





ವೈದ್ಯಕೀಯ ನೊಬೆಲ್ ವಿಜೇತನ ಸಂಶೋಧನೆಗೆ ಭಾರತ ಸರ್ಕಾರದ ಪ್ರಯೋಗಾಲಯ ಸಹಕಾರಿ!?
ಮನುಷ್ಯನಿಗೆ ತಾಪಮಾನ ಹಾಗೂ ಸ್ಪರ್ಶದ ಅನುಭವ ಪಡೆಯುವುದಕ್ಕೆ ಅನುವು ಮಾಡಿಕೊಡುವ ರಿಸೆಪ್ಟರ್ ಗಳನ್ನು ಶೋಧನೆ ಮಾಡಿದ್ದಕ್ಕಾಗಿ ಆರ್ಡೆಮ್ ಪಟಪೂಟಿಯನ್, ಡೇವಿಡ್ ಜೂಲಿಯಸ್ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದಾರೆ.

ನನ್ನನ್ನು ಕಿಡ್ನಾಪ್ ಮಾಡಿ, ಕಿಮ್ಮನೆ ವಿರುದ್ಧ ಸುಳ್ಳು ಹೇಳಿಕೆಯ ವಿಡಿಯೋವನ್ನು ಮಾಡಿದ್ರು: ಮಂಜುನಾಥ
ಕಿಮ್ಮನೆ ರತ್ನಾಕರ್ ಅವರು ಪಾದಯಾತ್ರೆ ಮಾಡುವ ಹಿಂದಿನ ದಿನ ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡ ಮಂಜುನಾಥ ಗೌಡರ ಬೆಂಬಲಿಗರು ನನ್ನನ್ನು ಅಪಹರಣ ಮಾಡಿದ್ದರು. ನಂತರ ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿದರು ಎಂದು ಅಪಹರಣಕ್ಕೆ ಒಳಗಾದ ಮಂಜುನಾಥ ಆರೋಪಿಸಿದ್ದಾರೆ.
ಶಿವಮೊಗ್ಗ: ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡ ಆರ್. ಎಂ. ಮಂಜುನಾಥ್ ಗೌಡರ ಬೆಂಬಲಿಗರು ನನ್ನನ್ನು ಅಪಹರಣ ಮಾಡಿದ್ದರು. ನಂತರ ಕಿಮ್ಮನೆ ರತ್ನಾಕರ್ ಹಾಗೂ ಅರಣ್ಯ ಇಲಾಖೆಯವರ ವಿರುದ್ಧ ಸುಳ್ಳು ಹೇಳಿಕೆಯ ವಿಡಿಯೋವನ್ನು ಸೆರೆಹಿಡಿದು ವೈರಲ್ ಮಾಡಿದ್ದಾರೆ ಎಂದು ಅಪಹರಣಕ್ಕೆ ಒಳಗಾದ ಮಂಜುನಾಥ ಆರೋಪಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಮೇಲೆ ಅರಣ್ಯ ಇಲಾಖೆಯವರ ದೌರ್ಜನ್ಯ, ಕಿರುಕುಳದ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ದ್ವನಿ ಎತ್ತಿದ್ದರು. ನಂತರ ಅಕ್ಟೋಬರ್ 2 ರಂದು ಕೊಪ್ಪಸರ ನಿವಾಸಿ ಮಂಜುನಾಥ ಅವರ ಮನೆಯಿಂದ ಪಾದಯಾತ್ರೆ ನಡೆಸಿದರು. ಆದರೆ, ಪಾದಯಾತ್ರೆ ಹಿಂದಿನ ದಿನ ಕೊಪ್ಪಸರ ನಿವಾಸಿ ಮಂಜುನಾಥ ಅವರು ಕಿಮ್ಮನೆ ರತ್ನಾಕರ್ ಅವರು ನನಗೆ ತಿಳಿಯದೆ ಪಾದಯಾತ್ರೆ ಮಾಡುತ್ತಿದ್ದಾರೆ ಹಾಗೂ ಅರಣ್ಯ ಇಲಾಖೆಯವರು ನನಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎಂದು ಹೇಳಿಕೆ ನೀಡಿದ್ದ ವಿಡಿಯೋ ವೈರಲ್ ಆಗಿತ್ತು.
ಅಪಹರಣಕ್ಕೆ ಒಳಗಾದ ಮಂಜುನಾಥ ಮಾತನಾಡಿದ್ದಾರೆ
ಈ ವಿಚಾರವಾಗಿ ಮಾತನಾಡಿದ ಮಂಜುನಾಥ, ಕಿಮ್ಮನೆ ರತ್ನಾಕರ್ ಅವರು ಪಾದಯಾತ್ರೆ ಮಾಡುವ ಹಿಂದಿನ ದಿನ ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡ ಮಂಜುನಾಥ ಗೌಡರ ಬೆಂಬಲಿಗರು ನನ್ನನ್ನು ಅಪಹರಣ ಮಾಡಿದ್ದರು. ನಂತರ ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿದರು. ಒಂದು ವೇಳೆ ಒಪ್ಪದೆ ಹೋದರೆ ಕುಟುಂಬಕ್ಕೆ ತೊಂದರೆ ಮಾಡುವುದಾಗಿ ಹೆದರಿಸಿ ನನ್ನಿಂದ ವಿಡಿಯೋ ಮಾಡಿಸಿಕೊಂಡು ಅದನ್ನು ವೈರಲ್ ಮಾಡಿದ್ದಾರೆ ಎಂದು ದೂರಿದರು.
ನಮಗೆ ಅರಣ್ಯ ಇಲಾಖೆಯವರ ಕಿರುಕುಳ ಹೆಚ್ಚಾಗಿದೆ ಎಂದು ಕಿಮ್ಮನೆ ರತ್ನಾಕರ್ ಅವರ ಬಳಿ ನಮ್ಮ ತೊಂದರೆ ಹೇಳಿಕೊಂಡಿದ್ದೆವು. ಹಾಗಾಗಿ, ಅವರು ಅರಣ್ಯ ಇಲಾಖೆಯವರ ದೌರ್ಜನ್ಯದ ವಿರುದ್ಧ ಪಾದಯಾತ್ರೆ ಹಮ್ಮಿಕೊಂಡಿದ್ದರು. ಆದರೆ, ಅಂದು ನಿನ್ನ ಬಳಿ ಮಾತನಾಡಬೇಕು ಎಂದು ನನ್ನನ್ನು ಮಂಜುನಾಥ ಗೌಡರ ಬೆಂಬಲಿಗರು ಕರೆಸಿಕೊಂಡು ಅಪಹರಣ ಮಾಡಿದರು.
ಅಪಹರಣಕ್ಕೆ ಒಳಗಾದ ಮಂಜುನಾಥ ಮಾತನಾಡಿದ್ದಾರೆ
ನಂತರ ಶಿವಮೊಗ್ಗಕ್ಕೆ ಕರೆತಂದು ವಿಡಿಯೋ ಮಾಡಿಸಿ ಪಾದಯಾತ್ರೆ ಮುಗಿದ ನಂತರ ನನ್ನನ್ನು ಮನೆಗೆ ಕಳುಹಿಸಿದ್ದಾರೆ. ಇದೆಲ್ಲದಕ್ಕೂ ಕಾರಣ ಮಂಜುನಾಥ ಗೌಡರು ಮತ್ತು ಅವರ ಬೆಂಬಲಿಗರು. ನಮಗೆ ಏನಾದ್ರೂ ಜೀವಕ್ಕೆ ತೊಂದರೆಯಾದರೆ ಅವರೇ ಹೊಣೆ ಎಂದು ಹೇಳಿದ್ರು. ಪ್ರತಿನಿತ್ಯವೂ ಅರಣ್ಯ ಇಲಾಖೆಯವರಿಂದ ನಮಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ನಾವು ಹೇಳಿರುವುದಕ್ಕೆ ಕಿಮ್ಮನೆಯವರು ಪಾದಯಾತ್ರೆ ಮಾಡಿದ್ದು ಎಂದು ತಿಳಿಸಿದರು. (etbk)
ನವದೆಹಲಿ: ಮನುಷ್ಯನಿಗೆ ತಾಪಮಾನ ಹಾಗೂ ಸ್ಪರ್ಶದ ಅನುಭವ ಪಡೆಯುವುದಕ್ಕೆ ಅನುವು ಮಾಡಿಕೊಡುವ ರಿಸೆಪ್ಟರ್ ಗಳನ್ನು ಶೋಧನೆ ಮಾಡಿದ್ದಕ್ಕಾಗಿ ಆರ್ಡೆಮ್ ಪಟಪೂಟಿಯನ್, ಡೇವಿಡ್ ಜೂಲಿಯಸ್ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದಾರೆ. ಈ ವೈಜ್ಞಾನಿಕ ಮಹತ್ವವನ್ನು ಸ್ಥಾಪಿಸುವುದಕ್ಕೆ ಅವರಿಗೆ ಈ ಹಿಂದೆ ಭಾರತ ಸರ್ಕಾರದ ಪ್ರಯೋಗಾಲಯದಲ್ಲಿನ ಪ್ರಯೋಗಗಳೂ ನೆರವಾಗಿರಬಹುದು ಎಂದು ಈಗ ವಿಶ್ಲೇಷಿಸಲಾಗುತ್ತಿದೆ.
