Rfc-ಸೈಕಲ್ ಪರ್ಯಟನೆ : ಜಿಲ್ಲಾಧಿಕಾರಿಗೆ ಮನವಿ & ‘ರಾಮೋಜಿ ಫಿಲಂ​ ಸಿಟಿ’ ಅಕ್ಟೋಬರ್​​ 8ರಿಂದ ಪುನಾರಂಭ

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ವಿದ್ಯಾರ್ಥಿಯಿಂದ ಸೈಕಲ್ ಪರ್ಯಟನೆ : ಜಿಲ್ಲಾಧಿಕಾರಿಗೆ ಮನವಿ

ಕಾರವಾರ : ದೇಶ ಹಾಗೂ ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸುವ ಜೊತೆಗೆ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಯುವಕನೋರ್ವ ಸೈಕಲ್ ಪರ್ಯಟನೆ ಹೊರಟಿದ್ದು, ಶುಕ್ರವಾರ ಕಾರವಾರಕ್ಕೆ ಬಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾನೆ.

ಬೆಂಗಳೂರಿನ ಬನ್ನೇರುಘಟ್ಟದ ನಿವಾಸಿಯಾಗಿರುವ ಬಿ.ಎ.ಪ್ರಥಮ ವರ್ಷದ ಕಿರಣ್ ವಿ. ಸೈಕಲ್ ಜಾಥಾ ನಡೆಸುತ್ತಿರುವ ವಿದ್ಯಾರ್ಥಿ.ದೇಶ ಹಾಗೂ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದು,ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ.ಆದರೆ ಇಂತಹ ಕೃತ್ಯದಲ್ಲಿ ಭಾಗಿಯಾದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತಾಗಬೇಕು ಎಂದು ಆ.22 ರಂದು ಬೆಂಗಳೂರಿನಿಂದ ಹೊರಟಿರುವ ಯುವಕ 17 ಜಿಲ್ಲೆಗಳಿಗೆ ತೆರಳಿ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾನೆ.

ಶುಕ್ರವಾರ ಬೆಳಗಾವಿ ಮೂಲಕ ಕಾರವಾರ ಪ್ರವೇಶಿಸಿರುವ ಯುವಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಕನ್ನಡದ ಭಾವುಟ ಹಾಗೂ ಸೈಕಲ್ ಮುಂಭಾಗದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಬರೆದಿರುವ ಬೋರ್ಡ್ ತೂಗಿಕೊಂಡು ಇದೀಗ ಹಾವೇರಿ ಕಡೆ ಸೈಕಲ್ ಜಾಥಾ ಮುಂದುಚರಿಸಿದ್ದಾನೆ.

ವಿವಿಧ ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಿ ಹಾಗೂ ರಸ್ತೆಯಲ್ಲಿ ತೆರಳುವಾಗ ವಿಚಾರಿಸುವವರಿಗೆ ಅತ್ಯಾಚಾರ ತಡೆಗಟ್ಟಲು ಕಠಿಣ ಕಾನೂನಿಗೆ ಆಗ್ರಹಿಸುವಂತೆ ಮನವರಿಕೆ ಮಾಡುತ್ತಿದ್ದೇನೆ.ದೇಶ ಹಾಗೂ ರಾಜ್ಯದಲ್ಲಿ ಅತ್ಯಾಚಾರ ನಿಲ್ಲಬೇಕು.ಈ ಕಾರಣದಿಂದ ರಾಜ್ಯದ 31 ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬಳಿಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಕಠಿಣ ಕಾನೂನು ಜಾರಿಗೆ ಆಗ್ರಹಿಸುವುದಾಗಿ ಯುವಕ ತಿಳಿಸಿದ್ದಾನೆ.

Ramoji Film City

ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ ‘ರಾಮೋಜಿ ಫಿಲಂ​ ಸಿಟಿ’ ಅಕ್ಟೋಬರ್​​ 8ರಿಂದ ಪುನಾರಂಭ

ಮಹಾಮಾರಿ ಕೊರೊನಾ ವೈರಸ್​​ನಿಂದಾಗಿ ಬಂದ್​ ಆಗಿದ್ದ ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ ‘ರಾಮೋಜಿ ಫಿಲಂ ಸಿಟಿ’ ಅಕ್ಟೋಬರ್​​ 8ರಿಂದ ಪುನಾರಂಭಗೊಳ್ಳಲಿದ್ದು, ಪ್ರವಾಸಿಗರ ಸ್ವಾಗತಕ್ಕಾಗಿ ಮದುವಣಗಿತ್ತಿಯಂತೆ ಸಿಂಗಾರಗೊಂಡು ಸಜ್ಜಾಗಿ ನಿಂತಿದೆ.

ಹೈದರಾಬಾದ್​(ತೆಲಂಗಾಣ): ರಾಮೋಜಿ ಫಿಲಂ ಸಿಟಿ. ಈ ಹೆಸರು ಕೇಳದಿರುವವರೇ ಕಡಿಮೆ. ಆರ್‌ಎಫ್‌ಸಿ ಎಂಬ ಶಬ್ದ ಕಿವಿಗೆ ಬಿದ್ದ ತಕ್ಷಣ ಕಣ್ಣೆದುರು ಸುಂದರ ಲೋಕದ ಚಿತ್ರಣ ಮೂಡುತ್ತದೆ. ಸ್ಟಾರ್ಟ್ ಕ್ಯಾಮರಾ… ಆ್ಯಕ್ಷನ್…’ ಎಂಬ ಶಬ್ದ ಅನುರಣಿಸುತ್ತದೆ. ಅದೆಷ್ಟೋ ಸಿನಿಮಾಗಳ ಸೌಂದರ್ಯವನ್ನು ಹೆಚ್ಚಿಸಿದ ಸುಂದರ ತಾಣವಿದು. ಹೀಗಾಗಿ, ಒಮ್ಮೆಯಾದರೂ ಈ ಫಿಲಂ ಸಿಟಿಯ ಸೌಂದರ್ಯವನ್ನು ಆಸ್ವಾದಿಸಬೇಕೆಂಬ ಹೆಬ್ಬಯಕೆ ಎಲ್ಲರಲ್ಲೂ ಖಂಡಿತಾ ಇರುತ್ತದೆ.

ಇವರ ಈ ಬಯಕೆಗೆ ಸರಿಯಾಗಿ ರಾಮೋಜಿ ಫಿಲಂ ಸಿಟಿ ಒಳಹೊಕ್ಕು ಒಂದು ಸಲ ದೃಷ್ಟಿಹಾಯಿಸಿದರೆ ಸಾಕು, ಕಿರಿಯರಿಂದ ಹಿಡಿದು ಹಿರಿಯರತನಕ ಎಲ್ಲರ ಕಣ್ಣಿಗೂ ಹಬ್ಬದ ಸಂಭ್ರಮ ತರುವ, ಮನಸ್ಸಿಗೆ ಮುದ ನೀಡುವ ಭರಪೂರ ಮನರಂಜನೆಗಳು ಇಲ್ಲಿವೆ. ಆದರೆ, ಕೊರೊನಾ ವೈರಸ್ ಅಬ್ಬರಿಸುತ್ತಿದ್ದ ಕಾರಣದಿಂದ ಜನರ ಸುರಕ್ಷತೆಯ ದೃಷ್ಟಿಯಿಂದ ಮತ್ತು ಸರ್ಕಾರದ ಮಾರ್ಗಸೂಚಿಯಂತೆ ರಾಮೋಜಿ ಫಿಲಂ ಸಿಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ, ಈ ಚಿತ್ರನಗರಿಯಲ್ಲಿ ಖುಷಿ ಮತ್ತೆ ಮರಳಿದೆ. ಪ್ರವಾಸಿಗರ ಸ್ವಾಗತಕ್ಕಾಗಿ ರಾಮೋಜಿ ಫಿಲಂ ಸಿಟಿ ಸಿಂಗಾರಗೊಂಡು ಸಜ್ಜಾಗಿ ನಿಂತಿದೆ.

ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾದ ರಾಮೋಜಿ ಫಿಲಂ ಸಿಟಿ

ಅಕ್ಟೋಬರ್​​ 8ರಿಂದ ರಾಮೋಜಿ ಫಿಲಂ ಸಿಟಿಗೆ ಭೇಟಿ ನೀಡಲು ಎಂದಿನಂತೆ ಪ್ರವಾಸಿಗರಿಗೆ ಅವಕಾಶ ಸಿಗಲಿದೆ. ಪ್ರವಾಸಿಗರ ಸ್ವಾಗತಕ್ಕಾಗಿ ಚಿತ್ರನಗರಿಯಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಕೋವಿಡ್-19 ಸುರಕ್ಷತಾ ಮುನ್ನೆಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ಯಾವುದೇ ಭಯ, ಆತಂಕ ಇಲ್ಲದೆ ಪ್ರವಾಸಿಗರು ತಮ್ಮ ಕುಟುಂಬ ಸ್ನೇಹಿತರ ಸಮೇತ ಬಂದು ರಜಾದಿನಗಳನ್ನು ಆಹ್ಲಾದಕರವಾಗಿ ಕಳೆಯಬಹುದು.

ಮುತ್ತಿನ ನಗರಿ ಹೈದರಾಬಾದ್​ನ 2,000 ಎಕರೆಯ ವಿಶಾಲ ಪ್ರದೇಶದಲ್ಲಿ ರಾಮೋಜಿ ಫಿಲಂ ಸಿಟಿ ವ್ಯಾಪಿಸಿದೆ. ಇಲ್ಲಿರುವ ಸಿನಿ – ಮ್ಯಾಜಿಕ್, ಥಿಮ್ಯಾಟಿಕ್ ಆಕರ್ಷಣೆಗಳು, ಆಕರ್ಷಕ ಉದ್ಯಾನಗಳು, ಚಿಮ್ಮುವ ಕಾರಂಜಿಗಳು, ಮಕ್ಕಳ ಮನಸ್ಸಿಗೆ ಮುದ ನೀಡುವ ನಾನಾ ಆಟಗಳು, ಸ್ಟಂಟ್ ಲೈವ್ ಶೋಗಳು ಮನಸ್ಸಿಗೆ ಮುದ ನೀಡುತ್ತವೆ.

ರಾಮೋಜಿ ಫಿಲಂ ಸಿಟಿ ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ

ರಾಮೋಜಿ ಫಿಲಂ ಸಿಟಿ ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿಯೆಂದು ‘ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿದೆ. ಚಿತ್ರ ನಗರಿಯ ಮನರಂಜನಾ ಸೌಲಭ್ಯಗಳನ್ನು ತಂತ್ರಜ್ಞಾನ, ವಾಸ್ತುಶಿಲ್ಪ ಮತ್ತು ಭೂ ವಿನ್ಯಾಸ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಅಂತಾರಾಷ್ಟ್ರೀಯ ತಜ್ಞರು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ. ಈ ಸುಂದರ ವಿನ್ಯಾಸ ಇಲ್ಲಿನ ಹಿರಿಮೆಯೂ ಹೌದು.

ಸಿನಿಮಾ ಮಂದಿಯ ನೆಚ್ಚಿನ ತಾಣ

ರಾಮೋಜಿ ಫಿಲಂ ಸಿಟಿ ಸಿನೆಮಾ ಮಂದಿಯ ನೆಚ್ಚಿನ ತಾಣ. ಇಲ್ಲಿ ಅದೆಷ್ಟೋ ಸಿನೆಮಾಗಳು ಸುಂದರ ರೂಪ ಪಡೆದಿವೆ. ಸಮಗ್ರ ಚಲನಚಿತ್ರ ನಿರ್ಮಾಣಕ್ಕೆ ಬೇಕಾದ ಮೂಲಸೌಕರ್ಯ ಮತ್ತು ವೃತ್ತಿಪರ ಸೇವೆಗೆ ರಾಮೋಜಿ ಫಿಲಂ ಸಿಟಿ ಹೆಸರುವಾಸಿ. ಯಾವುದೇ ದಿನವಿರಲಿ ಏಕಕಾಲದಲ್ಲಿ ಹಲವು ಸಿನಿಮಾಗಳನ್ನು ಚಿತ್ರೀಕರಣ ಮಾಡುವಂತಹ ಸಾಮರ್ಥ್ಯ ಇರುವ ಚಿತ್ರನಗರಿ ಇದು. ಈ ವಿಶೇಷತೆಗಳನ್ನು ಹೊಂದಿರುವ ರಾಮೋಜಿ ಚಿತ್ರ ನಗರಿಗೆ ವರ್ಷಕ್ಕೆ ಸುಮಾರು 1.5 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ರಾಮೋಜಿ ಫಿಲಂ ಸಿಟಿ ತನ್ನ ವಿಶಾಲ ಮನರಂಜನಾ ಮತ್ತು ಥಿಮ್ಯಾಟಿಕ್ ರಂಜನೀಯತೆಗೆ ಪ್ರಸಿದ್ಧವಾಗಿದೆ. ಅವುಗಳಲ್ಲಿ ಕೆಲವು ಪ್ರಮುಖ ಆಕರ್ಷಣೆಗಳಿವು.

ಯುರೇಕಾ

ನೃತ್ಯ ಮತ್ತು ಹಾಡಿನ ಸಂಭ್ರಮದೊಂದಿಗೆ ಪ್ರವಾಸಿಗರನ್ನು ಬರಮಾಡಿಕೊಳ್ಳುವ ಫಿಲಂ ಸಿಟಿ, ಮಧ್ಯಕಾಲೀನ ಕೋಟೆಗಳ ಮಾದರಿಯ ಬೃಹತ್ ಕಟ್ಟಡಗಳು ನೋಡುಗರನ್ನು ಸಾಮ್ರಾಟರ ಆಳ್ವಿಕೆಯತ್ತ ಕರೆದೊಯ್ಯುತ್ತವೆ. ಮಕ್ಕಳ ಆಟದ ಅಂಗಳಗಳು, ಥಿಮ್ಯಾಟಿಕ್ ರೆಸ್ಟೋರೆಂಟ್‌ಗಳು ಇಲ್ಲಿ ಪ್ರಮುಖ ಆಕರ್ಷಣೆ. ಇಷ್ಟೇ ಅಲ್ಲ.. ನಿಮಗೆ ಇಲ್ಲಿ ಶಾಪಿಂಗೂ ಅವಕಾಶ ಕಲ್ಪಿಸಲಾಗಿದೆ. ಯುರೇಕಾದ ಥೀಮ್ ಬಜಾರ್‌ಗಳಲ್ಲಿ ಸ್ಮರಣೀಯವಾದ ವಸ್ತುಗಳನ್ನು ನೀವು ಖರೀದಿಸಬಹುದು.

ಫಂಡೂಸ್ತಾನ್ ಮತ್ತು ಬೊರಾಸುರಾ

ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಫಂಡೂಸ್ತಾನ್’ ಯುವ ಮನಸ್ಸುಗಳನ್ನು ತಕ್ಷಣವೇ ಸೆಳೆಯುತ್ತದೆ. ಮಕ್ಕಳ ಕುತೂಹಲದ ಚಿಂತನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಹ ವೈಶಿಷ್ಠ್ಯಗಳು ಇದರಲ್ಲಿವೆ. ಇಲ್ಲಿನ ಖುಷಿಯ ಅಂಗಳಕ್ಕೆ ಇಳಿದ ತಕ್ಷಣ ಮಕ್ಕಳಿಗೆ ಹೊಸ ಲೋಕದಲ್ಲಿ ವಿಹರಿಸಿದ ಅನುಭವವಾಗುತ್ತದೆ. ರೋಚಕತೆ, ಸವಾರಿ ಮತ್ತು ಗೇಮಿಂಗ್ನಲ್ಲಿ ಮಗ್ನರಾಗಿ ಬಿಡುತ್ತಾರೆ. ‘ಬೋರಾಸುರಾ’ ನೈಜ ಜಾದೂಗಾರನ ತಾಣ. ಇದೊಂದು ಅತ್ಯುತ್ತಮ ಥಿಮ್ಯಾಟಿಕ್ ವಾಕ್ ಥ್ರೂಗಳಲ್ಲಿ ಒಂದಾಗಿದೆ. ‘ಬೋರಾಸುರಾ’ದಲ್ಲಿನ ಡಾರ್ಕ್ ಏಜ್ ಭಯಾನಕತೆಯ ವಿಶಿಷ್ಟ ಅನುಭವ ನೀಡುತ್ತದೆ.

ರಾಮೋಜಿ ಮೂವಿ ಮ್ಯಾಜಿಕ್

ಚಲನಚಿತ್ರ ಮತ್ತು ಫ್ಯಾಂಟಸಿಯ ಅನನ್ಯತೆಯನ್ನು ಪ್ರವಾಸಿಗರ ಅನುಭವಕ್ಕೆ ತರಲು ರಾಮೋಜಿ ಮೂವಿ ಮ್ಯಾಜಿಕ್ ತೆರೆಯಲಾಗಿದೆ. ಆ್ಯಕ್ಷನ್ ಮೂವಿ ಹಿಂದಿನ ಶ್ರಮ, ಚಲನಚಿತ್ರ ನಿರ್ಮಾಣದ ಜಟಿಲತೆಗಳು, ಸ್ಪೆಷಲ್ ಎಫೆಕ್ಟ್‌, ಎಡಿಟಿಂಗ್, ಡಬ್ಬಿಂಗ್‌ಗಳಂತಹ ಅಪರೂಪದ ವಿಷಯಗಳನ್ನು ಪ್ರವಾಸಿಗರು ಇಲ್ಲಿ ತಿಳಿದುಕೊಳ್ಳಬಹುದು.

ಫಿಲ್ಮಿ ದುನಿಯಾ

ಫ್ಯಾಂಟಸಿ ವರ್ಲ್ಡ್​​ನಲ್ಲಿ ಅತ್ಯಾಕರ್ಷಕ ಡಾರ್ಕ್ ಸವಾರಿ ಸಾಕಷ್ಟು ರಂಜನೆ ನೀಡುತ್ತದೆ.

ರಾಮೋಜಿ ಬಾಹ್ಯಾಕಾಶ ಯಾತ್ರೆ

ಬಾಹ್ಯಾಕಾಶಕ್ಕೆ ತೆರಳುವ ಗಗನ ಯಾತ್ರಿಗಳ ಅನುಭವ, ಶೂನ್ಯ ಗುರುತ್ವಾರ್ಷಣೆಯ ಸಂವೇದನೆಯ ಅನುಭವವನ್ನೂ ಪ್ರವಾಸಿಗರು ಪಡೆಯಬಹುದು

ನಿತ್ಯ ಲೈವ್ ಶೋಗಳು

ರಾಮೋಜಿ ಫಿಲಂ ಸಿಟಿಯ ಮ್ಯಾಜಿಕ್ ಶೋನ ವರ್ಣರಂಜಿತ ಪ್ರದರ್ಶನಗಳು ಪ್ರವಾಸಿಗರನ್ನು ಮನಸೂರೆಗೊಳಿಸುತ್ತವೆ. ‘ಸ್ಪಿರಿಟ್ ಆಫ್ ರಾಮೋಜಿ’ ಶೋನ ಕಲಾವಿದರು ದೇಶದ ಶ್ರೀಮಂತ ಸಂಸ್ಕೃತಿಯ ಪ್ರದರ್ಶನ ನೀಡುವ ಮೂಲಕ ನೋಡುಗರನ್ನು ವಿಸ್ಮಯ ಲೋಕಕ್ಕೆ ಕರೆದೊಯ್ಯುತ್ತಾರೆ. ವೈಲ್ಡ್ ವೆಸ್ಟ್ ಸ್ಟಂಟ್ ಶೋ ಕೂಡಾ ರಾಮೋಜಿ ಚಿತ್ರ ನಗರಿಯ ಅತ್ಯಾಕರ್ಷಣೆಯ ಪ್ರದರ್ಶನಗಳಲ್ಲಿ ಒಂದಾಗಿದೆ. ಇದು 60ರ ದಶಕದಲ್ಲಿ ಹಾಲಿವುಡ್‌ನ ‘ಕೌಬಾಯ್’ ಚಲನಚಿತ್ರಗಳಲ್ಲಿ ಬಳಸಿಕೊಳ್ಳಲಾಗಿತ್ತು. ಬ್ಯಾಕ್‌ಲೈಟ್ ಶೋ ಬ್ಯಾಕ್‌ಲೈಟ್ ಥಿಯೇಟರ್ ಪ್ರಿನ್ಸಿಪಲ್ಸ್ ಮತ್ತು ವಿಶೇಷವಾಗಿ ಅನಿಮೇಷನ್ ಅನ್ನು ಅದ್ಭುತವಾಗಿ ಇಲ್ಲಿ ಬಳಸಿಕೊಳ್ಳಲಾಗಿದೆ.

ನಿಮ್ಮ ಜೊತೆಯೇ ಮಾರ್ಗದರ್ಶಕರು

ಪ್ರವಾಸಿಗರಿಗಾಗಿಯೇ ವಿಶೇಷವಾಗಿ ಸಜ್ಜುಗೊಳಿಸಲಾದ ತರಬೇತುದಾರರು ರಾಮೋಜಿ ಫಿಲಂ ಸಿಟಿಯ ಬಗ್ಗೆ ಪೂರ್ಣ ಮಾರ್ಗದರ್ಶನ ನೀಡುತ್ತಾರೆ. ಗೈಡ್ಗಳು ದಿನವಿಡೀ ಪ್ರವಾಸಿಗರ ಜೊತೆಗೆಯೇ ಇರುತ್ತಾರೆ. ಸಿನಿಮೀಯ ಆಕರ್ಷಣೆಗಳು, ಫಿಲ್ಮ್ ಸೆಟ್‌ಗಳು, ಭವ್ಯ ಉದ್ಯಾನವನಗಳ ಬಗ್ಗೆ ಇವರು ಸವಿವರವಾದ ಮಾಹಿತಿ ನೀಡುತ್ತಾರೆ. ಅಪರೂಪದ ಚಿಟ್ಟೆ ಉದ್ಯಾನ, ಚಮತ್ಕಾರಿ ಕುಬ್ಜ ಮರಗಳು, ಪಕ್ಷಿ ಉದ್ಯಾನ, ಮಿಸ್ಸಿಂಗ್ ಗಾರ್ಡನ್, ಬೊನ್ಸಾಯ್ ಗಾರ್ಡನ್ ಇಲ್ಲಿವೆ. ಇವೆಲ್ಲವನ್ನೂ ನೋಡುವುದೆಂದರೆ ಕಣ್ಣಿಗೆ ಒಂಥರಾ ಹಬ್ಬ.

ವಿಂಗ್ಸ್-ಬರ್ಡ್ ಪಾರ್ಕ್

ಪ್ರಪಂಚದಾದ್ಯಂತ ಇರುವ ಪಕ್ಷಿಗಳು ಇಲ್ಲಿನ ಆಕರ್ಷಣೆ. ಹಸಿರು ಸಸ್ಯಗಳು, ಪರ್ಚ್ (ಹಕ್ಕಿ ಕುಳಿತುಕೊಳ್ಳುವ ಅಡ್ಡಕಂಬಿ), ಪಂಜರಗಳನ್ನು ನೋಡುತ್ತಾ ಪ್ರವಾಸಿಗರು ಇಲ್ಲಿ ಸಾಗಬಹುದು. ಪಕ್ಷಿ ಉದ್ಯಾನವನವು ನಾಲ್ಕು ವಲಯಗಳನ್ನು ಒಳಗೊಂಡಿದೆ. ವಾಟರ್ ಬರ್ಡ್ಸ್ ಅರೇನಾ, ಕೇಜ್ಡ್ ಬರ್ಡ್ಸ್ ಫಾರ್ ಅರೇನಾ, ಫ್ರೀ-ರೇಂಜರ್ ಬರ್ಡ್ ಜೋನ್ ಮತ್ತು ಆಸ್ಟ್ರಿಚ್ ಜೋನ್.

ರಾಮೋಜಿ ಅಡ್ವೆಂಚರ್ ಲ್ಯಾಂಡ್

‘ಸಾಹಸ್ ಲ್ಯಾಂಡ್’ ಎಲ್ಲ ವಯೋಮಾನದವರಿಗೆ ಒಂದೇ ಸ್ಥಳದಲ್ಲಿ ವಿವಿಧ ಸಾಹಸಮಯ ಚಟುವಟಿಕೆಗಳನ್ನು ಪ್ರಸ್ತುತಪಡಿಸುವ ಸ್ಥಳ. ಸಾಹಸಿ ಉತ್ಸಾಹಿಗಳನ್ನು ಆಕರ್ಷಿಸುವ ಅಡ್ರಿನಾಲಿನ್ (ಆಕಾಶದಲ್ಲಿ ಹಾರಾಟ) ಕ್ರೀಡೆಗಳ ಹೊರತಾಗಿಯೂ ಕೌಟುಂಬಿಕ, ಗ್ರೂಪ್, ಶಾಲೆ / ಕಾಲೇಜು ಮತ್ತು ಸಾಂಸ್ಥಿಕ ವೃತ್ತಿಪರರಿಗೆ ಬಹುಮುಖ ಅನುಭವಗಳನ್ನು ನೀಡುವ ಬಹು ವಿನೋದದಿಂದ ತುಂಬಿದ ಸಾಹಸ ಮತ್ತು ಮನರಂಜನೆಯನ್ನು ಒದಗಿಸುತ್ತದೆ.

ಸಾಹಸ್‌ನಲ್ಲಿ ಹೈ ರೋಪ್ ಕೋರ್ಸ್, ನೆಟ್ ಕೋರ್ಸ್, ಎಟಿವಿ ರೈಡ್ಸ್, ಮೌಂಟೇನ್ ಬೈಕ್, ಪೇಂಟ್‌ಬಾಲ್, ಟಾರ್ಗೆಟ್ ಶೂಟಿಂಗ್ (ಬಿಲ್ಲುಗಾರಿಕೆ / ಶೂಟಿಂಗ್ ಇತ್ಯಾದಿ), ಗಾಳಿ ತುಂಬಿಸುವಿಕೆ, ಜೋರ್ಬಿಂಗ್, ಬಂಗೀ ಎಜೆಕ್ಷನ್ ನಂತಹ ಕ್ರೀಡೆಗಳಿವೆ. ಅಂತಾರಾಷ್ಟ್ರೀಯ ವೃತ್ತಿಪರರು ವಿನ್ಯಾಸಗೊಳಿಸಿದ ಸಾಹಸ ಕ್ರೀಡೆಗಳನ್ನು ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ ಪ್ರವಾಸಿಗರಿಗೆ ಕಲ್ಪಿಸಿಕೊಡಲಾಗುತ್ತದೆ.

ಹೋಟೆಲ್ ಪ್ಯಾಕೇಜ್​ಗಳು

ರಾಮೋಜಿ ಫಿಲಂ ಸಿಟಿಗೆ ಭೇಟಿ ನೀಡಲು ಒಂದು ದಿನ ಸಾಕಾಗುವುದಿಲ್ಲ. ಹೀಗಾಗಿ, ಪ್ರತಿ ಪ್ರವಾಸಿಗರ ಬಜೆಟ್‌ಗೆ ತಕ್ಕಂತೆ ಆಕರ್ಷಕ ವಾಸ್ತವ್ಯದ ಪ್ಯಾಕೇಜ್ ನೀಡಲಾಗುತ್ತದೆ. ರಾಮೋಜಿ ಫಿಲಂ ಸಿಟಿಯ ಹೋಟೆಲ್‌ಗಳಲ್ಲಿ ಐಷಾರಾಮಿ ಹೋಟೆಲ್ ಸಿತಾರಾ, ಕಂಫರ್ಟ್ ಹೋಟೆಲ್ ತಾರಾ, ವಸುಂಧರಾ ವಿಲ್ಲಾದಲ್ಲಿ ಫಾರ್ಮ್ ಹೌಸ್ ಸೌಕರ್ಯಗಳು, ಶಾಂತಿ ನಿಕೇತನದಲ್ಲಿ ಬಜೆಟ್ ವಾಸ್ತವ್ಯ ಮತ್ತು ಸಹಾರಾ ಹಾಗೂ ಗ್ರೀನ್ಸ್ ಇನ್​ನಲ್ಲಿ ಸೂಪರ್ ಎಕಾನಮಿ ಡಾರ್ಮಿಟರಿ ವಸತಿ ಸೌಕರ್ಯಗಳಿವೆ. ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತ ಹೋಟೆಲ್​ಗಳಲ್ಲಿ ಉಳಿದುಕೊಳ್ಳಬಹುದು.

ಕೋವಿಡ್ 19 ಸುರಕ್ಷತಾ ಮುನ್ನೆಚ್ಚರಿಕೆಗಳ ಪಾಲನೆ

ಮನರಂಜನಾ ವಲಯಗಳಲ್ಲಿ ನೈರ್ಮಲ್ಯ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ. ಪ್ರವಾಸಿಗರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳವುದು. ಹೆಚ್ಚಿನ ಪ್ರವಾಸಿಗರು ಸೇರುವ ಸ್ಥಳಗಳನ್ನು ನಿಯಮಿತವಾಗಿ ಸ್ಯಾನಿಟೈಸ್ ಮಾಡಲಾಗುತ್ತದೆ. ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ಸುರಕ್ಷತಾ ಕಾರ್ಯವಿಧಾನಗಳ ತರಬೇತಿ ಪಡೆದ ಸಿಬ್ಬಂದಿ ಕೂಡ ಇರಲಿದ್ದಾರೆ. ಹೀಗಾಗಿ, ಪ್ರವಾಸಿಗರು ಸೋಂಕಿನ ಬಗ್ಗೆ ಚಿಂತಿಸುವಂತಿಲ್ಲ. (etbk)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಣಕಾಸು ಇಲಾಖೆ ಒಪ್ಪಿಗೆ ಪಡೆದ ನಂತರ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳ: ಸಚಿವ ಮಧು ಬಂಗಾರಪ್ಪ

ಇಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಎಂಎಲ್ಸಿ ಧನಂಜಯ ಸರ್ಜಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಸಚಿವ ಮಧು ಬಂಗಾರಪ್ಪ ಬೆಳಗಾವಿ: ರಾಜ್ಯದ ಸರ್ಕಾರಿ ಪ್ರಾಥಮಿಕ...

ಕ್ಯಾದಗಿ ಅಳ್ಳಿಮಕ್ಕಿಯಲ್ಲಿ ಚಿರತೆ ಚರ್ಮ ವಶ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಕ್ಯಾದಗಿ ಅಳ್ಳಿಮಕ್ಕಿಯಲ್ಲಿ ಚಿರತೆ ಚರ್ಮ ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಮುಂದಿನ ಕ್ರಮ ಜರುಗಿಸಿದೆ.ಇಂದು ದಾಂಡೇಲಿ ಅರಣ್ಯ ಸಂಚಾರಿ ದಳದ...

ಬೈಕ್-‌ ಕಾರ್‌ ನಡುವೆ ಅಪಘಾತ ಬೈಕ್‌ ಸವಾರ ಮೃತ್ಯು

ಸಿದ್ದಾಪುರ : ಕಾರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಹಿಸಿ ಬೈಕ್ ಸವಾರ ಗಂಭೀರ ಗಾಯಗೊಂಡು ಗಾಯಾಳವನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದುಕೊಂಡು...

ನಾಡದೇವಿ ಜನಪರ ವೇದಿಕೆಯಿಂದ ಬಹುಮಾನ ವಿತರಣೆ & ಸನ್ಮಾನ

ಸಿದ್ದಾಪುರ : ನಾಡದೇವಿ ಜನಪರ ವೇದಿಕೆ ಸಿದ್ದಾಪುರ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಸಿದ್ದಾಪುರ (ಬೇಡ್ಕಣಿ ) ಗಳ ಆಶ್ರಯ ದಲ್ಲಿ ಕನ್ನಡ...

ಸಮಾನ ಅವಕಾಶಕ್ಕೆ ಮನವಿ

ಸಿದ್ದಾಪುರ : ತಾಲೂಕಿನಲ್ಲಿ ಸ್ಥಾಪಿಸಲು ಉದ್ದೇಶಿತ ಮೀನುಗಾರರ ಸೊಸೈಟಿ ರಚನೆಯಲ್ಲಿ ಮೀನು ಮಾರಾಟ ಉದ್ಯೋಗವನ್ನು ಮಾಡುತ್ತಿರುವ ಎಲ್ಲಾ ಸಮುದಾಯದವರಿಗೆ ಅವಕಾಶವನ್ನು ಕಲ್ಪಿಸಬೇಕೆಂದು ಮೀನು ಮಾರಾಟಗಾರರ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *