
ಎಲ್ಲಾ ಮುನ್ನೆಚ್ಚರಿಕೆ, ಸುರಕ್ಷತಾ ಕ್ರಮಗಳ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಎರಡನೇ ಅಲೆ ವ್ಯಾಪಿಸುತ್ತಿದೆ. ರವಿವಾರ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪತ್ತೆಯಾದವರ ಸಂಖ್ಯೆ 275, ಕಾರವಾರದಲ್ಲಿ ಅತಿಹೆಚ್ಚು ಪ್ರಕರಣಗಳು ಪತ್ತೆಯಾದರೆ ಸಿದ್ಧಾಪುರದಲ್ಲಿ ಹತ್ತು ಪ್ರಕರಣಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ದಾವಣಗೆರೆ ಪೂರ್ವ ವಲಯದ ಪೊಲೀಸ್ ADGP ಉಮೇಶ್ ಕುಮಾರ್ ಸಾಗರ ಬೇಟಿ..!
ಸಾಗರ :ವೀಕೆಂಡ್ ಕರ್ಫ್ಯೂ ವೇಳೆ ಎಡಿಜಿಪಿ ಉಮೇಶ್ ಕುಮಾರ್ ಸಿಟಿ ರೌಂಡ್ಸ್ ಹಾಕಿದ್ದಾರೆ.ನಗರದ ಹಲವೆಡೆ ಗಸ್ತು ತಿರುಗಿ ಪರಿಸ್ಥಿತಿ ಅವಲೋಕನ ನಡೆಸಿದರು.
ಶಿವಮೊಗ್ಗ ಸೇರಿದಂತೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಹೊತ್ತಿರುವ ಎಡಿಜಿಪಿ ಉಮೇಶ್ ಕುಮಾರ್ .ದಾವಣಗೆರೆ ಪೂರ್ವವಲಯದ ಸಿಐಡಿ ಎಡಿಜಿಪಿ ಆಗಿದ್ದಾರೆ.ಸಾಗರದ ವಿವಿಧ ಚೆಕ್ ಪೋಸ್ಟ್ ನ ಅವಲೋಕನ ನಡೆಸಿ.
ಕರ್ಫ್ಯೂ ವೇಳೆ ಪಟ್ಟಣದಲ್ಲಿ ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವಲೋಕನ ನಡೆಸಿದ್ದಾರೆ.
ನಗರದ ಎಲ್ಲಾ ಚೆಕ್ ಪೋಸ್ಟ್ ಗಳಿಗೆ ತೆರಳಿ ಮತ್ತೇನಾದರೂ ಬಿಗಿ ಕ್ರಮ ತೆಗೆದುಕೊಳ್ಳಬಹುದಾ ಎಂದು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸಾಗರದ ಶಿವಪ್ಪನಾಯಕ ವೃತ್ತದ ಬಳಿ ಪರಿಸ್ಥಿತಿಯನ್ನ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಸಾಗರ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗಿರೀಶ್ ಹಾಗೂ ಕ್ರೈಮ್ ಸಿಬ್ಬಂದಿಗಳು ಮೊದಲಾದವರು ಇದ್ದರು.
ಸಿದ್ಧಾಪುರದ ಆಯುರ್ವೇದಿಕ್ ವೈದ್ಯ ಬೆಂಗಳೂರಿನಲ್ಲಿ ಕರೋನಾ ಕ್ಕೆ ಬಲಿ- ಸಿದ್ಧಾಪುರ ಮೂಲದ ಹೊಸೂರಿನ ಈಗ ಬೆಂಗಳೂರಿನಲ್ಲಿ ವಾಸವಾಗಿದ್ದ 38 ವರ್ಷಗಳ ಆಯುರ್ವೇದಿಕ್ ವೈದ್ಯ ಮಧುಕೇಶ್ವರ ನಾಯ್ಕ ಶನಿವಾರ ಬೆಂಗಳೂರಿನಲ್ಲಿ ಕರೋನಾ ಕ್ಕೆ ಬಲಿಯಾಗಿದ್ದಾರೆ. ಕೆ.ಡಿ.ಸಿ.ಸಿ. ಬ್ಯಾಂಕ್ ಮಾಜಿ ಉದ್ಯೋಗಿ ದಿ. ವಿ.ಎಂ.ನಾಯ್ಕರ ಮೊದಲ ಪುತ್ರರಾಗಿದ್ದ ಇವರು ಶಿರಸಿ ದಾಸನಕೊಪ್ಪದಲ್ಲಿ ಕೆಲವು ಕಾಲ ಆಯುರ್ವೇದಿಕ್ ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಖಾಸಗಿ ಆಸ್ಫತ್ರೆ ಮತ್ತು ಸ್ವತ: ಕ್ಲಿನಿಕ್ ನಡೆಸುತಿದ್ದರು. ಒಂದು ವಾರದ ಹಿಂದೇ ಕೋವಿಡ್ ಸೋಂಕು ದೃಢಪಟ್ಟಿದ್ದ ಇವರು ಮನೆಯಲ್ಲೇ ಚಿಕಿತ್ಸೆ ಪಡೆದು ಅಂತಿಮ ಹಂತದಲ್ಲಿ ಆಸ್ಫತ್ರೆಗೆ ಸ್ಥಳಾಂತರವಾಗಿದ್ದರು. ಮೃತರು ಪತ್ನಿ, ನಾಲ್ಕು ವರ್ಷದ ಮಗು, ತಾಯಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಶನಿವಾರ ಮೃತರಾದ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲೇ ದಫನ್ ಮಾಡಲಾಗಿದೆ.