ಸಿಎಸ್ಐಆರ್ ನೇತೃತ್ವದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ (ಐಐಸಿಬಿ) 2018 ರಲ್ಲಿ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆ ದೈಹಿಕ ಸೂಚನೆಗಳನ್ನು ಪಡೆಯುವುದಕ್ಕೆ ಈ ರಿಸೆಪ್ಟರ್ ಗಳ ಮೇಲೆ ಅವಲಂಬಿತವಾಗಿರುತ್ತವೆ ಎಂಬ ಅಂಶವನ್ನು ತೋರಿಸಿತ್ತು.
ಪೀಜೋ ಚಾನೆಲ್‌ಗಳನ್ನು ಆರ್ಡೆಮ್ ಪಟಪೂಟಿಯನ್, ಡೇವಿಡ್ ಜೂಲಿಯಸ್ ಪತ್ತೆ ಮಾಡಿದ್ದು ಇದು 2010 ಕ್ಕಿಂತಲೂ ಮುಂಚೆ ತಿಳಿಯದ ಜೀವಶಾಸ್ತ್ರದ ಸಾಮಾನ್ಯ ವಾಸ್ತವ ಅಂಶವಾಗಿದ್ದು 2010 ಕ್ಕಿಂತಲೂ ಮುನ್ನ ನರಮಂಡಲದ ವ್ಯವಸ್ಥೆಯಲ್ಲಿ ಈ ರಿಸೆಪ್ಟರ್ ಗಳ ಇನ್ನಷ್ಟು ಪಾತ್ರವನ್ನು ಅರಿಯುವುದಕ್ಕಾಗಿ ಹಲವಾರು ಸಂಶೋಧನೆಗಳು ನಡೆದಿವೆ. ಈ ಪೈಕಿ ಭಾರತದ್ದೂ ಸಂಶೋಧನೆ
ಉದಾಹರಣೆಗೆ 2014 ರಲ್ಲಿ ಯೂನಿವರ್ಸಿಟಿ ಆಫ್ ಲೀಡ್ಸ್ ನಲ್ಲಿ ಡೇವಿಡ್ ಬೀಚೆಸ್ ಲ್ಯಾಬ್, ರಕ್ತದೊತ್ತಡದಲ್ಲಿನ ಬದಲಾವಣೆಗಳನ್ನು ಅರಿಯುವುದಕ್ಕೆ ಹೃದಯರಕ್ತನಾಳದ ವ್ಯವಸ್ಥೆಯಲ್ಲಿ ಈ ಚಾನಲ್ ಗಳು ಬಹಳ ಮುಖ್ಯಪಾತ್ರ ವಹಿಸುವ ಮೂಲಕ ಒತ್ತಡ ಸಂವೇದಕಗಳಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ.
ನಮ್ಮ ಕೀಲುಗಳ ಕಾರ್ಟಿಲೆಜ್ ಗಳಲ್ಲಿನ ಒತ್ತಡದ ಸಂವೇದಿಯಾಗಿಯೂ ಈ ಚಾನಲ್ ಗಳು ಕಾರ್ಯನಿರ್ವಹಣೆ ಮಾಡುವುದನ್ನು 2014 ರಲ್ಲಿ ಡ್ಯೂಕ್ ವಿವಿಯಲ್ಲಿ ವುಲ್ಫ್‌ಗ್ಯಾಂಗ್ ಲೈಡ್‌ಕೆ ಗ್ರೂಪ್ ತೋರಿಸಿತ್ತು.
ಭಾರತದಲ್ಲಿ ದೀಪ್ಯಮಾನ್ ಗಂಗೂಲಿ ನೇತೃತ್ವದ ಐಐಸಿಬಿ ವಿಜ್ಞಾನಿಗಳು 2018 ರಲ್ಲಿ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆ ದೈಹಿಕ ಸೂಚನೆಗಳನ್ನು ಪಡೆಯುವುದಕ್ಕೆ ಈ ರಿಸೆಪ್ಟರ್ ಗಳ ಮೇಲೆ ಅವಲಂಬಿತವಾಗಿರುತ್ತವೆ ಎಂಬ ಅಂಶವನ್ನು ತೋರಿಸಿತ್ತು. (kpc)
