

ಹಲವರ ತ್ಯಾಗ, ಬಲಿದಾನ, ಹೋರಾಟದ ಫಲವಾಗಿ ಲಭಿಸಿರುವ ಸ್ವಾತಂತ್ರ್ಯ ಗೌರವಿಸುವುದೆಂದರೆ ಉತ್ತಮ ಕೆಲಸದಿಂದ ಸಾರ್ವಜನಿಕರನ್ನು ಗೌರವಿಸುವುದು ಎಂದು ತಹಸಿಲ್ಧಾರ್ ಪ್ರಸಾದ್ ಎಸ್.ಎ. ಹೇಳಿದರು. ಸಿದ್ಧಾಪುರದ ನೂತನ ತಹಸಿಲ್ಧಾರ್ ಕಛೇರಿಯಲ್ಲಿ ನಡೆದ ಮೊದಲ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮಾಡಿದ ನಂತರ ಮಾತನಾಡಿದ ಅವರು ಪರತಂತ್ರದ ನೋವು, ಹಿಂಸೆ ನಮಗಿಲ್ಲ, ನಾವೂ ಸಾರ್ವಜನಿಕರಿಗೆ ಹಿಂಸಿಸಿದರೆ ಪ್ರಜಾಪ್ರಭುತ್ವಕ್ಕೆ, ಸ್ವಾತಂತ್ರ್ಯಕ್ಕೆ ಗೌರವ ಬರುವುದಿಲ್ಲ ಉತ್ತಮ ಕೆಲಸದ ಮೂಲಕ ಸ್ವಾತಂತ್ರ್ಯ, ಸ್ವಾತಂತ್ರ್ಯಕ್ಕಾಗಿ ದುಡಿದ, ಮಡಿದ ಧೀರರಿಗೆ ಗೌರವ ಸಲ್ಲಿಸಬೇಕು ಎಂದರು.
ನಂತರ ನೆಹರೂ ಮೈದಾನದಲ್ಲಿ ನಡೆದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿ ಪಾತ್ರ ಮಹತ್ವದ್ದು, ಮಹಾತ್ಮ ಗಾಂಧಿಯವರೊಂದಿಗೆ ಲಕ್ಷಾಂತರ ಜನ ಸ್ವಾತಂತ್ರ್ಯ ಹೋರಾಟಮಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿದ್ದಾರೆ ಅಂಥವರ ಸ್ಮರಣೆ ಮಾಡುತ್ತಾ ಅಭಿವೃದ್ಧಿಯೊಂದಿಗೆ ದೇಶ ಮುನ್ನಡೆಸಲು ಸಹಕರಿಸುವುದೇ ಪ್ರತಿಯೊಬ್ಬ ನಾಗರಿಕ ದೇಶದ ಸ್ವಾತಂತ್ರ್ಯ, ಸ್ವಾತಂತ್ರ್ಯ ಹೋರಾಟಕ್ಕೆ ನೀಡುವ ಕೊಡುಗೆ ಎಂದರು. ಇದೇ ಸಮಯದಲ್ಲಿ ತಾಲೂಕಿನಲ್ಲಿ ಪಿ.ಯು.ಸಿ. ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಗೌರವಿಸಿ, ಅಭಿನಂದಿಸಲಾಯಿತು.


75ನೇ ಸ್ವಾತಂತ್ರ್ಯ ದಿನಾಚರಣೆ: ಜನತೆಗೆ ಶುಭಾಶಯ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ
ದೇಶದಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆಮಾಡಿದ್ದು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಬೆಂಗಳೂರು: ದೇಶದಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆಮಾಡಿದ್ದು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸಮಸ್ತ ಭಾರತೀಯರಿಗೆ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವದ ಹಾರ್ದಿಕ ಶುಭಾಶಯಗಳು. ಸ್ವತಂತ್ರ ಭಾರತಕ್ಕಾಗಿ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಪೂರ್ವಕ ನಮನಗಳು. ಸ್ವಾತಂತ್ರ್ಯದ ಸಂಭ್ರಮಾಚರಣೆಯ ಜೊತೆಗೆ ಸಂರಕ್ಷಣೆಯ ಕರ್ತವ್ಯವನ್ನೂ ನಾವು ನಿರ್ವಹಿಸೋಣ ಎಂದು ಹೇಳಿದ್ದಾರೆ. (kpc)



