

ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ವಾಪಸ್ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ವಾಪಸ್ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ದೇಶದ ಮಣ್ಣಿನ ಮಕ್ಕಳ ಅಭೂತಪೂರ್ವ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ. ರೈತ ಹೋರಾಟಗಾರರಿಗೆ ಅಭಿನಂದನೆಗಳು ಎಂದಿದ್ದಾರೆ.
ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇ ಬೇಕು. ಇದುವೇ ಪ್ರಜಾಪ್ರಭುತ್ವದ ಸೊಗಸು. ಇದುವೇ ರೈತರ ಸ್ವಾತಂತ್ರ್ಯೋತ್ಸವ,
ಕೃಷಿ ಕಾಯ್ದೆಯಷ್ಟೇ ಅಲ್ಲ, ಕೇಂದ್ರ ಬಿಜೆಪಿ ಸರ್ಕಾರದ ಪ್ರತಿಯೊಂದು ನೀತಿ ಮತ್ತು ಕಾರ್ಯಕ್ರಮಗಳು ರೈತ ವಿರೋಧಿಯಾದುದು ಎಂದಿದ್ದಾರೆ.
ಇದು ವಿರಮಿಸುವ ಕಾಲ ಅಲ್ಲ, ರೈತ ವಿರೋಧಿ ಬಿಜೆಪಿ ವಿರುದ್ಧದ ಹೋರಾಟ ಮುಂದುವರಿಯಲಿದೆ. ರೈತರ ಹೋರಾಟಕ್ಕೆ ಸಿಕ್ಕ ಗೆಲುವಿನ ಸ್ಪೂರ್ತಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ದ ಜನ ಹೋರಾಟಕ್ಕೆ ನಾಂದಿಯಾಗಲಿದೆ. ಪಟ್ರೋಲ್-ಡೀಸೆಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧದ ಹೋರಾಟಕ್ಕೆ ದೇಶದ ಜನ ಅಣಿಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. (kpc)
ಮೂರು ಕರಾಳ ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ. ಈ ನಿರ್ಧಾರ ಮೊದಲೇ ಆಗಬೇಕಿತ್ತು. ಆದರೆ ತಮ್ಮ ಕಾರ್ಪೊರೇಟ್ ಸ್ನೇಹಿತರನ್ನು ಉದ್ದಾರ ಮಾಡಲು ತಂದಿದ್ದ ಈ ಕಾನೂನು ರದ್ದು ಮಾಡಲು ಪ್ರಧಾನಿ ಮೋದಿ ಮೀನ ಮೇಷ ಎಣಿಸಿದ್ದರು. ಕೊನೆಗೂ ರೈತರ ಸಾಂಘಿಕ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ. ಇದು ದೇಶದ ರೈತರ ನೈತಿಕ ಜಯ.ರೈತರ ಪಾಲಿಗೆ ಮರಣ ಶಾಸನವಾಗಿದ್ದ 3 ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರು ನಿರಂತರ ಹೋರಾಟ ಮಾಡಿದ್ದಾರೆ.ಈ ಹೋರಾಟದಲ್ಲಿ ಅದೆಷ್ಟೋ ರೈತರು ಹುತಾತ್ಮರಾಗಿದ್ದಾರೆ.ಇಂದು ಆ ಹುತಾತ್ಮ ರೈತರ ಆತ್ಮಕ್ಕೆ ಶಾಂತಿ ಸಿಕ್ಕಿದ ದಿನ.ತಾನೇನು ಮಾಡಿದರೂ ನಡೆಯುತ್ತೆ ಎಂಬ ಮೋದಿಯವರ ಭ್ರಮೆ ಇಂದು ಕಳಚಿ ಬಿದ್ದಿದೆ. ರೈತರ ಶಕ್ತಿ ದೇಶಕ್ಕೆ ಗೊತ್ತಾಗಿದೆ.ಕರಾಳ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳಲು BJPಯವರು ಮಾಡಬಾರದ ಕೆಲಸ ಮಾಡಿದರು.ರೈತರಿಗೆ ಉಗ್ರರ ಪಟ್ಟ ಕಟ್ಟಿದರು.ರೈತರ ನ್ಯಾಯಯುತವಾದ ಹೋರಾಟವನ್ನು ಭಯೋತ್ಪಾದಕ ಕೃತ್ಯಕ್ಕೆ ಹೋಲಿಸಿದರು. ಕೊನೆಗೆ ತಮ್ಮ ಯಾವ ಕುತಂತ್ರವೂ ಫಲಿಸದೆ ರೈತರ ಮುಂದೆ ಶರಣಾಗಿದ್ದಾರೆ. ರೈತ ಸಿಡಿದು ನಿಂತರೆ ಏನಾಗಲಿದೆ ಎಂಬುದಕ್ಕೆ ಕಾಯ್ದೆ ವಾಪಾಸಾತಿಯೇ ನಿದರ್ಶನ.ಕೃಷಿ ಕಾಯ್ದೆಯು ಒಂದು ವರ್ಗದ ರೈತರಿಗೆ ಮನವರಿಕೆಯಾಗಲು ವಿಫಲವಾದ ಕಾರಣ ಕಾಯ್ದೆ ವಾಪಾಸು ಪಡೆಯಲಾಗಿದೆ ಎಂದು ಮೋದಿ ಹೇಳಿದ್ದಾರೆ. ಅದು ನಿಜವಲ್ಲ. ಇತ್ತೀಚೆಗೆ ನಡೆದ ಉಪಚುನಾವಣೆಗಳ ಸೋಲು ಹಾಗೂ ಮುಂಬರಲಿರುವ ಉ.ಪ್ರದೇಶ ಚುನಾವಣೆಯೇ ಕಾಯ್ದೆ ವಾಪಾಸಾತಿಗೆ ನೈಜ ಕಾರಣ. ರೈತರನ್ನು ಕೆಣಕಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅಂತಿಮ ಸತ್ಯ. dinesh gundoorao
