ಅಮ್ಮನ ನೆನಪನ್ನಾದರೂ ಕೊಡಿ’: ಮಡಿಕೇರಿಯ 9 ವರ್ಷದ ಬಾಲಕಿಯ ಕರುಣಾಜನಕ ಮನವಿ

ಹೊಸ ಆದೇಶದಂತೆ ಶಿರಸಿ ಉಪವಿಭಾಗದ ಸಿದ್ದಾಪುರ, ಯಲ್ಲಾಪುರ, ಶಿರಸಿ, ಮುಂಡಗೋಡು ಸೇರಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜೂನ್ 7 ರ ವರೆಗೆ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಮುಂಜಾನೆ 6 ರಿಂದ ಹತ್ತರ ವರೆಗೆ ಖರೀದಿಗೆ ಅವಕಾಶ ಉಳಿದ ದಿಗಳಲ್ಲಿ ಸಂಪೂರ್ಣ ಲಾಕ್ ಡೌನ್

ಸಿದ್ಧಾಪುರ- ನಾಟಿವೈದ್ಯ ಗೋವಿಂದ್ ನಾಯ್ಕ ಕರೋನಾಗೆ ಬಲಿ, ಸಂಪೂರ್ಣ ಲಾಕ್ ಡೌನ್ ನಡುವೆ ಕೋಳಿಮಾಂಸ ಮಾರುತಿದ್ದ ನಗರದ ಎರಡು ಜನ ವ್ಯಾಪಾರಿಗಳ ಮೇಲೆ ಸಿದ್ಧಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. for details- visit- samajamukhi.net, samaajamukhi & samajamukhiNews you tube channel

ಅಮ್ಮನನ್ನು ಕಳೆದುಕೊಂಡೆ, ಅಮ್ಮನ ನೆನಪನ್ನಾದರೂ ಕೊಡಿ’: ಮಡಿಕೇರಿಯ 9 ವರ್ಷದ ಬಾಲಕಿಯ ಕರುಣಾಜನಕ ಮನವಿ   

ಕೊರೋನಾ ಎರಡನೇ ಅಲೆಯಲ್ಲಿ ಸಿಲುಕಿ ಬಳಲುತ್ತಿರುವವರ ಗೋಳಾಟ ಒಂದೆಡೆಯಾದರೆ ತಮ್ಮವರನ್ನು, ತಮ್ಮ ಪೋಷಕರನ್ನು ಕಳೆದುಕೊಂಡವರ, ಅನಾಥರಾದ ಮಕ್ಕಳ ಗೋಳಿನ ಕಥೆ ಇನ್ನೊಂದೆಡೆ. ತಂದೆ-ತಾಯಿಗಳನ್ನು ಕಳೆದುಕೊಂಡ ಮಕ್ಕಳ ಆಕ್ರಂದನವೂ ಮುಗಿಲುಮುಟ್ಟುತ್ತಿದೆ.

Girl Hritiksha

ಮಡಿಕೇರಿ: ಕೊರೋನಾ ಎರಡನೇ ಅಲೆಯಲ್ಲಿ ಸಿಲುಕಿ ಬಳಲುತ್ತಿರುವವರ ಗೋಳಾಟ ಒಂದೆಡೆಯಾದರೆ ತಮ್ಮವರನ್ನು, ತಮ್ಮ ಪೋಷಕರನ್ನು ಕಳೆದುಕೊಂಡವರ, ಅನಾಥರಾದ ಮಕ್ಕಳ ಗೋಳಿನ ಕಥೆ ಇನ್ನೊಂದೆಡೆ. ತಂದೆ-ತಾಯಿಗಳನ್ನು ಕಳೆದುಕೊಂಡ ಮಕ್ಕಳ ಆಕ್ರಂದನವೂ ಮುಗಿಲುಮುಟ್ಟುತ್ತಿದೆ.

ಏನಿದು ಘಟನೆ: ಕೊಡಗು ಜಿಲ್ಲೆಯ ಮಡಿಕೇರಿಯ ಕುಶಾಲಪ್ಪನಗರ ಲೇಔಟ್ ನ ಕೋವಿಡ್ ಆಸ್ಪತ್ರೆಯಲ್ಲಿ ಮೊನ್ನೆ ಮೇ 16ರಂದು 9 ವರ್ಷದ ಬಾಲಕಿ ಹೃತಿಕ್ಷಾ ತಾಯಿ ಕೋವಿಡ್ ನಿಂದ ಮೃತಪಟ್ಟಿದ್ದರು.ಅದಕ್ಕೆ 10 ದಿನ ಮೊದಲು ಮೇ 6ರಂದು ಹೃತಿಕ್ಷಾ ತಾಯಿ ಕೋವಿಡ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಹೃತಿಕ್ಷಾ 4ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆಕೆಯ ತಂದೆ 41 ವರ್ಷದ ನವೀನ್ ಕುಮಾರ್ ಪೇಂಟಿಂಗ್ ಕೆಲಸ ಮಾಡುತ್ತಿದ್ದು ಮೂವರಿಗೂ ಸೋಂಕು ತಗುಲಿತ್ತು. ತಾಯಿ ರೋಗ ಉಲ್ಬಣಗೊಂಡು ಆಸ್ಪತ್ರೆ ಸೇರಿದ್ದರೆ ತಂದೆ-ಮಗಳು ಹೋಂ ಕ್ವಾರಂಟೈನ್ ನಲ್ಲಿದ್ದರು. 

ಹೃತಿಕ್ಷಾಳ ತಾಯಿ ಆಸ್ಪತ್ರೆಗೆ ದಾಖಲಾದಾಗ ಮೊಬೈಲ್ ಫೋನ್ ಇಟ್ಟುಕೊಂಡಿದ್ದರು. ಅದರಲ್ಲಿ ಅವರ ಫೋಟೋಗಳು, ಕುಟುಂಬಕ್ಕೆ ಸಂಬಂಧಿಸಿದ ಫೋಟೋಗಳು, ಸಂಪರ್ಕ ಸಂಖ್ಯೆಗಳು, ಅನೇಕ ಮಾಹಿತಿಗಳಿದ್ದವು. ಹೃತಿಕ್ಷಾ ಆನ್ ಲೈನ್ ಕ್ಲಾಸ್ ಗೆ ಅವಲಂಬಿತವಾಗಿದ್ದುದು ತಾಯಿಯ ಮೊಬೈಲ್ ನಲ್ಲಿಯೇ, ಇದೀಗ ಆಕೆಯ ತಾಯಿಯ ಜೊತೆ ಮೊಬೈಲ್ ಕೂಡ ಕಾಣೆಯಾಗಿದ್ದು ಬಾಲಕಿ ಹೃತಿಕ್ಷಾಳನ್ನು ಇನ್ನಷ್ಟು ದುಃಖಕ್ಕೀಡುಮಾಡಿದೆ.

ಕಾಣೆಯಾಗಿರುವ ಮೊಬೈಲ್ ನಲ್ಲಿ ತಾಯಿಗೆ ಸಂಬಂಧಪಟ್ಟ ಸಾಕಷ್ಟು ನೆನಪುಗಳಿವೆ, ಫೋಟೋಗಳಿವೆ, ಹೀಗಾಗಿ ಮೊಬೈಲ್ ಹುಡುಕಿಕೊಡಿ ಎಂದು ಬಾಲಕಿ ಹೃತಿಕ್ಷಾ ಮತ್ತು ಆಕೆಯ ತಂದೆ ನವೀನ್ ಕುಮಾರ್ ಕೊಡಗು ಜಿಲ್ಲಾಧಿಕಾರಿಗಳಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಪತ್ನಿ ಸತ್ತ ನಂತರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದ ಬೇರೆಲ್ಲಾ ವಸ್ತುಗಳು ಸಿಕ್ಕಿವೆ, ಆದರೆ ಮೊಬೈಲ್ ಕಾಣೆಯಾಗಿದೆ, ನಾವು ಆಸ್ಪತ್ರೆಯಲ್ಲಿ ಕೇಳಿದಾಗ ಸಕಾರಾತ್ಮಕ ಉತ್ತರ ಬರಲಿಲ್ಲ, ನಮ್ಮ ಆಸ್ಪತ್ರೆಯಲ್ಲಿ ಮೊಬೈಲ್ ಕಳವಾಗಲು ಸಾಧ್ಯವಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು.ನಮಗೆ ತೀವ್ರ ದುಃಖವಾಗಿ ಈ ಮನವಿ ಸಲ್ಲಿಸುತ್ತಿದ್ದೇವೆ ಎಂದು ನವೀನ್ ಕುಮಾರ್ ಹೇಳುತ್ತಿದ್ದಾರೆ.

ಇದೀಗ ಆಸ್ಪತ್ರೆಯ ಸಿಬ್ಬಂದಿಗಳನ್ನೆಲ್ಲಾ ವಿಚಾರಿಸಿ, ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಮೊಬೈಲ್ ಹುಡುಕಿಕೊಡುವ ಭರವಸೆಯನ್ನು ಸಂಬಂಧಪಟ್ಟ ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿನಿಂದ ದಾಖಲಾಗಿ ಮೃತಪಟ್ಟವರಲ್ಲಿ ಅನೇಕರ ವಸ್ತುಗಳು, ಮೊಬೈಲ್ ಗಳು ಕಾಣೆಯಾಗಿವೆ ಎಂಬ ದೂರುಗಳು ಬಂದಿವೆ. ಹಲವು ಆಸ್ಪತ್ರೆಗಳಲ್ಲಿ ರೋಗಿಗಳ ಆಭರಣಗಳು, ಹಣ, ಬೇರೆ ವಸ್ತುಗಳು ಕಾಣೆಯಾಗಿರುವ ದೂರುಗಳು ಕೇಳಿಬರುತ್ತಿವೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *