

ನಾನು ಇನ್ನು ಐಪಿಎಲ್ ಆಡುವುದನ್ನು ಬಿಟ್ಟಿಲ್ಲ: ಧೋನಿ
ಚೆನ್ನೈ ಸೂಪರ್ ಕಿಂಗ್ಸ್ ಪರ ನಾಲ್ಕನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಮಹೇಂದ್ರ ಸಿಂಗ್ ಧೋನಿ ಇನ್ನೂ ಐಪಿಎಲ್ ಆಡುವುದನ್ನು ಬಿಟ್ಟಿಲ್ಲ ಎಂದು ದೃಢಪಡಿಸಿದ್ದಾರೆ.
ಕೀರ್ತಿ,ಸಂಪತ್ತು ಯಾರ ತಲೆಯನ್ನೂ ತಿರುಗಿಸಬಾರದು.ನಾನು ದೇಶಸೇವೆಯ ಕನಸಿನಿಂದ ಸೇನೆಗೆ ಸೇರಿದವನು. ದೇಶಪ್ರೇಮ,ಹುಡುಕಾಟಗಳಿಂದ ನನ್ನ ಗುರಿಗೆ ಸ್ಪಷ್ಟತೆ ಸಿಕ್ಕಿತು. ದೇಶಕ್ಕಾಗಿ ದುಡಿದರೆ ನಮಗೂ ಲಾಭ-ಅನುಕೂ ಲ ಆಗುತ್ತದೆ ಎನ್ನುವುದಕ್ಕೆ ನಾನೇ ಉದಾಹರಣೆ – ಕಾಶಿನಾಥ ನಾಯ್ಕ
ಕೇರಳ ದೇಶದ ಮಾದರಿ ರಾಜ್ಯ ಕೇರಳದ ವೈಶಿಷ್ಟ್ಯ, ಸಾಧನೆ, ಪ್ರಸಿದ್ಧಿಯ ಹಿಂದೆ ಬ್ರಹ್ಮಶ್ರೀ ನಾರಾಯಣ ಗುರುಗಳ ಶ್ರಮ-ಸಾಮಾಜಿಕ ಹೋರಾಟದ ಹಿನ್ನೆಲೆಗಳಿವೆ.ಸ್ವಾಭಿಮಾನ, ಆತ್ಮಾಭಿಮಾನ ಎಂದರೆ ಏನೆಂದು ತಿಳಿಯಲು ಡಾ. ಅಂಬೇಡ್ಕರ್ ಮತ್ತು ನಾರಾಯಣ ಗುರು, ಲೋಹಿಯಾರಂಥವರನ್ನು ಓದಬೇಕು. – ಸಮಾಜಮುಖಿ ಕನ್ನೇಶ್ ಕೋಲಶಿರ್ಸಿ
ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸೊಗಸು ಜಾತಿ-ಧರ್ಮ ಎಂದು ಕಚ್ಚಾಡುವುದರಲ್ಲಿ ಇಲ್ಲ… ವಿ.ಎನ್. ನಾಯ್ಕ ಬೇಡ್ಕಣಿ, ರತ್ನಾಕರ ನಾಯ್ಕ ನರಮುಂಡಿಗೆ

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಪರ ನಾಲ್ಕನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಮಹೇಂದ್ರ ಸಿಂಗ್ ಧೋನಿ ಇನ್ನೂ ಐಪಿಎಲ್ ಆಡುವುದನ್ನು ಬಿಟ್ಟಿಲ್ಲ ಎಂದು ದೃಢಪಡಿಸಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸುವ ಮೂಲಕ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ ಸಿಎಸ್‌ಕೆಗಾಗಿ ಐಪಿಎಲ್ ಆಡುವುದನ್ನು ಮುಂದುವರಿಸಬೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಧೋನಿ, “ಇದು ಬಿಸಿಸಿಐ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.
ಮುಂದಿನ ಋತುವಿನಿಂದ ಎರಡು ಹೊಸ ತಂಡಗಳು ಬರಲಿದ್ದು, ಸಿಎಸ್ ಕೆ ಗೆ ಯಾವುದು ಒಳ್ಳೆಯದು ಎಂದು ನಾವು ನಿರ್ಧರಿಸಬೇಕು. ತಂಡಕ್ಕೆ ತೊಂದರೆ ಆಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಬಲವಾದ ಕೋರ್ ಅನ್ನು ನಿರ್ಮಿಸುವುದು ಮುಖ್ಯ ವಿಷಯವಾಗಿದೆ. ಮುಂದಿನ 10 ವರ್ಷಗಳಲ್ಲಿ ಯಾವ ಕೊಡುಗೆ ನೀಡಬಹುದು ಎಂಬುದನ್ನು ನೋಡಲು ಕೋರ್ ಗುಂಪಿನಲ್ಲಿರುವ ನಾವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಎಂದರು.
ಸಿಎಸ್ ಕೆ ನಾಯಕ ಪಂದ್ಯದ ನಂತರ ತನ್ನ ಅಭಿಮಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. “ನಾವು ಆಡುವ ಎಲ್ಲೆಲ್ಲಿ ಹೋಗುತ್ತೇವೊ, ಅದು ದಕ್ಷಿಣ ಆಫ್ರಿಕಾ, ಮೆಲ್ಬರ್ನ್ ಅಥವಾ ದುಬೈ ಆಗಿರಲಿ, ನಮ್ಮನ್ನು ಬೆಂಬಲಿಸಲು ಅಪಾರ ಸಂಖ್ಯೆಯ ಅಭಿಮಾನಿಗಳಿದ್ದರು. ಪ್ರತಿಯೊಬ್ಬ ಆಟಗಾರ ಮತ್ತು ತಂಡವು ಇದಕ್ಕಾಗಿ ಹಾತೊರೆಯುತ್ತದೆ. ಇಂದು ಇಲ್ಲಿ ಆಡುವಾಗ, ನಾವು ದುಬೈನಲ್ಲಿ ಆಡುತ್ತಿರುವಂತೆ ಅನಿಸಲಿಲ್ಲ, ನಾವು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಆಡುತ್ತಿರುವಂತೆ ಭಾಸವಾಯಿತು. ನಮ್ಮ ಅಭಿಮಾನಿಗಳಿಗಾಗಿ ಚೆನ್ನೈಗೆ ಮರಳಲು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಸಿಎಸ್ ಕೆ ಬಗ್ಗೆ ಮಾತನಾಡುವ ಮೊದಲು ಕೆಕೆಆರ್ ಬಗ್ಗೆ ಮಾತನಾಡುವುದು ಅಗತ್ಯ ಎಂದು ನಾನು ಭಾವಿಸುತ್ತೇನೆ. ಯಾವುದೇ ತಂಡ ಐಪಿಎಲ್ ಗೆಲ್ಲಲು ಅರ್ಹವಾಗಿದ್ದರೆ ಅದು ಕೆಕೆಆರ್ ಎಂದು ಹೇಳಿದ್ದಾರೆ. (kpc)

ಸಾಧನೆ ಸಾಧಕನ ಸೊತ್ತೇ ಹೊರತು ಸೋಮಾರಿಗಳದ್ದಲ್ಲ. -ಕಾಶಿನಾಥ ನಾಯ್ಕ.
ಸಿದ್ದಾಪುರ ಅ: ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿಭೆಗಳಿಗೆ ಕೊನೆಯಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಅವಕಾಶಗಳು ಮನೆಬಾಗಿಲು ತಟ್ಟುತ್ತಿವೆ. ಸಾಧನೆಯ ಛಲ,ನಿರಂತರ ಪರಿಶ್ರಮದಿಂದ ಮಾತ್ರ ಗೆಲುವಿನ ಮೆಟ್ಟಿಲೇರಲು ಸಾಧ್ಯ . ಸಾಧನೆ ಸಾಧಕನ ಸೊತ್ತೇ ಹೊರತು ಸೋಮಾರಿಗಳದ್ದಲ್ಲ ಎಂದು ಕಾಮನ್‌ವೆಲ್ತ್ ಕ್ರೀಡಾಕೂಟದ ಜಾವಲಿನ್ ಪದಕ ವಿಜೇತ, ಸೈನಿಕ ಶಿರಸಿಯ ಕಾಶಿನಾಥ ನಾಯ್ಕ ಹೇಳಿದರು.
ಅವರು ವಿಜಯದಶಮಿಯಂದು ಪಟ್ಟಣದ ಲಯನ್ಸ್ ಸಭಾ ಭವನದಲ್ಲಿ ಬಿ.ಎಸ್.ಎನ್.ಡಿ. ಪಿ. ತಾಲೂಕು ಘಟಕ ಹಾಗೂ ಶ್ರೀರಾಮ ಕ್ಷೇತ್ರ ಸೇವಾಸಮಿತಿ ಸಿದ್ದಾಪುರ ಗಳು ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕು- ಸ್ಫೂರ್ತಿ ಗೋಪಾಲ ನಾಯ್ಕ ಹಾಗೂ ಇಂಜಿನಿಯರಿಂಗ್ ಪದವಿಯಲ್ಲಿ ಚಿನ್ನದ ಪದಕ ಸ್ವೀಕರಿಸಿದ ಕು- ಪೃಥ್ವಿ ಮಹಾಬಲೇಶ್ವರ ನಾಯ್ಕ ಅವರಗುಪ್ಪ ರನ್ನೂ ಸಹ ಸನ್ಮಾನಿಸಲಾಯಿತು.
ಪತ್ರಕರ್ತ ಕನ್ನೇಶ ಕೋಲ್ ಶಿರ್ಸಿ. ಬಿಎಸ್ಎನ್ ಡಿ.ಪಿಯ ಕಾರ್ಯದಕ್ಷತೆ ಹಾಗೂ ನಾರಾಯಣ ಗುರುಗಳ ಅಂದಿನ ಸಂಘಟನೆ, ಸಾಮಾಜಿಕ ಚಿಂತನೆ ಶೈಕ್ಷಣಿಕ ಕಾಳಜಿಯಿಂದಾಗಿ ಕೇರಳರಾಜ್ಯ, ದಕ್ಷಿಣ ಕನ್ನಡ ಭಾಗಗಳು ಮುಂಚೂಣಿಯಲ್ಲಿರಲು ಕಾರಣವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿ ಸಾಹಿತಿ, ಶಿಕ್ಷಕ ಗೋಪಾಲ ನಾಯ್ಕ ಭಾಶಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿಯೊಂದಿಗೆ ನಿರಂತರ ಸಾಧನೆಯಲ್ಲಿ ತೊಡಗಿ ಯಶಸ್ವಿಯಾಗಬೇಕೆಂದು ಕರೆನೀಡಿದರು. ಬಿಎಸ್ ಎನ್ ಡಿ.ಪಿ ತಾಲೂಕು ಅಧ್ಯಕ್ಷ ವಿನಾಯಕ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಸಾಮಾಜಿಕ ಧುರೀಣ, ಮಾಜಿ ಜಿ.ಪ . ಸದಸ್ಯರಾದ ವಿ ಎನ್ . ನಾಯ್ಕ ಬೇಡ್ಕಣಿ ವಹಿಸಿ ಸಾಧಕರ ಸಾಧನೆಯ ಗುಣಗಾನ ಮಾಡಿದರು. ಕು- ಪೃಥ್ವಿ ನಾಯ್ಕ, ಹಾಗೂ ಕು- ಸ್ಪೂರ್ತಿ ನಾಯ್ಕ ಸನ್ಮಾನ ಸ್ವೀಕರಿಸಿ ಕೃತಜ್ಞತೆ ಹೇಳಿದರು. ಎರಡೂ ಸಂಘಟನೆಗಳ ಪದಾಧಿಕಾರಿಗಳು, ಸಮಾಜಬಾಂಧವರು ಉಪಸ್ಥಿತರಿದ್ದರು. ಉಪನ್ಯಾಸಕ ರತ್ನಾಕರ ನಾಯ್ಕ ವಂದನಾರ್ಪಣೆ ಮಾಡಿದರು. ವಿನಾಯಕ ನಾಯ್ಕ ಕಾನಗೋಡ ಕಾರ್ಯಕ್ರಮ ನಿರೂಪಿಸಿದರು.
