

ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಸಕ್ರಿಯರಾಗಿರುವ ರಮ್ಯಾ ಕೆಲವು ವಿಚಾರಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ನೆಲೆಮಾಂವ್, ಮುಗದೂರು ಹೇರೂರು, ಸೇರಿದಂತೆ ಒಟ್ಟೂ 39 ಕೋವಿಡ್ ಪ್ರಕರಣಗಳು ಏ.30 ರಂದು ಸಿದ್ದಾಪುರದಲ್ಲಿ ಪತ್ತೆಯಾಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಸಕ್ರಿಯರಾಗಿರುವ ರಮ್ಯಾ ಕೆಲವು ವಿಚಾರಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೋವಿಡ್-19 ಎರಡನೇ ಅಲೆ ಮತ್ತು ಅದನ್ನ ನಿಯಂತ್ರಿಸುವಲ್ಲಿ ಸರ್ಕಾರ ಎಡವಿದೆ ಎಂದು ರಮ್ಯಾ ಅಭಿಪ್ರಾಯ ಪಟ್ಟಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ ಸ್ಟೋರಿ ಶೇರ್ ಮಾಡಿರುವ ನಟಿ ರಮ್ಯಾ, ಕೋವಿಡ್‌ನಿಂದ ಸಂಭವಿಸುತ್ತಿರುವ ಸಾವುಗಳು ಅನಗತ್ಯ. ಇದನ್ನು ತಡೆಯಬಹುದಿತ್ತು. ಜನರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ.

https://imasdk.googleapis.com/js/core/bridge3.453.0_en.html#goog_106531429
ಅಜಾಗರೂಕತೆ ಮತ್ತು ದುರಹಂಕಾರದ ಮೋದಿಯಿಂದಾಗಿ ಅನೇಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸರ್ಕಾರಕ್ಕೆ ಕೇಳಿಸಿಕೊಳ್ಳುವ ವ್ಯವಧಾನ ಇಲ್ಲ. ಅಧಿಕಾರಕ್ಕಾಗಿ ದುರಾಸೆ ಪಡುತ್ತಿರುವ ಈ ಸರ್ಕಾರಕ್ಕೆ ಯಾವುದೇ ಸಹಾನುಭೂತಿ ಇಲ್ಲ. ಇದನ್ನ ಕ್ಷಮಿಸಲು ಅಸಾಧ್ಯ. ಇಂದು ನಡೆಯುತ್ತಿರುವುದು ನನಗೆ ಆಘಾತ ತಂದಿದೆ ಮತ್ತು ಕೋಪವನ್ನುಂಟು ಮಾಡಿದೆ” ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರಮ್ಯಾ ಬರೆದುಕೊಂಡಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ಅಬ್ಬರ ವಿಪರೀತವಾಗಿದೆ. ಹೊಸ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕೊರೊನಾ ವೈರಸ್ ಸೋಂಕಿನಿಂದ ಕೊನೆಯುಸಿರೆಳೆಯುತ್ತಿರುವವರ ಸಂಖ್ಯೆಯೂ ಅಧಿಕವಾಗುತ್ತಿದೆ ಎಂದು ವಿವರಿಸಿದ್ದಾರೆ. (kpc)
