

ರಾಜ್ಯದಲ್ಲಿ ಕೋವಿಡ್ ಪ್ರಮಾಣ ಇನ್ನೂ ಏರುವ ಸಾಧ್ಯತೆ: ಎರಡು ವಾರ ಲಾಕ್ ಡೌನ್ ವಿಸ್ತರಣೆಗೆ ತಜ್ಞರ ಸಲಹೆ
ರಾಜ್ಯದಲ್ಲಿ 50 ಸಾವಿರ ಪ್ರಕರಣಗಳು ವರದಿಯಾಗುವುದರೊಂದಿಗೆ ಕೋವಿಡ್-19 ಸಾಂಕ್ರಾಮಿಕದ ಅಬ್ಬರ ಹೆಚ್ಚಾಗಿದ್ದು, ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಿಸಬೇಕೆಂದು ಆರೋಗ್ಯ ತಜ್ಞರು ಗುರುವಾರ ಸಲಹೆ ನೀಡಿದ್ದಾರೆ.
ಸಂಪೂರ್ಣ ಲಾಕ್ ಡೌನ್ ಮಾಡುವುದರಿಂದ ಕರೋನಾ ನಿಯಂತ್ರಣ ಸಾಧ್ಯ. ಜನಸಾಮಾನ್ಯರಿಗೆ ಅಗತ್ಯ, ಅವಶ್ಯ ಪಡಿತರ ವಿತರಣೆ ಮಾಡಿ,ಕೃಷಿ- ವ್ಯವಹಾರ ಸಾಲ ಮರುಪಾವತಿಗೆ ಸಮಯಾವಕಾಶ ನೀಡಿ, ಜನರಿಗೆ ತಮ್ಮ ಬಾಗಿಲಲ್ಲೇ ಎಲ್ಲಾ ಅಗತ್ಯ ವಸ್ತುಗಳು ಸಿಗುವ ವ್ಯವಸ್ಥೆ ಮಾಡಿ ಈ ತಿಂಗಳು ಪೂರ್ತಿ ಲಾಕ್ ಡೌನ್ ಮಾಡುವುದರಿಂದ ಕರೋನಾ ನಿಯಂತ್ರಿಸಬಹುದು. ಈ ಬಗ್ಗೆ ನಾವು ಸರ್ಕಾರಕ್ಕೆ ಲಿಖಿತ ಮನವಿ ನೀಡುತ್ತೇವೆ. -ವಸಂತ ನಾಯ್ಕ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಕೋವಿಡ್ ಸೋಂಕಿತರಿಗೆ ಅವಶ್ಯ ಔಷಧಿ, ಆರೈಕೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಅವಶ್ಯವಿರುವವರಿಗೆ ಕೋವಿಡ್ ಔಷಧಿ, ಕರೋನಾ ಬರದಂತೆ ತಡೆಯುವ ಔಷಧಿ ಪೂರೈಕೆ ಮಾಡುವಲ್ಲಿ ಸರ್ಕಾರ ಮುತುವರ್ಜಿ ವಹಿಸದಿದ್ದರೆ ಜನಸಾಮಾನ್ಯರ ಪಾಡೇನು? ಈ ಬಗ್ಗೆ ಜವಾಬ್ಧಾರಿ ವಹಿಸದ ಪ್ರಧಾನಿ, ಮುಖ್ಯಮಂತ್ರಿ ಅವರ ಪಕ್ಷ, ಪರಿವಾರಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎನ್ನುವುದನ್ನು ಆಡಳಿತದಲ್ಲಿರುವವರು ಮರೆಯಬಾರದು. – ವೀರಭದ್ರ ನಾಯ್ಕ, ರಾಜ್ಯ ರೈತ ಸಂಘದ ತಾಲೂಕಾ ಅಧ್ಯಕ್ಷ ಸಿದ್ಧಾಪುರ

ಸಿದ್ಧಾಪುರದ ದಕ್ಷಿಣ ಭಾಗ ಸಾಗರದ ತಾಳಗುಪ್ಪಾ ಸೇರಿದಂತೆ ಹಲವು ಭಾಗಗಳಲ್ಲಿ ಕೋವಿಡ್ ವಿಸ್ತರಿಸುತ್ತಿರುವುದರಿಂದ ಈ ಭಾಗಕ್ಕೆ ಆದ್ಯತೆಯ ಮೇಲೆ ಆರೋಗ್ಯ ಸೇವೆ ಒದಗಿಸಬೇಕೆಂದು ಗಾಂಧೀಜಿ ನಾಯ್ಕ, ಸ್ವಾಮಿ ಪಿ. ಗೋಪಾಲ ನಾಯ್ಕ,ಗಣಪತಿ ನಾಯ್ಕ ಹಸ್ವಂತೆ, ಕಮಲಮ್ಮ ಪ್ರಭಾಕರ ನಾಯ್ಕ ಸೇರಿದಂತೆ ಹಲವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ 50 ಸಾವಿರ ಪ್ರಕರಣಗಳು ವರದಿಯಾಗುವುದರೊಂದಿಗೆ ಕೋವಿಡ್-19 ಸಾಂಕ್ರಾಮಿಕದ ಅಬ್ಬರ ಹೆಚ್ಚಾಗಿದ್ದು, ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಿಸಬೇಕೆಂದು ಆರೋಗ್ಯ ತಜ್ಞರು ಗುರುವಾರ ಸಲಹೆ ನೀಡಿದ್ದಾರೆ.
ಇನ್ನೂ ಎರಡು ವಾರಗಳಲ್ಲಿ ರಾಜ್ಯದಲ್ಲಿ ಸೋಂಕು ಉತ್ತುಂಗಕ್ಕೆ ಏರಲಿದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ನ ಲೈಫ್ ಕೋರ್ಸ್
ಎಪಿಡೆಮಿಯಾಲಜಿ ಮುಖ್ಯಸ್ಥ ಡಾ. ಗಿರಿಧರ ಆರ್ ಬಾಬು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಟೆಸ್ಟಿಂಗ್ ಸಂಖ್ಯೆ ವಿಶೇಷವಾಗಿ ಬೆಂಗಳೂರಿನಲ್ಲಿ ಕಡಿಮೆ ಇರುವುದರಿಂದ ಸೋಂಕು ಪತ್ತೆ ಪ್ರಸ್ತುತ ಅನಿಯಮಿತವಾಗಿವೆ. ಉತ್ತುಂಗದ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆಯ ಬಗ್ಗೆ ಸ್ಪಷ್ಟತೆ ನೀಡುವುದಿಲ್ಲ, ಆದರೆ, ಟೆಸ್ಟಿಂಗ್ ಹೊರತಾಗಿಯೂ, ಮುಂದಿನ ಎರಡು ವಾರಗಳಲ್ಲಿ ಉತ್ತುಂಗಕ್ಕೇರುವುದನ್ನು ನಾವು ನೋಡಬಹುದಾಗಿದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಡಾ. ಗಿರಿಧರ ಬಾಬು ಹೇಳಿದ್ದಾರೆ.
ಏಪ್ರಿಲ್ 27ರಿಂದ ಮೇ 12 ರವರೆಗಿನ ಲಾಕ್ ಡೌನ್ ಹೇರಿರುವ ರಾಜ್ಯಸರ್ಕಾರದ ನಿರ್ಧಾರವನ್ನು ಪ್ರಶಂಸಿಸಿರುವ ಬಾಬು, ಐಐಎಸ್ ಸಿ ಅಂದಾಜಿನಂತೆ 5800 ಜೀವವನ್ನು ರಕ್ಷಿಸಲಾಗಿದೆ. ಐಐಎಸ್ ಸಿ ಪ್ರೊಫೆಸರ್ ಶಶಿಕುಮಾರ್ ಗಣೇಶನ್ ಮಾಡೆಲ್ ಪ್ರಕಾರ, ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಲಾಕ್ ಡೌನ್ ನೆರವಾಗಲಿದೆ. ಆದ್ದರಿಂದ ಕನಿಷ್ಠ ಎರಡು ವಾರಗಳ ಮಟ್ಟಿಗೆ ಲಾಕ್ ಡೌನ್ ವಿಸ್ತರಿಸುವಂತೆ ಶಿಫಾರಸು ಮಾಡುವುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನಿಷ್ಠ 10 ರಿಂದ 14 ದಿನಗಳವರೆಗೆ ಸಾವುನೋವುಗಳು ಹೆಚ್ಚಾಗಲಿವೆ ಎಂದು ಹೇಳಿರುವ ಬಾಬು, ಸೋಂಕಿನ ಹೆಚ್ಚಳ ಹಿನ್ನೆಲೆಯಲ್ಲಿ
ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಿರುವ ಕಡೆಗಳಲ್ಲಿ ಆಮ್ಲಜನಕದೊಂದಿಗೆ ತಪಾಸಣೆ ಮತ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕು, ಇಂತಹ ಕೇಂದ್ರಗಳು ಪ್ರತಿ ಐದು ಕಿಲೋಮೀಟರ್ ಗಳ ಅಂತರದಲ್ಲಿರಬೇಕು. ಆ ಮೂಲಕ ಬಿಕ್ಕಟ್ಟು ಸ್ವಲ್ಪ ಸುಧಾರಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಸ್ಕೊಡ್‍ವೆಸ್ ನಿಂದ ಮಹತ್ವದ ದಾಖಲೆ ಕಳವು : ಎಫ್.ಆಯ್. ಆರ್ ದಾಖಲು
ಅನಧಿಕೃತ ಯೂಜರ್ ನೇಮ್, ಪಾಸವರ್ಡ ಬಳಸಿ ಸ್ಕೊಡ್‍ವೆಸ್ ಸಂಸ್ಥೆಯ ದಾಖಲೆ ಕಳವು
ಶಿರಸಿ : ಕೆಲವು ದಿನಗಳಿಂದ ಯಾರೋ ವ್ಯಕ್ತಿಗಳು ಇಲ್ಲಿನ ಸ್ಕೊಡ್‍ವೆಸ್ ಕೇಂದ್ರ ಕಛೇರಿಗೆ ಸಂಬಂಧಿಸಿದ ಇ-ಮೇಲ್ ಯೂಜರ್‍ನೇಮ್ ಮತ್ತು ಪಾಸವರ್ಡ ಬಳಸಿ ಮಹತ್ವದ ದಾಖಲೆ ಹಾಗೂ ಮಾಹಿತಿಗಳನ್ನು ಕದ್ದಿರುವ ಬಗ್ಗೆ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಆಯ್.ಟಿ.ಆಕ್ಟ 2008 ( U/S-66)) ಪ್ರಕಾರ ಎಫ್.ಆಯ್.ಆರ್ ದಾಖಲಿಸಲಾಗಿದೆ.
ಸ್ಕೊಡ್‍ವೆಸ್ ಸಂಸ್ಥೆಯು ಹಲವಾರು ವರ್ಷಗಳಿಂದ ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ತೊಡಗಿದ್ದು ಸರಕಾರಕ್ಕೆ ಸಂಬಂಧಿಸಿದ ಎಲ್ಲ ಪತ್ರ ವ್ಯವಹಾರಗಳನ್ನು ಇ-ಮೇಲ್ ಮೂಲಕವೇ ನಡೆಸುತ್ತಾ ಬಂದಿರುತ್ತದೆ. ಸಂಸ್ಥೆಯ ಹಣಕಾಸು ವ್ಯವಹಾರಗಳು, ಯೋಜನಾ ಅನುಷ್ಠಾನ ಕಾರ್ಯಗಳು ಹಾಗೂ ಆಡಳಿತಾತ್ಮಕ ಪತ್ರ ವ್ಯವಹಾರಗಳು ಇ-ಮೇಲ್ ಮೂಲಕವೇ ನಡೆಸಲಾಗುತ್ತದೆ. ಈ ಎಲ್ಲಾ ವ್ಯವಹಾರಗಳನ್ನು ಸಂಸ್ಥೆಯ ಅಧಿಕೃತ ವ್ಯಕ್ತಿಗಳು ಪಡೆದ ಯೂಜರ್‍ನೇಮ್ ಮತ್ತು ಪಾಸವರ್ಡಗಳಿಂದ ಮಾತ್ರ ವ್ಯವಹರಿಸಲು ಸಾಧ್ಯವಿರುತ್ತದೆ. ಹೀಗಿದ್ದರೂ ಯಾರೋ ವ್ಯಕ್ತಿಗಳು ಅನಧಿಕೃತವಾಗಿ ಸಂಸ್ಥೆಯ ಯೂಜರ್‍ನೇಮ್ ಮತ್ತು ಪಾಸವರ್ಡಗಳನ್ನು ಬಳಸಿ ದುರುದ್ದೇಶದ ಕಾರಣದಿಂದ ಅತ್ಯಮೂಲ್ಯ ದಾಖಲೆ ಹಾಗೂ ಮಾಹಿತಿಗಳನ್ನು ಕದಿಯುವಮೂಲಕ ಸ್ಕೋಡವೇಸ್ ಸಂಸ್ಥೆಗೆ ಆqಳಿತಾತ್ಮಕ ತೊಂದರೆ ಉಂಟುಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸ್ಕೊಡ್‍ವೆಸ್ ಸಂಸ್ಥೆ ಮತ್ತು ವಿವಿಧ ಇಲಾಖೆಗೆ ಸಂಬಂಧಿಸಿದ ಆಡಳಿತ, ಹಣಕಾಸು ಮತ್ತು ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಅಮೂಲ್ಯ ದಾಖಲೆಗಳನ್ನು ವಿವಿಧ ರೀತಿಯಲ್ಲಿ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿರುವುದರಿಂದ ತಕ್ಷಣದಲ್ಲಿ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ಈ ಪ್ರಕರಣವು ಸೈಬರ್ ಕ್ರೈಮ್ ವ್ಯಾಪ್ತಿಗೆ ಒಳಪಟ್ಟಿದ್ದು ಮೂರು ವರ್ಷ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಬಹುದಾದ ಗಂಭೀರ ಅಪರಾಧವಾಗಿರುತ್ತದೆ.
ಹಲವು ದಿನಗಳಿಂದ ಕೆಲವು ವ್ಯಕ್ತಿಗಳು ಸ್ಕೊಡ್‍ವೆಸ್ ಸಂಸ್ಥೆಯ ಚಟುವಟಿಕೆಗಳಿಗೆ ವಿವಿಧ ರೀತಿಯ ಮಸಿ ಬಳಿಯುವ, ಅಡ್ಡಿಆತಂಕ ಉಂಟುಮಾಡುವ ಕಾರ್ಯದಲ್ಲಿ ತೊಡಗಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ದುರುದ್ದೇಶದಿಂದ ಕದ್ದ ಸಂಸ್ಥೇಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಅಥವಾ ಮಾಹಿತಿಗಳು ಸಾರ್ವಜನಿಕರಿಗೆ ಲಭ್ಯವಾದಲ್ಲಿ ಅಂತಹ ದಾಖಲೆ ಹಾಗೂ ಮಾಹಿತಿಗಳನ್ನು ತಕ್ಷಣದಲ್ಲಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ಅಥವಾ ಸ್ಕೊಡ್‍ವೆಸ್ ಸಂಸ್ಥೆಗೆ ತಲುಪಿಸುವಂತೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಮನವಿ ಮಾಡಿದ್ದಾರೆ.
: ಹಲವು ದಿನಗಳಿಂದ ಸಂಸ್ಥೆಗೆ ಸಂಬಂಧಿ ಸಿದ ಮಹತ್ವದ ದಾಖಲೆಗಳನ್ನು ಕದಿಯಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಮಸಿಬಳಿಯುವ ಹಾಗೂ ಸಂಸ್ಥೆಯ ಚಟುವಟಿಕೆಗಳಿಗೆ ಅಡ್ಡಿ ಮಾಡುವ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಬಗ್ಗೆ ಜಾಗೃತೆ ವಹಿಸಿದ್ದರಿಂದ ಅನಧಿಕೃತವಾಗಿ ಸಂಸ್ಥೆಯ ಇ-ಮೇಲ್ ಯೂಜರ್‍ನೇಮ್ ಮತ್ತು ಪಾಸವರ್ಡ ಬಳಸಿ ದಾಖಲೆ ಕದಿಯುತ್ತಿರುವುದು ತಿಳಿದು ಬಂತು. ತಕ್ಷಣದಲ್ಲಿ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ. ಇದರ ಹಿಂದೆ ಯಾರ್ಯಾರ ಕೈವಾಡವಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ.
-ಡಾ. ವೆಂಕಟೇಶ ನಾಯ್ಕ , ಕಾರ್ಯನಿರ್ವಾಹಕ ನಿರ್ದೇಶಕರು, ಸ್ಕೊಡ್‍ವೆಸ್ ಸಂಸ್ಥೆ, ಶಿರಸಿ .




