





ಶಿವಮೊಗ್ಗ ಜಿಲ್ಲೆ ಸಾಗರದ ಸೆಂಟ್ ಜೊಸೆಫ್ ಬೆಥನಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸುಧನ್ವ ಮತ್ತು ಸುಧನ್ಯ ಅವಳಿ ಸಹೋದರರು ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಮಾನ ಅಂಕಗಳನ್ನು ಪಡೆಯುವ ಮೂಲಕ ದಾಖಲೆ ಮಾಡಿದ್ದಾರೆ. ಸೊರಬ ಜೇಡಗೇರಿಯ ವೈದ್ಯ ಡಾ. ನಾಗೇಂದ್ರಪ್ಪ ಮತ್ತು ಗಾಯತ್ರಿ ದಂಪತಿಗಳ ಮಕ್ಕಳಾದ ಈ ಅವಳಿಗಳು 625 ಕ್ಕೆ 615 ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ.
ಡಾ. ನಾಗೇಂದ್ರಪ್ಪ ಸಾಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಫತ್ರೆಯ ವೈದ್ಯರು. ಅವಳಿ ಸಹೋದರರಾದ ಈ ಮಕ್ಕಳು ಮೊದಲಿನಿಂದಲೂ ಉತ್ತಮವಾಗೇ ಓದುತಿದ್ದಾರೆ. ಈ ಹಿಂದೆ ಸಣ್ಣ-ಪುಟ್ಟ ವ್ಯತ್ಯಾಸಗಳಿಂದ ಪರಸ್ಫರ ಸ್ಫರ್ಧೆಯಲ್ಲಿದ್ದವರು. ಈ ವರ್ಷ ಸಮಾನ ಅಂಕಗಳನ್ನು ಗಳಿಸಿ ಮೆಚ್ಚುಗೆ ಗಳಿಸಿದ್ದಾರೆ.ಇದು ತಮಗೂ ವಿಶೇಶ ಎಂದಿದ್ದಾರೆ.


