲ್ಲಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ಅನಂತಕುಮಾರ ಹೆಗಡೆಯವರ ಆಪ್ತ ಕಾರ್ಯದರ್ಶಿ ದೂರು ನೀಡಿದ್ದಾರೆ. ಸೋಮವಾರ ಮುಂಜಾನೆ ಎರಡು ಗಂಟೆಗೆ ಅನಂತಕುಮಾರ ಹೆಗಡೆಯವರ ಶಿರಸಿ ಕೆ.ಎಚ್.ಬಿ. ಕಾಲನಿಯ ಮನೆ ದೂರವಾಣಿ ಸಂಖ್ಯೆ ( 08384-234337) ಗೆ 94645540399 ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ದೂರು ನೀಡಲಾಗಿದೆ. ಹಿಂದೆ ಪ್ರಚಾರಪಡೆದಿದ್ದೀಯೆ ಈಗ ನಿನ್ನನ್ನು ಏನು ಮಾಡುತ್ತೇವೆ ನೋಡು. ಹಿಂದಿನಂತೆ ಮಾಧ್ಯಮಗಳಲ್ಲಿ ಬಂದರೂ ಕ್ಯಾರ್ ಮಾಡುವುದಿಲ್ಲ ಎಂದುಸೋಮವಾರ ಮುಂಜಾನೆ ಎರಡು ಗಂಟೆಗೆ ಧಮಕಿ ಹಾಕಿರುವ ಬಗ್ಗೆ ಮಂಗಳವಾರ ಅಪರಾಹ್ನ 4 ಗಂಟೆಗೆ ದೂರು ದಾಖಲಾಗಿದೆ.



