ಸಿನೆಮಾ ಮಂದಿ ಸುದ್ದಿ…..ಶೃತಿ ಅಧ್ಯಕ್ಷೆ, ರಮೇಶ್ ಕೃತಜ್ಞತೆ!

ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷೆಯಾಗಿ ನಟಿ ಶ್ರುತಿ ನೇಮಕ

ಚಿತ್ರನಟಿ ಹಾಗೂ ಬಿಜೆಪಿ ಸದಸ್ಯೆ ಶ್ರುತಿ ಅವರನ್ನು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

Shruthi

ಆರೋಗ್ಯ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನಿಸುವ ಕೃತಜ್ಞ ವಾಹನಕ್ಕೆ ನಟ ರಮೇಶ್ ಅರವಿಂದ್ ಚಾಲನೆ

ಪ್ರತಿಯೊಬ್ಬ ಕೋವಿಡ್ ವಾರಿಯರ್ಸ್ ಗಳಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಅವರ ಋಣ ಎಲ್ಲರ ಮೇಲೂ ಇದೆ ಎಂದು ನಟ ರಮೇಶ್ ಅರವಿಂದ್ ಹೇಳಿದ್ದಾರೆ.

Ramesh_Aravind_flag_up1

ಬೆಂಗಳೂರು: ಪ್ರತಿಯೊಬ್ಬ ಕೋವಿಡ್ ವಾರಿಯರ್ಸ್ ಗಳಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಅವರ ಋಣ ಎಲ್ಲರ ಮೇಲೂ ಇದೆ ಎಂದು ನಟ ರಮೇಶ್ ಅರವಿಂದ್ ಹೇಳಿದ್ದಾರೆ.

ನಗರದ ಟೆನ್ನಿಸ್ ಅಸೋಸಿಯೇಷನ್ ನಲ್ಲಿ ಕಾವೇರಿ ಆಸ್ಪತ್ರೆ ವತಿಯಿಂದ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಹಾಗೂ ಕೃತಜ್ಞ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 2 ವರ್ಷದಿಂದ ವಿಶ್ವಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ವಾರಿಯರ್ಸ್ ಗಳಿಂದ ಇಂದು ನಾವೆಲ್ಲಾ ಜೀವಂತವಾಗಿದ್ದೇವೆ. ತಾಯಿಯ ಋಣದಂತೆ ಕೋವಿಡ್ ವಾರಿಯರ್ಸ್ ಗಳ ಋಣ ತೀರಿಸುವುದು ಅಸಾಧ್ಯ ಎಂದರು.

https://imasdk.googleapis.com/js/core/bridge3.471.1_en.html#goog_1505403165

ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ವಿಜಯ ಭಾಸ್ಕರನ್ ಮಾತನಾಡಿ, ಕೋವಿಡ್ ವಾರಿಯರ್ಸ್ ಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಜುಲೈ 31ರಂದು ಕೃತಜ್ಞಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದರ ಭಾಗವಾಗಿ ಇಂದಿನಿಂದ 12 ದಿನಗಳಲ್ಲಿ ನಮ್ಮ ತಂಡ 5 ವಾಹನಗಳಲ್ಲಿ ನಗರದ 300ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಕೋವಿಡ್ ವಾರಿಯರ್ಸ್ ಗಳನ್ನು ಸನ್ಮಾನಿಸಿ ಪ್ರಶಸ್ತಿ ನೀಡಲಿದೆ. ಜೊತೆಗೆ ಕೋವಿಡ್ ಚಿಕಿತ್ಸೆಗಾಗಿ ಹೊಸ ಆವಿಷ್ಕಾರ ಮಾಡಿದ ಆಸ್ಪತ್ರೆಗಳಿಗೆ ವಿಶೇಷ ವರ್ಗದಲ್ಲಿ ಪಶಸ್ತಿ ನೀಡಲಿದ್ದೇವೆ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ವಾರಿಯರ್ಸ್ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ  2 ಲಕ್ಷದವರೆಗೆ ವಿದ್ಯಾರ್ಥಿ ವೇತನ ಹಾಗೂ ಪದವೀಧ ರ ಮಕ್ಕಳಿಗೆ ಉದ್ಯೋಗ ಕೊಡಿಸಲು ಮುಂದಾಗಿದ್ದೇವೆ. ಸಂಬಂಧಪಟ್ಟ ಕುಟುಂಬಗಳು ನೋಂದಣಿ ಮಾಡಿಕೊಳ್ಳಬಹುದು ಎಂದರು. ಮೊದಲ ದಿನದಂದು ತಂಡ ಕೃತಜ್ಞಾ ವಾಹನದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಅಲ್ಲಿನ ಸಿಬ್ಬಂದಿಯನ್ನು ಸನ್ಮಾನಿಸಿತು. ಈ ವೇಳೆ ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ. ವಿಲ್ಫೆಂಡ್ ಸ್ಯಾಮ್ಸನ್ ಉಪಸ್ಥಿತರಿದ್ದರು.

ಬೆಂಗಳೂರು: ಚಿತ್ರನಟಿ ಹಾಗೂ ಬಿಜೆಪಿ ಸದಸ್ಯೆ ಶ್ರುತಿ ಅವರನ್ನು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ರಾಜ್ಯಪಾಲರ ಆದೇಶದ ಅನುಸಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಶ್ರುತಿ ಅವರು ಮದ್ಯಪಾನ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾ ರೆ ಎಂದು ತಿಳಿಸಿದೆ.

https://imasdk.googleapis.com/js/core/bridge3.471.1_en.html#goog_1091149064

ಈ ಹಿಂದೆ ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಹುದ್ದೆಯಿಂದ ಇತ್ತೀಚೆಗಷ್ಟೇ ಕೆಳಗಿಳಿದಿದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *