

ಸಿದ್ದಾಪುರ: ತಾಲ್ಲೂಕಿನ ಹೊಸೂರಿನಲ್ಲಿ ಎಂ ಕೆ ನಾಯ್ಕ ಹೊಸಳ್ಳಿ ರವರು ತಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಿಮಿತ್ತ ಏರ್ಪಡಿಸಿದ್ದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ಸಭಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಪ್ರಸಿದ್ದ ಮದ್ದಳೆ ವಾದಕರಾದ ಶಂಕರ ಭಾಗವತ್ ರವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಕರ ಭಾಗವತರು ಜಗತ್ತಿನಲ್ಲಿ ಯಕ್ಷಗಾನ ಬದುಕಬೇಕೆಂದಾದರೆ ಎಲ್ಲಾ ದಿನಗಳಲ್ಲಿ ಇಂತಹ ಕಾರ್ಯಕ್ರಮ ಗಳಾಗಬೇಕು. ನನಗೆ ಸಂಬಂಧ ವೆಂದಾದರೆ ಯಕ್ಷಗಾನವೇ ಸಂಬಂಧ, ನಾನು ಇನ್ನೂ ಅಭ್ಯಾಸ ಮಾಡುತ್ತಿರುತ್ತೇನೆ. ಪ್ರಪಂಚದಲ್ಲಿ ಕಲೆ ದೊಡ್ಡದು. ಅದಕ್ಕೆ ನಮ್ಮ ಬ್ಯಾಗ್ರೌಂಡ ಚನ್ನಾಗಿರಬೇಕು. ಮನೆ ಮತ್ತು ಕಲೆಯನ್ನು ಒಟ್ಟೋಟ್ಟೊಗೆ ಕೊಂಡಯ್ಯಬೇಕು. ಅಂದಾಗ ನಾವು ಯಶಸ್ಸು ಕಾಣಲು ಸಾಧ್ಯ ಎಂದರು.
ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ಮಾತನಾಡಿ ಎಂ. ಕೆ ನಾಯ್ಕ ವ್ಥತ್ತಿಯ ಜೊತೆಗೆ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದವರು. ಅವರು ಎಲ್ಲಾ ಕಲೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಎಂದರು .
ಅಧ್ಯಕ್ಷತೆ ವಹಿಸಿದ್ದ ಡಾ: ಶ್ರೀಧರ ವೈದ್ಯರವರು ಮಾತನಾಡಿ ಬೆಳಗಿನ ತನಕ ಕಾರ್ಯಕ್ರಮ ನಡೆಯುವ ಪ್ರಪಂಚದ ಏಕೈಕ ಕಲೆ ಎಂದರೆ ಅದು ಯಕ್ಷಗಾನ ಮಾತ್ರ. ಇಂದು ಸನ್ಮಾನಿಸಿರುವುದು ಪ್ರಪಂಚದ ಪ್ರಖ್ಯಾತ ಮದ್ದಲೆ ವಾದಕರು. ಯಕ್ಷಗಾನ ನನಗೆ ಪಂಚಪ್ರಾಣ. ಯಕ್ಷಗಾನ ವನ್ನು ಪ್ರೋತ್ಸಾಹಿಸ ಬೇಕು ಎಂದರು.
ಗಣಪತಿ ಹೆಗಡೆ ಗುಂಜಗೋಡ್ ಸನ್ಮಾನ ಪತ್ರ ವಾಚಿಸಿದರು. ಜೈರಾಮ ಭಟ್ ಸನ್ಮಾನಿತರ ಪರಿಚಯ ಮಾಡಿದರು. ಆರ್ ಜಿ ಪೈ ಮಂಜೈನ್, ಕೇಶವ ಹೆಗಡೆ ಕೊಳಗಿ ವೇದಿಕೆಯಲ್ಲಿದ್ದರು.ಎಂ ಕೆ ನಾಯ್ಕ ಸ್ವಾಗತಿಸಿ, ವಂದಿಸಿದರು. ನಾಗೇಂದ್ರ ರಾವ್ ನಿರೂಪಿಸಿದರು.
ವಾಲಿಮೋಕ್ಷ ಯಕ್ಷಗಾನ ತಾಳ ಮದ್ದಲೆ ಕಾರ್ಯಕ್ರಮ ದಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ರಾಮನಾಗಿ ಜಿ ಕೆ ಭಟ್ ಕಸ್ಗಿ, ಸುಗ್ರೀವನಾಗಿ ಗಣಪತಿ ಹೆಗಡೆ ಗುಂಜಗೋಡ, ಎರಡನೆ ರಾಮನಾಗಿ ಶೇಷಗಿರಿ ಭಟ್ ಗುಂಜಗೋಡ, ತಾರೆಯಾಗಿ ಎಂ ಸಿ ಭಟ್, ವಾಲಿಯಾಗಿ ಜೈರಾಮ ಭಟ್ ಗುಂಜಗೋಡ ಪಾತ್ರ ನಿರ್ವಹಿಸಿದರು.

