ಮಳೆಗಾಲದ ಎಲ್ಲರ ಆಯ್ಕೆಯ ಪ್ರವಾಸಿತಾಣ ಹುಸೂರು ಜಲಪಾತ

ನಾವು ಜೋಗನೋಡಲು ಬಂದವರು ನಮಗೆ ಸ್ಥಳಿಯರು ಈ ಹುಸೂರು ಜಲಪಾತದ ಮಾಹಿತಿ ನೀಡಿದರು. ಇದು ಅದ್ಭುತ ತಾಣ, ಇಲ್ಲಿ ಎಳೆಯಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಎಲ್ಲರೂ ಬಂದು ಇಲ್ಲಿಯ ಸೊಬಗು ಸವಿಯಬಹುದು. ನಾವಂತೂ ಈ ಜಲಪಾತ ನೋಡಿ ಮನಸೋತಿದ್ದೇವೆ- ವರುಣ್, ಬೆಂಗಳೂರಿನ ಯುವಕ

local news-ಸಿದ್ದಾಪುರ ತಾಲೂಕಿನ ಹೊಸಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಮಹಾಬಲೇಶ್ವರ ರಾಮ ನಾಯ್ಕ ಅವರ ಆಕಳಿಗೆ ಧಾರವಾಡ ಹಾಲು ಒಕ್ಕೂಟದಿಂದ ವಿಮೆ ಮಾಡಿದ್ದು ಅದು ಅನಾರೋಗ್ಯದಿಂದ ಮರಣ ಹೊಂದಿರುವುದರಿಂದ ಒಕ್ಕೂಟದಿಂದ 37ಸಾವಿರ ರೂಗಳ ಪರಿಹಾರದ ಚೆಕ್ ನೀಡಲಾಗಿದ್ದು ಅದನ್ನು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಗುರುವಾರ ವಿತರಿಸಿದರು.ಸಂಘದ ಅಧ್ಯಕ್ಷ ನಾಗಪತಿ ಡಿ.ನಾಯ್ಕ, ವಿಸ್ತರಣಾಧಿಕಾರಿ ಪ್ರಕಾಶ ಕೆ, ಕಾರ್ಯದರ್ಶಿ ಗಂಗಾಧರ ರಾಮ ನಾಯ್ಕ ಇದ್ದರು.

ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತೌರೂರು, ಇಲ್ಲಿಯ ಮಳೆಗಾಲವೆಂದರೆ ತುಸು ಆತಂಕದ ಜೊತೆಗೆ ಬರಪೂರ್ ಸಂತೋಷದ ಕಾಲ. ಕಣ್ಣಳತೆಯವರೆಗೂ ಕಾಣುವ ಹಸಿರ ನಡುವೆ ಗುಡ್ಡ, ಬೆಟ್ಟಗಳನ್ನು ಸೀಳಿ ಬರುವ ಜಲಪಾತಗಳೆಷ್ಟು ಎಂದು ಎಣಿಸಿದವರ್ಯಾರು? ಜಿಲ್ಲೆಯ  ಅಸಂಖ್ಯ ಜಲಪಾತಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧಿಗೆ ಬಂದಿದ್ದು ಈ ಹುಸೂರು ಜಲಪಾತ.

ಶಿವಮೊಗ್ಗ ಜಿಲ್ಲೆಯ ಗಡಿ ಸಾಗರ ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಿಂದ ಆಡುಕಟ್ಟಾ ಬಳಿ ತಿರುಗಿಕೊಂಡು ಹತ್ತು ಕಿಲೋಮೀಟರ್ ಕ್ರಮಿಸಿದರೆ ತೋಟ-ಗದ್ದೆಗಳ ನಡುವೆ ಗುಡ್ಡ ಬೆಟ್ಟಗಳ ಅಡಿಯಲ್ಲಿ ನಿಪ್ಲಿ ಜಲಾಶಯ ಎದುರಾಗುತ್ತದೆ.
ಈ ನಿಪ್ಲಿ ಜಲಾಶಯವೇ ಮುಂದೆ ಹುಸೂರು ಗ್ರಾಮದ ರಸ್ತೆಯಂಚಿನ  ಹೊಳೆಯಲ್ಲಿ ಜಲಪಾತವಾಗಿ ಧುಮುಕುತ್ತದೆ. ಮಳೆಗಾಲದ ನಾಲ್ಕೈದು ತಿಂಗಳು ಧುಮ್ಮಿಕ್ಕಿ ಹರಿಯುವ ಈ ಹುಸೂರು ಜಲಪಾತ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಜಲಾಶಯದ ಕೆಳಗೆ ಎರಡ್ಮೂರು ಹಂತಗಳಲ್ಲಿ ತೊರೆಯಾಗಿ ಧುಮುಕುವ ಈ ನದಿ ಸಿದ್ಧಾಪುರದ ಜೀವನದಿ. ಇದೇ ನದಿ ಜಲಪಾತವಾಗಿ ಹರಿದಾಗ ಪ್ರವಾಸಿಗರಿಗೆ ಸ್ವರ್ಗಸದೃಶ ಅನುಭವ ನೀಡುವ ಜಲಲಧಾರೆ.


 ಜಗತ್ಫಸಿದ್ಧ ಜೋಗದಿಂದ 20 ಕಿಲೋಮೀಟರ್ ಸಮೀಪದ ಈ ಹುಸೂರು ಜಲಪಾತ  ಇಷ್ಟು ಸುರಕ್ಷಿತ,ಸುಲಭದ ಪ್ರವಾಸಿ ತಾಣವಾದರೂ ಪ್ರವಾಸಿಗರ ಕಣ್ಣಿಗೆ ಬಿದ್ದಿರಲಿಲ್ಲ. ಆದರೆ ಮಾಧ್ಯಮಗಳಿಂದ  ಇತ್ತೀಚಿನ ವರ್ಷಗಳಲ್ಲಿ ಬೆಳಕಿಗೆ ಬಂದು ಪ್ರಸಿದ್ಧವಾಗಿರುವ ಈ ತಾಣ ಈಗ ಪ್ರವಾಸಿಗರ ನೆಚ್ಚಿನ ತಾಣವಾಗಿ ಪ್ರಸಿದ್ಧವಾಗಿದೆ. ಶಿರಸಿಯಿಂದ 50 ಕಿಲೋ ಮೀಟರ್, ಸಾಗರದಿಂದ 30 ಕಿಲೋ ಮೀಟರ್ ದೂರದ ಈ ತಾಣ ಬನವಾಸಿ, ಜೋಗ, ಗೇರುಸೊಪ್ಪಾಗಳ ಮಧ್ಯವರ್ತಿ ಕೇಂದ್ರ ವಾಗಿ ಜನರ ಗಮನ ಸೆಳೆಯುತ್ತಿರುವುದರಿಂದ ಇಲ್ಲಿ ಈಗ ನಿತ್ಯ ಜಾತ್ರೆ.
ಮಳೆ, ಪ್ರವಾಹದ ಅವಧಿ,ಲಾಕ್ ಡೌನ್ ಸಂದರ್ಭಗಳನ್ನು ಬಿಟ್ಟು ಉಳಿದ ಸಮಯದಲ್ಲಿ ಇಲ್ಲಿ ಕುಟುಂಬಸಮೇತ ಪ್ರವಾಸಕ್ಕೆ ಬರುವವರಿಗೆ ಇದಕ್ಕಿಂತ ಸುಂದರ- ಸುರಕ್ಷಿತ ತಾಣ ಬೇರೆ ಇಲ್ಲ. ಮಳೆರಭಸ ಕಳೆದುಕೊಂಡಾಗ ಮನಸೋಇಚ್ಛೆ ಮಿಂದು,ಕುಣಿದು-ಕುಪ್ಪಳಿಸಲು ಅನುಕೂಲಕರವಾದ ಈ ತಾಣ ಈಗ  ೆ ಎಲ್ಲರ ಪಯಣ,ಪ್ರವಾಸದ ಆಯ್ಕೆ ಎನ್ನುವುದೇ ಈ ಹುಸೂರು ಜಲಪಾತದ ವೈಶಿಷ್ಟ್ಯ.

ಪೊಲೀಸ್ ಕಣ್ಗಾವಲು, ಭದ್ರತೆ ಇರುವ, ವಾಹನ ನಿಲುಗಡೆ ವ್ಯವಸ್ಥೆ ಮಾಡಿರುವ ಹುಸೂರು ಗ್ರಾಮ ಸಮೀತಿ ಹೊರಗಿನ ಪ್ರವಾಸಿಗರಿಗೆ ಜಲಾಶಯಕ್ಕೆ ಹೋಗದಂತೆ,ಸರಳವಾಗಿ ನೀರಿನಲ್ಲಿ ಸಂಬ್ರಮಿಸಲು ತಿಳಿಹೇಳುತ್ತದೆ. ಪ್ರವಾಸಿಗರು ದಾಂಧಲೆ, ಮಂಗಾಟ ಮಾಡಿದರೆ ಪೊಲೀಸರ ನೆರವು ಪಡೆದು ಶಿಕ್ಷಿಸಲೂ ಹೆದರಲ್ಲ ಹಾಗಾಗಿ ನಿಯಮ, ನಾಗರಿಕ ನೀತಿ- ರೀತಿ ಪ್ರಕಾರ ವರ್ತಿಸುವುದು ಪ್ರವಾಸಿಗರಿಗೆ ಕ್ಷೇಮ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *