


‘Crushed’ ಸಿರೀಸ್‌ನಲ್ಲಿ ಕನ್ನಡತಿ ಆದ್ಯಾ ಮಿಂಚು
ಉತ್ತರ ಕನ್ನಡದ ಅಂಕೋಲಾ ಮೂಲದ ಪ್ರಿಯಾ ನಾಯಕ ಹಾಗೂ ಆನಂದ್ ನಾಯಕ ಅವರ ಪುತ್ರಿ ಆದ್ಯಾ ಹುಟ್ಟಿದ್ದು ಮಡಿಕೇರಿಯ ಕೊಡಗಿನಲ್ಲಾದರೂ ಬೆಳೆದಿದ್ದು ದೂರದ ಸಿಂಗಾಪುರ್ನಲ್ಲಿ. ನೆಟ್ ಫ್ಲಿಕ್ಸ್ನ ಬಾಂಬೆ ಬೇಗಮ್ ವೆಬ್ ಸಿರೀಸ್ ಮೂಲಕ ಪರಿಚಯವಾದ ಆದ್ಯಾ ಇದೀಗ ‘ಕ್ರಷ್ಡ್’ ಸಿರೀಸ್‌ನಲ್ಲಿ ಮಥುರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..

ಕಾರವಾರ : ಅಮೆಜಾನ್ ಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಕ್ರಷ್ಡ್’ ಸಿರೀಸ್‌ನಲ್ಲಿ( Hindi series ‘Crushed’) ಅಭಿನಯಿಸುತ್ತಿರುವ ಕನ್ನಡತಿ ಆದ್ಯಾ ಆನಂದ್ ತಮ್ಮ ನಟನೆ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಉತ್ತರಕನ್ನಡದ ಅಂಕೋಲಾ ಮೂಲದ ಪ್ರಿಯಾ ನಾಯಕ ಹಾಗೂ ಆನಂದ್ ನಾಯಕ ಅವರ ಪುತ್ರಿ ಆದ್ಯಾ ಹುಟ್ಟಿದ್ದು ಮಡಿಕೇರಿಯ ಕೊಡಗಿನಲ್ಲಾದರೂ ಬೆಳೆದಿದ್ದು ದೂರದ ಸಿಂಗಾಪುರ್ನಲ್ಲಿ. ನೆಟ್ ಫ್ಲಿಕ್ಸ್ನ ಬಾಂಬೆ ಬೇಗಮ್ ವೆಬ್ ಸಿರೀಸ್ ಮೂಲಕ ಪರಿಚಯವಾದ ಆದ್ಯಾ ಇದೀಗ ‘ಕ್ರಷ್ಡ್’ ಸಿರೀಸ್‌ನಲ್ಲಿ ಮಥುರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿರೀಸ್‌ನಲ್ಲಿ ಕನ್ನಡತಿ ಆದ್ಯಾ ಮಿಂಚು
‘ಕ್ರಷ್ಡ್’ನಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿರುವ ಆದ್ಯಾ, ಸದ್ಯ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾಳೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ಸಾವಿರಾರು ಜನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆದ್ಯಾಳ ಫೋಟೋ, ವಿಡಿಯೋಗಳನ್ನು ನ್ಯಾಶನಲ್ ಕ್ರಷ್ ಎಂಬ ಟೈಟಲ್‌ನೊಂದಿಗೆ ಹಂಚಿಕೊಳ್ಳುವ ಮೂಲಕ ಅಭಿಮಾನದ ಜೊತೆಗೆ ಆದ್ಯಾಳ ನಟನೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆದ್ಯಾ ಆನಂದ್, ‘ನಾನು ಇಂಟರ್ನೆಟ್ ಸೆನ್ಸೇಶನ್ ಆಗಿದ್ದೀನಿ ಎನ್ನುವುದನ್ನು ಕೇಳಲು ತುಂಬಾ ಖುಷಿಯಾಗುತ್ತಿದೆ. ‘ಕ್ರಷ್ಡ್’ನಲ್ಲಿ ನನಗೆ ಅವಕಾಶ ನೀಡಿದ್ದಕ್ಕೆ ಅಮೆಜಾನ್ ಮಿನಿಗೆ ಧನ್ಯವಾದ ಹೇಳುತ್ತೇನೆ. ಈ ಸಿರೀಸ್‌ನಲ್ಲಿ ನನ್ನ ಪಾತ್ರ ಹೆಚ್ಚಿನ ಜನರಿಗೆ ಇಷ್ಟವಾಗಿದೆ.
ಈ ಸಿರೀಸ್ ಬಿಡುಗಡೆಯಾದ ನಂತರದಿಂದ ನನಗೆ ಸಾಮಾಜಿಕ ಜಾಲತಾಣಗಳಲ್ಲಿ ದಿನವೂ 500ಕ್ಕೂ ಹೆಚ್ಚು ಪ್ರೀತಿಯ, ಮೆಚ್ಚುಗೆಯ ಸಂದೇಶಗಳು ಬರುತ್ತಿವೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಫೋಟೋ, ವೀಡಿಯೋಗಳನ್ನು ಹಂಚಿಕೊಳ್ಳುವುದನ್ನು, ನನ್ನನ್ನು ಉಲ್ಲೇಖಿಸುವುದನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ’ ಎಂದಿದ್ದಾರೆ.
‘ಕ್ರಷ್ಡ್’ ಸಿರೀಸ್ನ ಆರು ಸಂಚಿಕೆಗಳಲ್ಲಿ ಐದು ಈಗಾಗಲೇ ಅಮೆಜಾನ್ ಮಿನಿ ಟಿವಿಯಲ್ಲಿ ಉಚಿತವಾಗಿ ಸ್ಟ್ರೀಮ್ ಆಗುತ್ತಿದೆ. ಸೀಸನ್ ಫೈನಲ್ ಎಪಿಸೋಡ್ ಫೆಬ್ರವರಿ 2ರಂದು ಬಿಡುಗಡೆಯಾಗಲಿದೆ. ‘ಕ್ರಷ್ಡ್’, ಶಾಲಾ ದಿನಗಳಲ್ಲಿ ಅನುಭವಕ್ಕೆ ಬರುವ ರೊಮ್ಯಾಂಟಿಕ್ ಪ್ರೇಮ ಕಥನ. ಎಲ್ಲ ವಯಸ್ಸಿನವರಿಗೂ ಒಗ್ಗುವ ಸುಂದರ ಕಥೆಯನ್ನು ಹೊಂದಿದೆ. ಸಿರೀಸ್ ನೋಡಿದ ಅನೇಕರು ತಮ್ಮ ಬಾಲ್ಯದ ದಿನಗಳು ನೆನಪಿಗೆ ಬಂದವು ಎಂದು ಹೇಳಿಕೊಂಡಿದ್ದಾರೆ.
ಹೀನಾ ಡಿಸೋಜಾ ಮತ್ತು ಮಂದರ್ ಕುರುಂಡ್ಕರ್ ನಿರ್ದೇಶನದ ಈ ಸರಣಿಯಲ್ಲಿ ರುದ್ರಾಕ್ಷ್ ಜೈಸ್ವಾಲ್, ಆದ್ಯಾ ಆನಂದ್, ಊರ್ವಿ ಸಿಂಗ್, ನಮನ್ ಜೈನ್, ಅರ್ಜುನ್ ದೇಸ್ವಾಲ್ ಮತ್ತು ಅನುಪ್ರಿಯಾ ಕರೋಲಿ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಸಿರೀಸ್‌ನಲ್ಲಿ ಸ್ಯಾಮ್ (ಸಂವಿಧಾನ್ ಶರ್ಮಾ) ಪಾತ್ರದಲ್ಲಿ ನಟಿಸಿರುವ ರುದ್ರಾಕ್ಷ್ ಜೈಸ್ವಾಲ್ ಮತ್ತು ಮಥುರಾ ಆಗಿ ಕಾಣಿಸಿಕೊಂಡಿರುವ ಆದ್ಯಾ, ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ. (etbk)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
