

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಆರ್ಭಟ ಜೋರಾಗಿದ್ದು ಈ ಆರ್ಭಟ ನಿಯಂತ್ರಿಸುವ ಹಿನ್ನೆಲೆಯಲ್ಲಿ ಶಿರಸಿ-ಸಿದ್ದಾಪುರ, ಮುಂಡಗೋಡು, ಯಲ್ಲಾಪುರಗಳನ್ನು ವಿಶೇಶ ಕಂಟೈನ್ ಮೆಂಟ್ ಜೋನ್ ಎಂದು ಇಂದು ಜಿಲ್ಲಾಡಳಿತ ಘೋಶಿಸಿದೆ.
ವಿಶೇಶ ಕಂಟೈನ್ ಮೆಂಟ್ ಝೋನ್ ಗಳಲ್ಲಿ ಶುಕ್ರವಾರದಿಂದ ಸೋಮುವಾರದ ವರೆಗೆ ಇತರ 8 ತಾಲೂಕುಗಳಲ್ಲಿ ಶನಿವಾರ ಬೆಳಿಗ್ಗೆ 6 ರಿಂದ ಸೋಮುವಾರ ಬೆಳಿಗ್ಗೆ 6 ರ ವರೆಗೆ ಸಂಪೂರ್ಣ ಲಾಕ್ ಡೌನ್ ಘೋಶಿಸಿದೆ.
ಈ ಅವಧಿಗಳಲ್ಲಿ ಜನ ಓಡಾಟ, ವಾಹನ ಓಡಾಟ ನಿರ್ಬಂಧಿಸಿದ್ದು ಅನಿವಾರ್ಯ ಆರೋಗ್ಯ ಅಗತ್ಯಗಳನ್ನು ಬಿಟ್ಟು ಬೇರೆ ಯಾವುದೇ ಕಾರಣಕ್ಕೆ ಸಾರ್ವಜನಿಕರು ಮನೆಯಿಂದ ಹೊರಬರಬಾರದೆಂದು ಸೂಚಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.




