

ಬದ್ಧತೆಯ ನೇರ,ದಿಟ್ಟ ಹೋರಾಟಗಾರ ಇನ್ನು ನೆನಪು
ದೇವರೆ ಇದರ ಅರ್ಥವೇನು?
ಇವೆಲ್ಲದರ ಅರ್ಥವೇನು?
ಇದು ನಾಸ್ತಿಕ ಗಿರೀಶ್ ಕಾರ್ನಾಡರ ಪ್ರಸಿದ್ಧ ನಾಟಕ ಯಯಾತಿ ರಂಗ ಪ್ರಸ್ತುತಿಯ ಕೊನೆಯ ಸೀನ್, ಸಂಭಾಷಣೆ.
ಪುರುರಾಜ ಚಿತ್ರಲೇಖೆ ಯನ್ನು ಕಳೆದುಕೊಂಡಿದ್ದಾನೆ.
ಕೊನೆಗೆ ದಕ್ಕಿದ ಶರ್ಮಿಳೆಯೊಂದಿಗೆ ಯಯಾತಿ ವಾನಪ್ರಸ್ಥಕ್ಕೆ ಹೊರಟಿದ್ದಾನೆ, ಪುರುರಾಜನ ಯೌವನ ಮರುಕಳಿಸಿದೆ.ಕ್ಲೈಮ್ಯಾಕ್ಸ್ ದೇವರೆ ಇದರ ಅರ್ಥವೇನು?
ಗಿರೀಶ್ ಕಾರ್ನಾಡರ ನಿಧನದ ಸುದ್ದಿ ಕೇಳಿದ ಅನೇಕರಿಗೆ ಇದೇ ಅನಿಸಿರಬೇಕು.
ಪ್ರಾಧ್ಯಾಪಕ, ಸಾಹಿತಿ,ಸಂಘಟಕ, ಹೋರಾಟಗಾರ ಹೀಗೆ ಬಹುಮುಖ ಪ್ರತಿಭೆಯ ಕಾರ್ನಾಡ್ ಕನ್ನಡದ ಮಲೆನಾಡು, ಬಯಲುಸೀಮೆ, ಅರೆಬಯಲುಸೀಮೆ ಜೋಡಿಸಿದವರು.
ಭಾರತದ ಭಾವೈಕ್ಯತೆಯ ಕನ್ನಡ, ತೆಲುಗು, ಮಲಿಯಾಳಿ, ಮರಾಠಿ, ಹಿಂದಿಗಳೊಂದಿಗೆ ಸಂಬಂಧ ಬೆಸೆದವರು.
ಮಾತನಾಡಿದ್ದಕ್ಕಿಂತ ಹೆಚ್ಚು ಬರೆದರು. ಬರೆದದ್ದಕ್ಕಿಂತ ಹೆಚ್ಚು ಕ್ರೀಯಾಶೀಲರಾಗಿ ಹೋರಾಟ, ಚಳವಳಿ, ಬದ್ಧತೆಗಳಿಂದ ಮನೆಮಾತಾದರು.
ಮಾತೃಭಾಷೆ ಮರಾಠಿಯಂತೆ. ಕನ್ನಡ, ಇಂಗ್ಲಿಷ್, ಹಿಂದಿಗಳೊಂದಿಗೆ ಅನೇಕ ಭಾಷೆ ಸಂಸ್ಕøತಿಗಳಿಗೆ ಧ್ವನಿಯಾದರು.
ಒಬ್ಬ ಕ್ರೀಯಾಶೀಲ ಹೋರಾಟಗಾರ ಚಳವಳಿಗಳ ಮೂಲಕ ಬೆಳೆಯುತ್ತಾ ಸಂಕಥನಗಳನ್ನು ಕಟ್ಟಿಕೊಡಬಲ್ಲ. ಆದರೆ ಅಂತ್ಯದವರೆಗೆ ಪ್ರತಿಪಾದಕನಾಗಿ ನಿಂತು ಸತ್ಯಸಂಶೋಧಕನಾಗಿ ಉಳಿಯಬೇಕಾದರೆ, ಪ್ರಬುದ್ಧತೆ, ನಿರ್ಲಿಪ್ತತೆ,ಸ್ಥಿತಪ್ರಜ್ಞೆತೆಗಳೊಂದಿಗೆ ಸಾತ್ವಿಕ ಹಠವಿರಬೇಕಾಗುತ್ತದೆ.
ಈ ಸಾತ್ವಿಕ ಹಠ ಉಪನ್ಯಾಸಕ, ಹೋರಾಟಗಾರ ರಂಗಕರ್ಮಿ, ನಿರ್ಧೇಶಕ, ನಟ, ಸಹೃದಯಿ, ಸತ್ಯ ಶೋಧಕ, ಚಳವಳಿಗಾರ, ನೇರ,ದಿಟ್ಟ ಮಾತುಗಾರ ಎಲ್ಲವೂ ಆಗಿ ಅರಳಿದೆ.
ಕನಸುಗಳ ದಾರಿ ಹುಡುಕಿಹೊರಟ ಕಾರ್ನಾಡರ ಭೌತಿಕತೆ,ಉಸಿರು ಕತ್ತಲಲ್ಲೂ ನಡೆಯುತ್ತಿದೆ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಕನಸಿಲ್ಲದ ದಾರಿಯ ನಡೆ ದುಸಾಧ್ಯ ಎನ್ನುವಂತೆ.

- ಸೂರ್ಯನ ತೇಜದಲ್ಲಿ ಆಗದ ಕೆಲಸ ಸುವರ್ಣ ನಾಣ್ಯಗಳ ಪ್ರತಿಬಿಂಬದ ಕಾಂತಿಯಲ್ಲಾಗುತ್ತದೆ.(ಪುರುವಿಗೆ ಯಯಾತಿ ಹೇಳುವ ಮಾತು)
- ಬೆಳಕಿಲ್ಲದ ದಾರಿಯಲ್ಲಿ ಹೋಗಬಹುದು,ಕನಸುಗಳಿಲ್ಲದ ದಾರಿಯಲ್ಲಿಹೇಗೆ ಹೋಗುವುದು?
- ಕಾರಣವಿಲ್ಲದೆ ಬಲಿದಾನ ಮಾಡುವುದು ವಿಕೃತಿಯ ಲಕ್ಷಣ
- ನಾನು ಕಲ್ಲನ್ನು ಮಾತ್ರ ಒಗೆಯಬಲ್ಲೆ ಅದೆಬ್ಬಿಸಿದ ಅಲೆಗಳ ಮೇಲೆ ನನಗೆ ಅಧಿಕಾರವಿಲ್ಲ.
- ತ್ಯಾಗದ ಅತಿರೇಕವೂ ಒಂದು ಮೋಹ
- ನೀತಿಯೆಂದರೆ ಸಾಮಾನ್ಯ ಜನತೆ ತನ್ನ ರಕ್ಷಣೆಗಾಗಿ ಕಟ್ಟಿಕೊಂಡ ಬಂಧನ
ಇಂಥ ಸತ್ಯದ, ಸತ್ವಗಳ ಸಾಲುಗಳ ನಡುವಿನ ಮೌನ, ವಿವೇಕಗಳಲ್ಲಿ ಕಾರ್ನಾಡ್ ನಿತ್ಯ ನಮ್ಮೊಂದಿಗೆ ಬದುಕಿರುತ್ತಾರೆ.
ಮತೀಯವಾದಿಗಳ ಅಧಿಕಾರಲಾಲಸೆಯ ದುರಾಸೆಯ ಮೂಲಭೂತವಾದಿ ದುಷ್ಟ ಚಿಂತನೆಗಳ ಅವಾಂತರಕಾರಿ ದುಷ್ಟಪರಿವಾರಕ್ಕೆ ದುಸ್ವಪ್ನವಾಗಿ ಬದುಕಿನ ಕೊನೆಉಸಿರಿರುವವ ವರೆಗೂ ಸಾಹಿತ್ಯ, ಸಾಂಸ್ಕøತಿಕ ಲೋಕದ ಐಕಾನ್ ಆಗೇ ಮೆರೆದ ಕಾರ್ನಾಡ್ ರ ಮೌಲ್ಯಯುತ ಬದುಕಿಗೆ, ಅವರ ದಿವ್ಯ ನೆನಪಿಗೆ ಅವರದೇ ಅಕ್ಷರಗಳು ಸಮರ್ಪಿತ
-ಕನ್ನೇಶ್,

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
