

ಕೋವಿಡ್ ನಿಯಮ ಮತ್ತು ಸರ್ಕಾರದ ರೀತಿ-ರಿವಾಜು ಮರೆತು ಸಿದ್ಧಾಪುರ ತಾಲೂಕಿನ ಮಿನಿ ವಿಧಾನಸೌಧ ದ ಉದ್ಘಾಟನೆ ನೆರವೇರಿಸಿರುವ ರಾಜ್ಯ ವಿಧಾನಸಭಾ ಅಧ್ಯಕ್ಷರ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು ಇದರ ನೈತಿಕ ಹೊಣೆ ಹೊತ್ತು ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತನಾಯ್ಕ ಮನ್ಮನೆ ರಾಜ್ಯ ವಿಧಾನಸಭಾ ಅಧ್ಯಕ್ಷರು ಕೋವಿಡ್ ತೊಂದರೆ ಸಮಯದಲ್ಲಿ ಜನರ ನೆರವಿಗೆ ಬರಲಿಲ್ಲ, ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿ ಮೇಲಿಂದ ಮೇಲೆ ಕರೋನಾ ನಿಯಮ ಉಲ್ಲಂಘಿಸುವುದು, ಸರ್ಕಾರದ ಶಿಷ್ಟಾಚಾರ ಕ್ಕೆ ಅಪಚಾರ ಮಾಡುವ ಕೆಲಸ ಮಾಡುತಿದ್ದಾರೆ. ಸರ್ಕಾರದ ಮುಖ್ಯಸ್ಥರಾಗಿ ವಿಧಾನಸಭಾ ಅಧ್ಯಕ್ಷರೇ ಇಂಥ ತಪ್ಪು ಮಾಡಿದರೆ ಕೆಳ ಹಂತದವರಿಗೆ ತಪ್ಪು ಮಾಡಲು ಅವಕಾಶ ಮಾಡಿದಂತೆ ಇಂಥ ಅನುಚಿತಕೆಲಸ ಮಾಡುವ ವಿಧಾನಸಭಾ ಅಧ್ಯಕ್ಷರು ರಾಜೀನಾಮೆ ನೀಡಿ ಆ ಸ್ಥಾನದ ಘನತೆ, ಗಂಭೀರತೆ ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಸಂತ ನಾಯ್ಕರ ಮಾಧ್ಯಮ ಹೇಳಿಕೆ- ಕಾಂಗ್ರೆಸ್ ಸರ್ಕಾರದ ಆಡಳಿತದ ಅವಧಿಯಲ್ಲಿ ಆರ್ ವಿ ದೇಶಪಾಂಡೆ ಅವರು ಉಸ್ತುವಾರಿ ಸಚಿವರಾಗಿದ್ದಾಗ ಸಿದ್ದಾಪುರ ತಾಲೂಕಿನ ಮಿನಿ ವಿಧಾನಸೌಧ ಹಾಗೂ ಬಸ್ಟಾಂಡ್ ಗಳಿಗೆ ಮುತುವರ್ಜಿವಹಿಸಿ ಅನುದಾನ ಮಂಜೂರು ಮಾಡಿಸಿದ್ದರು. ಅವರ ಶ್ರಮದ ಫಲವಾಗಿ ಇಂದು ಶಹರದಲ್ಲಿ ಭವ್ಯವಾದ ಮಿನಿವಿಧಾನಸೌಧ ಹಾಗೂ ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ. ಸ್ಥಳೀಯ ಶಾಸಕ ಕಾಗೇರಿ ಅವರು ಕರೋನಾ ವೇಳೆಯಲ್ಲಿ ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಮಾತನಾಡಿಲ್ಲ ತಮ್ಮ ಸ್ವಂತ ಹಣದಿಂದ ಬಡವರಿಗೆ ಕಿಟ್ ನೀಡಿಲ್ಲ. . ಇಂದಿರಾ ಕ್ಯಾಂಟೀನ್ ಮಂಜೂರಿ ಆಗಿ ಒಂದು ವರ್ಷ ಕಳೆದರೂ ಓಪನಿಂಗ್ ಮಾಡಿಲ್ಲ, ಪ್ರೋಟೋಕಾಲ್ ಪ್ರಕಾರ ಕಾರ್ಯಕ್ರಮ ಇಲ್ಲ. ಸಾರ್ವಜನಿಕರಿಗೆ ಕರೋನಾ ಮಾರ್ಗಸೂಚಿಗಳನ್ನು ತಿಳಿಸಿ ಹೇಳಿ ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕಾದ ಇವರೇ ಎಲ್ಲಾ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಜನಜಾತ್ರೆ ಸೇರಿಸಿ ಇಂದು ಮಿನಿವಿಧಾನಸೌಧದ ಪೂಜಾ ಕಾರ್ಯಕ್ರಮ ನೆರವೇರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೋವಿಡ್ ಹೆಚ್ಚಳವಾದರೆ ಅದಕ್ಕೆ ಇವರೇ ನೇರ ಕಾರಣರಾಗುತ್ತಾರೆ. ಬಡಜನರಿಗೆ ಜನಸಾಮಾನ್ಯರಿಗೆ ಇರುವಂತಹ ಕೋವಿಡ್ ಕಾನೂನುಗಳು ಸಭಾಪತಿಗಳಿಗೆ ಅನ್ವಯವಾಗುವುದಿಲ್ಲ ವೇ. ಎಸಿ, ತಸಿಲ್ದಾರ್, ತಾಲೂಕ ಪಂಚಾಯತ್ ಎಕ್ಸಿಕ್ಯೂಟಿವ್ ಅಧಿಕಾರಿ, ಡಿವೈಎಸ್ಪಿ, ಸಿಪಿಐ ಅವರುಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆದರೂ ಯಾಕೆ ಯಾರೊಬ್ಬರೂ ಧ್ವನಿಯೆತ್ತುತ್ತಿಲ್ಲ. ಇಂದಿನ ಘಟನೆಯ ಬಗ್ಗೆ ಜಿಲ್ಲಾಡಳಿತದಿಂದ ಸೂಕ್ತ ಕ್ರಮವಾಗಬೇಕು
ವಸಂತ ಎಲ್. ನಾಯ್ಕ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಿದ್ದಾಪುರ




