

ರಾಜ್ಯದಲ್ಲಿ ಆಗಸ್ಟ್ 23 ರಿಂದ 9, 10ನೇ ತರಗತಿ ಶಾಲೆ ಆರಂಭಿಸಲು ಮಾರ್ಗಸೂಚಿ ಬಿಡುಗಡೆ
ರಾಜ್ಯದಲ್ಲಿ ಆಗಸ್ಟ್ 23 ರಿಂದ 9 ಮತ್ತು 10ನೇ ತರಗತಿ ಪ್ರಾರಂಭಿಸಲು ರಾಜ್ಯ ಸರ್ಕಾರ ಸೋಮವಾರ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಅಣಶಿ ಘಾಟ್ ಪುನಃ ತೆರೆಯಲು ಬೆಂಗಳೂರಿನ ಐಐಎಸ್ ಸಿ ಸಹಾಯ ಕೋರಿದ ಉತ್ತರ ಕನ್ನಡ ಜಿಲ್ಲಾಡಳಿತ
ಭಾರೀ ಭೂಕುಸಿತದಿಂದಾಗಿ ನಿರ್ಬಂಧಿಸಲಾಗಿರುವ ಅಣಶಿ ಘಾಟ್ ತೆರೆಯಲು ಮಾರ್ಗಗಳನ್ನು ಕಂಡುಕೊಳ್ಳಲು ಉತ್ತರ ಕನ್ನಡ ಜಿಲ್ಲಾಡಳಿತವು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಹಾಯ ಪಡೆಯುತ್ತಿದೆ.

ಕಾರವಾರ: ಭಾರೀ ಭೂಕುಸಿತದಿಂದಾಗಿ ನಿರ್ಬಂಧಿಸಲಾಗಿರುವ ಅಣಶಿ ಘಾಟ್ ತೆರೆಯಲು ಮಾರ್ಗಗಳನ್ನು ಕಂಡುಕೊಳ್ಳಲು ಉತ್ತರ ಕನ್ನಡ ಜಿಲ್ಲಾಡಳಿತವು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಹಾಯ ಪಡೆಯುತ್ತಿದೆ.
ಉತ್ತರ ಕನ್ನಡವು ಧಾರವಾಡ ಮತ್ತು ಬೆಳಗಾವಿಯೊಂದಿಗೆ ನೇರ ಸಂಪರ್ಕವನ್ನು ಕಳೆದುಕೊಂಡಿದೆ, ಹೀಗಾಗಿ ಜಿಲ್ಲಾಡಳಿತವು ಘಾಟ್ ಅನ್ನು ಮತ್ತೆ ತೆರೆಯಲು ತಜ್ಞರ ಸಹಾಯವನ್ನು ಅವಲಂಬಿಸಿದೆ.
ಪ್ರಾಕೃತಿಕ ವಿಕೋಪವು ಜಿಲ್ಲೆಗೆ ತೀವ್ರ ಹೊಡೆತ ನೀಡಿದೆ. ಬಹುತೇಕ ಎಲ್ಲಾ ಸೇತುವೆಗಳು, ರಸ್ತೆಗಳು ಮತ್ತು ಘಾಟ್‌ಗಳ ಮೇಲೆ ಪರಿಣಾಮ ಬೀರಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
“ಅರ್ಬೈಲ್ ಘಾಟ್ ಹೊರತುಪಡಿಸಿ, ಬೇರೆ ಯಾವುದೇ ಘಾಟ್‌ಗಳನ್ನು ಈ ಸಮಯದಲ್ಲಿ ಸುರಕ್ಷಿತವೆಂದು ಪರಿಗಣಿಸಲಾಗಿಲ್ಲ. ಜೋಯಿಡಾವನ್ನು ಕಾರವಾರದೊಂದಿಗೆ ಸಂಪರ್ಕಿಸುವ ಅಣಶಿ ಘಾಟ್ ಅನ್ನು ನಿರ್ಬಂಧಿಸಲಾಗಿದೆ. ಅದು ಯಾವಾಗ ಮತ್ತೆ ತೆರೆಯುತ್ತದೆ ಎಂದು ನಮಗೆ ಖಚಿತವಿಲ್ಲ” ಎಂದು ಸಚಿವರು ಹೇಳಿದರು.
ಐಐಎಸ್ ಸಿಯಿಂದ ತಜ್ಞರ ತಂಡ ಉತ್ತರ ಕನ್ನಡಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅಧ್ಯಯನ ಮಾಡಲಿದೆ. ಅವರು ಬಂದ ನಂತರ, ನಾವು ಎಸ್ಟಿಮೇಟ್ ಕಳುಹಿಸುತ್ತೇವೆ ಮತ್ತು ಯೋಜನೆಗೆ ಅನುಮೋದಿಸುತ್ತೇವೆ ಎಂದು ಅವರು ಹೇಳಿದರು.
ಹಾನಿಗೊಳಗಾದ ಪ್ರದೇಶಗಳು ಮತ್ತು ಕದ್ರಾ ಮತ್ತು ಇತರ ಸ್ಥಳಗಳಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ಪ್ರಸ್ತಾಪಿಸಿದ ಹೆಬ್ಬಾರ್, ಇಂಧನ ಸಚಿವ ಕೆ. ಸುನೀಲ್ ಕುಮಾರ್ ಜಿಲ್ಲೆಗೆ ಭೇಟಿ ನೀಡಲಿದ್ದು, ಪ್ರವಾಹದಿಂದ ಉಂಟಾದ ಹಾನಿಯ ಮೌಲ್ಯಮಾಪನ ಮಾಡಲಿದ್ದಾರೆ ಎಂದು ಹೇಳಿದರು.




ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23 ರಿಂದ 9 ಮತ್ತು 10ನೇ ತರಗತಿ ಪ್ರಾರಂಭಿಸಲು ರಾಜ್ಯ ಸರ್ಕಾರ ಸೋಮವಾರ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ಮಾಡಿದೆ.
9 ಮತ್ತು 10ನೇ ತರಗತಿಗಳು ಸದ್ಯಕ್ಕೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ನಡೆಯುತ್ತವೆ. ಶಾಲೆಗೆ ಹಾಜರಾಗಲು ವಿದ್ಯಾರ್ಥಿಗಳು ಪೋಷಕರಿಂದ ಸಮ್ಮತಿ ಪತ್ರ ಪಡೆಯಬೇಕು ಎಂದು ಸೂಚಿಸಲಾಗಿದೆ.
ಮೊದಲೇ ಹೇಳಿದಂಥೆ ಪಾಸಿಟಿವಿಟಿ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಯಲ್ಲಿ ಶಾಲೆಗಳಲ್ಲಿ ಶಾಲೆಗಳು ಆರಂಭವಾಗಲಿದೆ.
9 ಮತ್ತು 10ನೇ ತರಗತಿ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ. ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿ ಮಾಡಲು ಅನುಮತಿ ನೀಡಲಾಗಿದೆ. ಶಾಲೆಗೆ ಆಗಮಿಸಲು ಪೋಷಕರ ಅನುಮತಿ ಪತ್ರ ಕಡ್ಡಾಯ ಜತೆಗೆ ಮಗುವಿನ ಆರೋಗ್ಯ ಪ್ರಮಾಣ ಪತ್ರ ಕಡ್ಡಾಯವಾಗಿದೆ.
ಮನೆಯಿಂದಲೇ ಮಕ್ಕಳು ಕುಡಿಯುವ ನೀರು, ಉಪಹಾರ ತರಬೇಕು ಭೌತಿಕ ತರಗತಿ ಹಾಜರಾತಿ ಕಡ್ಡಾಯವಲ್ಲ. ಆನ್‌ಲೈನ್ ಅಥವಾ ಭೌತಿಕ ಎರಡರಲ್ಲಿ ಒಂದರಲ್ಲಿ ಹಾಜರಾತಿ ಅಗತ್ಯ. ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಬಿಸಿನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಭೌತಿಕ ತರಗತಿ ನಡೆಯಲಿದೆ. ಶನಿವಾರ ಮಾತ್ರ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ಭೌತಿಕ ತರಗತಿ ನಡೆಯಲಿದೆ ಎಂದು ತಿಳಿಸಲಾಗಿದೆ.
* ಶಾಲೆಯನ್ನು ಸಾನಿಟೈಸ್ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
* ಶಿಕ್ಷಕರು ಮಾಸ್ಕ್ ಧರಿಸುವುದು ಕಡ್ಡಾಯ
* 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸಬೇಕು
* ಅಡುಗೆ ಮನೆ ಮತ್ತು ದಾಸ್ತಾನು ವಸ್ತುಗಳನ್ನು ಸಂಪೂರ್ಣವಾಗಿ ಕ್ಲೀನ್ ಮಾಡಬೇಕು
* ಬಿಸಿ ನೀರಿನ ವ್ಯವಸ್ಥೆ ಮಾಡಬೇಕು
* ಶಾಲೆ ಪ್ರವೇಶ ಮಾರ್ಗದದಲ್ಲಿ ಕನಿಷ್ಠ 3 ರಿಂದ 6 ಅಡಿ ಅಂತರದಲ್ಲಿ ವೃತ್ತ ಹಾಕಬೇಕು
* ಸಾಮಾಜಿಕ ಅಂತರ ಪಾಲಿಸುವ ಪೋಸ್ಟರ್ ಅಳವಡಿಕೆ ಮಾಡಬೇಕು
* ಪ್ರತಿ ದಿನ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆರೋಗ್ಯದ ಮಾಹಿತಿ ದಾಖಲಿಸಬೇಕು
* ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತ ಕಲಿಕೆಯಾಗಬೇಕು
* ಶಿಕ್ಷಕರು ಕನಿಷ್ಠ ಒಂದು ಸಾರಿಯಾದರೂ ಲಸಿಕೆ ಪಡೆದುಕೊಂಡಿದ್ದಾರೆಯೇ? ಎಂಬುದನ್ನು ತಿಳಿಸಬೇಕು
* ಕೊರೋನಾ ನಿಯಮಗಳು ಪಾಲನೆಯಾಗುತ್ತ ಇದೆಯೇ? ಇಲ್ಲವೇ? ಎಂಬುದರ ಮೇಲ್ವಿಚಾರಣೆ ನೋಡಲ್ ಅಧಿಕಾರಿಯ ಜವಾಬ್ದಾರಿ
* ಎಸ್‌ಡಿಎಂಸಿ ಸಮಿತಿ ಜತೆ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆ ನಡೆಸಬೇಕು ಎಂಬ ನಿಯಮಗಳನ್ನು ತಿಳಿಸಲಾಗಿದೆ. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
