
ಶಿರಸಿಯ ಖಾಸಗಿ ವೈದ್ಯರ ಅಸಮಾಧಾನವಿರಲಿ, ಸಿದ್ಧಾಪುರದ ತರಕಾರಿ ಮಾರುವವರ ಬೆಲೆ ಏರಿಕೆ ಇರಲಿ ಯಾವುದೇ ಪರಿಸ್ಥಿತಿಯಲ್ಲೂ ಈಗಿನ ಅನಿವಾರ್ಯತೆಯ ಲಾಭ ಪಡೆಯುವ ಹಿತಾಸಕ್ತಿಗಳಿಗೆ ಅವಕಾಶವಿಲ್ಲ ಎಂದು ಎಚ್ಚರಿಸಿರುವ ಸ್ಥಳಿಯ ಶಾಸಕ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎಲ್ಲರೂ ಸರ್ಕಾರದ ನೀತಿ- ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಿದ್ಧಾಪುರದಲ್ಲಿ ಇಂದು 9 ಹೊಸ ಕೋವಿಡ್ ಸೋಂಕಿತರ ಪತ್ತೆ 2 ಸಾವು
ಸಿದ್ದಾಪುರ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ, ಪ್ರಗತಿಪರೀಶೀಲನೆ ನಂತರ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಜ್ಯ ದೇಶ ಕರೋನಾ ಬಿಕ್ಕಟ್ಟು ಎದುರಿಸುತ್ತಿದೆ. ಜಿಲ್ಲೆ ದೇಶದ ಸರಾಸರಿ ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದೆ. ಈ ಬಗ್ಗೆ ತಜ್ಞರು ಅಧ್ಯಯನ ಮಾಡುತಿದ್ದಾರೆ. ಕೋವಿಡ್ ಅಪಾಯದಿಂದ ಪಾರಾಗುವ ವಿಧಾ ನವೆಂದರೆ ಶೀಘ್ರ ಪರೀಕ್ಷೆ ಸೂಕ್ತ ಚಿಕಿತ್ಸೆ ಮುತುವರ್ಜಿ, ಮುಂದಾಲೋಚನೆಯಿಂದ ಅಪಾಯದಿಂದ ಪಾರಾಗಬಹುದು ಎನ್ನುವುದು ಈಗ ನಾವೆಲ್ಲಾ ಕಂಡುಕೊಂಡ ಸತ್ಯ ಈ ಅನಿವಾರ್ಯತೆಯ ಅವಧಿಯಲ್ಲಿ ಯಾರೂ ಪರಿಸ್ಥಿತಿಯ ಲಾಭ ಪಡೆಯುವ ಪ್ರಯತ್ನ ಮಾಡಬಾರದು. ಶಿರಸಿಯಲ್ಲಿ ವೈದ್ಯರ ಪ್ರತಿಭಟನೆ, ಅಸಮಾಧಾನದ ಬಗ್ಗೆ ಖುದ್ದು ನಾನೇ ಮಾತನಾಡಿದ್ದೇನೆ. ಸಂಪರ್ಕ ಕೊರತೆಯಿಂದ ಆಗಿರುವ ತೊಂದರೆ ಬಗೆಹರಿಸಲು ಅಧಿಕಾರಿಗಳೂ ಪ್ರಯತ್ನಿಸುತಿದ್ದಾರೆ. ಸಿದ್ಧಾಪುರದಲ್ಲಿ ತರಕಾರಿ ಮಾರುವವರು ಗ್ರಾಹಕರನ್ನು ಶೋಷಣೆ ಮಾಡದಂತೆ ಅಧಿಕಾರಿಗಳು ಕ್ರಮ ಜರುಗಿಸಬೇಕು. ವೈದ್ಯರು, ಜನರು, ಕೋವಿಡ್ ಬಾಧಿತರು ಎಲ್ಲರ ಸಹಕಾರದಿಂದ ಈ ಗಂಡಾಂತರ ಗೆಲ್ಲಬೇಕಿದೆ.
ಕೋವಿಡ್ ನಿರ್ವಹಣೆ, ಸರ್ಕಾರದ ನಿಯಮ, ಕೋವಿಡ್ ಕಟ್ಟುಪಾಡುಗಳನ್ನು ಎಲ್ಲರೂ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ, ಇಂಥ ಸಮಯದಲ್ಲಿ ಚಿಕ್ಕ-ಪುಟ್ಟ ತೊಂದರೆ, ರಗಳೆಗಳೂ ಆಗಬಹುದು ಆದರೆ ವ್ಯವಸ್ಥೆಯ ಕಟ್ಟುಪಾಡು, ನಿಯಮ, ಸರ್ಕಾರದ ನಿರ್ಧೇಶನ ಮೀರಿದರೆ ಸಾರ್ವಜನಿಕರು, ಆಡಳಿತ, ಒಟ್ಟಾರೆ ವ್ಯವಸ್ಥೆಗೇ ಹಿನ್ನಡೆ ಹಾಗಾಗಿ ನಮ್ಮಂತೇ ಎಲ್ಲರೂ ಕೋವಿಡ್ ಗೆದ್ದು ಎಂದಿನ ಸಹಜ ಬದುಕಿಗೆ ಮರಳಲು ಆಡಳಿತಕ್ಕೆ ಸ್ಪಂದಿಸಬೇಕು ಎಂದರು.


