ಕಾರವಾರ ಬಂದರಿನಲ್ಲಿದ್ದ ಕಬ್ಬಿಣದ ಅದಿರು ಹರಾಜಿಗೆ ನ್ಯಾಯಾಲಯ ಅನುಮತಿ

ಕಾರವಾರದ ಬೈತಕೋಲ್ ಬಂದರಿನಲ್ಲಿ ದಾಸ್ತಾನು ಮಾಡಿರುವ ಅಕ್ರಮ ಕಬ್ಬಿಣದ ಅದಿರಿನ್ನು ಲೈವ್ ಬಿಡ್ ನಡೆಸುವಂತೆ ನ್ಯಾಯಾಲಯವು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

File photo

ಕಾರವಾರ: ಕಾರವಾರದ ಬೈತಕೋಲ್ ಬಂದರಿನಲ್ಲಿ ದಾಸ್ತಾನು ಮಾಡಿರುವ ಅಕ್ರಮ ಕಬ್ಬಿಣದ ಅದಿರಿನ್ನು ಲೈವ್ ಬಿಡ್ ನಡೆಸುವಂತೆ ನ್ಯಾಯಾಲಯವು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. 

ಕಾರವಾರ ಜೆಎಂಎಫ್‌ಸಿ ನ್ಯಾಯಾಲಯವು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಹರಾಜಿಗೆ ಸಮಯ ನಿಗದಿಪಡಿಸಿದೆ. ಈ ಮೂಲಕ ದಶಕಗಳಿಂದ ಗಾಳಿ ಮಳೆಗೆ ಕೊಚ್ಚಿ ಸಮುದ್ರಪಾಲಾಗುತ್ತಿದ್ದ ಅದಿರಿಗೆ ಕೊನೆಗೂ ಮುಕ್ತಿ ಸಿಕ್ಕಂತಾಗಿದೆ.

ಅಕ್ರಮ ಗಣಿಗಾರಿಕೆಯಲ್ಲಿನ ನೂರಾರು ಮೆಟ್ರಿಕ್ ಟನ್ ಅದಿರನ್ನ ಕರಾವಳಿಯ ಕಾರವಾರ ಮತ್ತು ಬೇಲೇಕೇರಿ ಬಂದರಿನ ಮೂಲಕ ವಿದೇಶಕ್ಕೆ ಸಾಗಿಸುತ್ತಿದ್ದಾಗ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.

ಅಂದಿನಿಂದ ಕಬ್ಬಿಣದ ಅದಿರು ಕಾರವಾರ ಹಾಗೂ ಬೇಲೇಕೇರಿ ಬಂದರು ಪ್ರದೇಶದಲ್ಲೇ ಉಳಿದುಕೊಂಡಿದ್ದು ಗಾಳಿ, ಮಳೆಗೆ ಇಲ್ಲಿನ ಸಮುದ್ರ ಸೇರುವಂತಾಗಿತ್ತು. ಬರೋಬ್ಬರಿ 12 ವರ್ಷಗಳ ಬಳಿಕ ಜೆಎಂಎಫ್‌ಸಿ ನ್ಯಾಯಾಲಯ ಕಾರವಾರ ಬಂದರಿನಲ್ಲಿ ದಾಸ್ತಾನಿರುವ  ಅದಿರನ್ನ ಹರಾಜು ಹಾಕಲು ಕಳೆದ ವರ್ಷ 2021ರಲ್ಲಿ ಆದೇಶ ನೀಡಿತ್ತು. ಅದರಂತೆ ಸೂಕ್ತ ಪರಿಶೀಲನೆ ನಡೆಸಿ ಅಗತ್ಯ ಸಿದ್ಧತೆಗಳನ್ನ ಮಾಡಿಕೊಂಡ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇದೀಗ ಅದಿರಿನ ಹರಾಜಿಗೆ ಲೈವ್ ಟೆಂಡರನ್ನು ಕರೆದಿದೆ.

ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಬಂದರು ಪ್ರದೇಶದಲ್ಲಿರುವ ಕಬ್ಬಿಣ ಅದಿರನ್ನು ಸಾಗಾಟ ಮಾಡುವಾಗ ಸಿಸಿಕ್ಯಾಮೆರಾ ಹಾಗೂ ಸಾಗಾಟ ಲಾರಿಗಳಿಗೆ ಜಿಪಿಎಸ್ ಅಳವಡಿಕೆಯಂತಹ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇನ್ನು ಅಕ್ರಮ ಅದಿರು ಸಾಗಾಟದ ಆರೋಪದ ಮೇಲೆ 2010ರ ಮಾರ್ಚ್‌ನಲ್ಲಿ ದಾಳಿ ನಡೆಸಿದ್ದ ಅರಣ್ಯ ಅಧಿಕಾರಿಗಳು, ಕಾರವಾರದ ಬೈತಖೋಲ್ ಬಂದರಿನಲ್ಲಿ 50 ಸಾವಿರಕ್ಕೂ ಅಧಿಕ ಮೆಟ್ರಿಕ್‌ ಟನ್ ಹಾಗೂ ಬೇಲೇಕೇರಿ ಬಂದರಿನಲ್ಲಿ 8 ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನ ಜಪ್ತಿಪಡಿಸಿಕೊಂಡಿದ್ದರು. 

ಕಾರವಾರ ಬಂದರಿನಲ್ಲಿ ಸಂಗ್ರಹಿಸಿಟ್ಟಿದ್ದ 50 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಅದಿರಿನಲ್ಲಿ ಅರ್ಧದಷ್ಟು ಕಳುವಾಗಿದ್ದಲ್ಲದೇ, ಬಹುಪಾಲು ಮಳೆಯಲ್ಲಿ ಕೊಚ್ಚಿಹೋಗಿದೆ. ಹರಾಜಿಗಾಗಿ ಅಧಿಕಾರಿಗಳು ನಡೆಸಿದ ಮೌಲ್ಯಮಾಪನದಲ್ಲಿ ಕೇವಲ 30 ಸಾವಿರ ಮೆಟ್ರಿಕ್ ಟನ್ ಅದಿರು ಲೆಕ್ಕಕ್ಕೆ ಸಿಕ್ಕಿದ್ದು, ನ್ಯಾಯಾಲಯದಿಂದ ಅನುಮತಿ ಪಡೆದು ಈಗ ಹರಾಜು ಹಾಕಲಾಗುತ್ತಿದೆ. 

ಸದ್ಯ ಕಾರವಾರ ಬಂದರಿನಲ್ಲಿದ್ದ ಅದಿರಿನ ಹರಾಜಿಗೆ ಮಾತ್ರ ನ್ಯಾಯಾಲಯ ಅನುಮತಿ ನೀಡಿದ್ದು, ಬೇಲೇಕೇರಿ ಬಂದರಿನಲ್ಲಿನ ಅದಿರಿನ ಹರಾಜಿಗೆ ಅನುಮತಿ ನೀಡಿಲ್ಲ. ಈಗಾಗಲೇ ಬೇಲೇಕೇರಿ ಬಂದರಿನಲ್ಲಿನ ಅದಿರು ಪ್ರತಿವರ್ಷ ಮಳೆಯ ನೀರಿನೊಂದಿಗೆ ಹರಿದು ಸಮುದ್ರ ಸೇರುತ್ತಿದ್ದು ಅಲ್ಲಿನ ಜಲಚರಗಳಿಗೆ ಹಾನಿಯುಂಟು ಮಾಡುತ್ತಿದೆ. ಅಲ್ಲದೇ ಇದರಿಂದ ಮೀನುಗಾರರು ಸಹ ನಷ್ಟ ಅನುಭವಿಸುವಂತಾಗಿದ್ದು, ಬೇಲೇಕೇರಿ ಬಂದರಿನಲ್ಲಿನ ಅದಿರಿನ ಸ್ಥಳಾಂತರಕ್ಕಾದರೂ ಕ್ರಮ ಕೈಗೊಳ್ಳಬೇಕು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 

2010ರಲ್ಲಿ ಜಪ್ತಿ ಆದ 1.15 ಲಕ್ಷ ಮೆಟ್ರಿಕ್‌ ಟನ್‌ ಅದಿರನ್ನು ಕಾರವಾರ ಬಂದರಿನಲ್ಲಿ ದಾಸ್ತಾನು ಇಡಲಾಗಿತ್ತು. ಈ ಅದಿರನ್ನು ಒಂದು ತಿಂಗಳೊಳಗೆ ಹರಾಡು ಮಾಡಲಾಗುತ್ತಿದೆ. 

ಬಂದರಿನ ಮೇಲೆ ದಾಳಿ ನಡೆಸಿದ್ದ ಐಎಫ್‌ಎಸ್ ಅಧಿಕಾರಿ ಆರ್ ಗೋಕುಲ್ ಅವರು, ಕಬ್ಬಿಣದ ಅದಿರನ್ನು ವಶಪಡಿಸಿಕೊಂಡಿದ್ದರು. ಬಳಿಕ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರಿಗೆ ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದರು. ನಂತರ ಸಂತೋಷ್ ಹೆಗ್ಡೆಯವರು ಅಕ್ರಮ ಗಣಿಗಾರಿಕೆ ಕುರಿತ ತಮ್ಮ ವರದಿಯಲ್ಲಿ ಈ ಕುರಿತು ಮಾಹಿತಿ ಸೇರಿಸಿದ್ದರು.

ಈ ಪ್ರಕರಣದ ತನಿಖೆಯು ದೇಶಾದ್ಯಂತ ಗಣಿಗಾರಿಕೆ ಮತ್ತು ಕಬ್ಬಿಣದ ಅದಿರು ಸಾಗಣೆಯನ್ನು ನಿಷೇಧಿಸುವಂತೆ ಸುಪ್ರೀಂಕೋರ್ಟ್ ಆದೇಶಕ್ಕೂ ಕಾರಣವಾಗಿತ್ತು

ತಜ್ಞರ ಪ್ರಕಾರ, 2010 ರಲ್ಲಿ ವಶಪಡಿಸಿಕೊಂಡ ಅದಿರು ಪ್ರತಿ ಮೆಟ್ರಿಕ್ ಟನ್‌ಗೆ 5,000 ರೂ.ಗಳಷ್ಟಿತ್ತು ಎಂದು ತಿಳಿಸಿದ್ದಾರೆ. ಇದೇ ಮೊತ್ತ ಈಗಲೂ ಇದ್ದಿದ್ದರೆ ಒಟ್ಟು ವಶಪಡಿಸಿಕೊಂಡಿರುವ ಅದಿರಿನ ಮೌಲ್ಯ ರೂ.16 ಕೋಟಿ ಆಗಿರುತ್ತಿತ್ತು. ಆದರೆ, ಕಬ್ಬಿಣದ ಅದಿರಿನ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಇದರ ಮೌಲ್ಯ ರೂ.4.8 ಕೋಟಿ ಆಗಿದೆ. 

ಬೇಲೆಕೇರಿಯಲ್ಲಿರುವ ಕಬ್ಬಿಣದ ಅದಿರಿನ ಮೌಲ್ಯ 120 ಕೋಟಿ ರೂಪಾಯಿಗಳಾಗಿದ್ದು, ಹಳೆಯ ಬೆಲೆಯೇ ಅನ್ವಯವಾಗುತ್ತಿದ್ದರೆ ಇದರ ಮೌಲ್ಯ 400 ಕೋಟಿ ರೂಪಾಯಿಗಳಾಗಿರುತ್ತಿತ್ತು ಎಂದು ತಿಳಿದುಬಂದಿದೆ.  (ಕಪ್ರಡಾ))

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *