ಯುವಕವಿಯ ಭಾವಗಳು ಬಸುರಾದಾಗ

ಭಾವಗಳು ಬಸುರಾದಾಗ
ಲೇಖಕರು : ಅರುಣ ಕೊಪ್ಪ, ಪೋ. ಉಂಬ್ಳೇಕೊಪ್ಪ
ತಾಲೂಕ : ಶಿರಸಿ (ಉ.ಕ.) 581 318
ಮೊ. : 9483666942
(ಕವನ ಸಂಕಲನ )
ಅರುಣ ಕೊಪ್ಪರ ಭಾವಗಳು ಬಸುರಾದಾಗ ಕವನ ಸಂಕಲನಕ್ಕೆ ಹಿರಿಯ ಪತ್ರಕರ್ತ ಜಯರಾಮ ಹೆಗಡೆ ಶಿರಸಿ ಮುನ್ನುಡಿ ಬರೆದಿದ್ದಾರೆ. ಬೆನ್ನುಡಿಯಲ್ಲಿ ಸಾಹಿತಿ ಡಾ|| ಬೇರ್ಯರಾಮಕುಮಾರ ಅರುಣಕೊಪ್ಪ ರನ್ನು ಪರಿಚಯಿಸಿದ್ದಾರೆ.
ಸಾಲದು ಎಂಬಂತೆ ಡಾ|| ಅಜಿತ್ ಹೆಗಡೆ ಹರೀಶಿಯವರೂ ಕೂಡಾ ಇವರನ್ನು ಓದುಗರಿಗೆ ಪರಿಚಯಿಸಿದ್ದಾರೆ. ಇವರ ಮೊದಲ ಕವನ ಸಂಗ್ರಹ ಹನಿಗಳ ಹಂದರ ಎರಡನೆ ಸಾಹಿತ್ಯ ಕೃತಿಯೇ ಭಾವಗಳು ಬಸುರಾದಾಗ (ಕವನ ಸಂಕಲನ)
ಈ ಸಂಕಲನದಲ್ಲಿ ಸಣ್ಣದು ದೊಡ್ಡದು ಸೇರಿ ಒಟ್ಟೂ 76 ಕವನಗಳಿವೆ.
ಭಾವಗಳು ಬಸುರಾದಾಗ ಏನಾಗುತ್ತದೆ? ಎಂಬುದಕ್ಕೆ ಕವಿ ಅರುಣ ನಾಯ್ಕ ಕೊಪ್ಪರ ಈ ಕವನ ಸಂಕಲನವನ್ನು ಓದಿದರೆ ಎಲ್ಲವೂ ಗೊತ್ತಾಗುತ್ತದೆ. ಎಂದು ಒಂದೇ ಮಾತಿನಲ್ಲಿ ಇದಕ್ಕೆ ವಿಮರ್ಶಿಸಬಹುದು.
ಆದರೆ ಅದು ವಿಮರ್ಶಕನ ತರ್ಕಬದ್ಧ ಲಕ್ಷಣವಲ್ಲ ಮತ್ತು ಔಚಿತ್ಯವೂ ಅಲ್ಲ. ಮತ್ತು ಕವಿ ಇಟ್ಟುಕೊಂಡ ವಿಶಾಲ ಆಸೆ, ಆಕಾಂಕ್ಷೆ ಹರವನ್ನು ಮೊಟಕುಗೊಳಿಸಿದಂತಾಗಬಹುದೇನೂ?! ಅಲ್ಲದೆ ಬೆಳೆವ ಸಿರಿ ಮೊಳಕೆಯಲಿಯೇ ಚಿವುಟುವುದು ವಿಮರ್ಶೆ ಆಗಲಾರದು.
ಕಾವ್ಯದ ಸಾರ, ಅದು ಸಾಗಿದ ಸತ್ಪಥ ಮತ್ತು ಕಾವ್ಯದ ಓದು ಅದು ಹೇಳುವ ಫಲಶ್ರುತಿ ಮತ್ತು ಅದರ ಒಳಧ್ವನಿ ಏನು ಎಂಬುದನ್ನು ತೆರೆದಿಡುವುದೇ ವಿಮರ್ಶೆ ಎನಿಸಿಕೊಳ್ಳುತ್ತದೆ.
ಕಾವ್ಯ ಅಥವಾ ಕವನ ಅದೇನು ಅಷ್ಟು ಸುಲಭವೇನಲ್ಲ. ಹೀಗೆ ಕಾವ್ಯ ರೂಪದಲ್ಲಿ ಹೇಳುವಾಗ ವಿಷಯದ ಪ್ರತಿಪಾದನೆ ಇಟ್ಟುಕೊಂಡಿರುವ ವಸ್ತುವಿನ ಅಸ್ತಿತ್ವ ಮತ್ತು ಭಾವ ಪ್ರತಿಮೆಗಳ ತುಲನಾತ್ಮಕ ಚಿಂತನೆ ಮಾಡುವದು, ಕಾವ್ಯ ರಚನೆಯ ನೀತಿ ಸಂಹಿತೆಯ ಉಲ್ಲಂಘನೆಯಾಗದಂತೆ ರಚಿಸುವುದೇ ಕವಿಯ ಮೇಧಾಶಕ್ತಿಗೆ ಒಡ್ಡುವ ಸವಾಲಾಗಿರುತ್ತದೆ.
ಒಳ ಮನಸ್ಸಿನ ಆಳದಲ್ಲಿ ಹುದುಗಿದ ಯೋಚನೆಯನ್ನು ಭಾವನಾತ್ಮಕವಾಗಿ ಹೊರಹಾಕುವ ಮುನ್ನ ಅದು ಬಸುರಲ್ಲಿ ಬೆಳೆಯುತ್ತಿರುವ ಮಗುವಂತೆಯೇ ಎಂಬುದನ್ನು ಕೊಪ್ಪರÀವರು ತಮ್ಮದೇ ಆದ ಶೈಲಿಯಲ್ಲಿ ಸಾಕಷ್ಟು ಅರ್ಥಪೂರ್ಣವಾಗಿ ಹೇಳಿದ್ದಾರೆ.
ಉದಾ :- ಕವನ 1 ಅವ್ವನ ಕನಸು ಪ್ರೀತಿ ಪಾತ್ರ ನಾ ಇಷ್ಟಿತ್ತು ಮಮತೆಯ ಘನತೆ
ಸಲ್ಲಿಸುವ ಗೌರವಕೆ ಕಿಂಚಿತ್ತು ಹೆಚ್ಚಲ್ಲ ಈ ಹೃದಯದಿಂದ
ಹಸಿವಾದ ಈ ಮನಸ್ಸಿಗೆ ನೀಗಲು ಸಾಕು ನನ್ನ ಅವ್ವನ ಕನಸು
ಹೇಗೆ ತಮ್ಮ ಮನಸನ್ನು ಕಾವ್ಯಾತ್ಮಕವಾಗಿ ಮಾರ್ಪಡಿಸಿಕೊಳ್ಳುವ ರೀತಿ ತುಂಬಾ ಹರಿತ ಮತ್ತು ಮೇಲ್‍ಸ್ತರದ ವಿಚಾರಗಳಾಗಿವೆ.
ಕವನ 6 ವೇದಿಕೆ :
ಒಂದೇ ಬೇರು ಒಂದೇ ಕೊಂಬೆ ಹಸಿರು ಹಲವು
ಸದಾ ಏಕತೆಯ ಉಸಿರು ರಂಗು ಈ ಸಂಜೆ
ಹೀಗೆ ಹಲವು ಹತ್ತು ಕವನಗಳ ಸಾಲಿನಲ್ಲಿ ಸ್ರಜನಶೀಲತೆ ಇದೆ.
ಉದಾ : ಕವನ 8 :- ಮೂಡುವ ಕಾಡುವ ಮನಗಳ ಮಾತಿಗೆ
ಹಾಡು ಪಾಡುವ ಒಲವಿನ ಗಡಿಬಿಡಿಗೆ
ನಾ ಹೇಗೆ ಹೋಗಿ ಸಹಿಸಲಿ ನೀ ಹೇಳು
ಹೇಗೆ ಮನಸ್ಸಿನ ಭಾವನೆಗಳನ್ನು ಭಾವನೆಯ ಬಸುರಲ್ಲಿಟ್ಟು ಹೇಳುವ ಅವರ ಮನಸ್ಸಿನ ಸ್ಥಾಯಿ ಸ್ಥಿತಿ ಅದರ ಮೇರು ವಿಚಾರಕ್ಕೆ ಮೆರಗು ತಂದಿದೆ.
ಉದಾಃ ಕವನ 60 : – ಶೀರ್ಶಿಕೆಯ ಕವನ “ಭಾವಗಳ ಬಸುರಾದಾಗ” ಇದರಲ್ಲಿ
ಭಾವಗಳು ಬಸುರಾದಾಗ ಹರಿಸುವುದು ಸಂಗೀತ ಸಾಹಿತ್ಯದ ಕಾವ್ಯ ರಸದೌತಣ ಎಂದಿದ್ದಾರೆ.
ಭಾವದ ಅಭಿವ್ಯಕ್ತಿಗೆ ಸಾಹಿತ್ಯ ಸಂಗೀತಕಲೆ ಎಲ್ಲವೂ ಲೀನವಾಗುತ್ತದೆ ಎಂಬುದನ್ನು ಸಾರವತ್ತಾಗಿ ಬಣ್ಣಿಸಿದ್ದಾರೆ.
ಕವಿಯನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸುವುದು ವಿಮರ್ಶೆಯೆ ಸರಿ ಸಮರ್ಪಕ ಪರಿಕಲ್ಪನೆಯಾಗಲಾರದು. ಕೆಲವು ಕವಿತೆಗಳು ಪ್ರಾಸರಹಿತವಾಗಿ ಅತಿ ಉದ್ದುದ್ದ ಸಾಲುಗಳಾಗಿ ಗದ್ಯದ ರೂಪ ತಳೆದಿರುವುದು ಓದುಗನ ಸಹನೆಯನ್ನು ಪರೀಕ್ಷಿಸುವಂತಿದೆ.
ಉದಾ ಹರಿಸಬೇಕೆಂದರೆ :
ನಿನ್ನ ನೆನಪಲಿ, ಗುಬ್ಬಿಗೂಡು, ನಮ್ಮ ಭಾರತ ಸಂವಿಧಾನ, ಹೀಗೆ ಕೆಲವಷ್ಟು ಕವನಗಳು ಮಿತಿಮೀರಿ ಬೆಳೆದು ನಿಂತಿವೆ. ಇವುಗಳು ಕಾವ್ಯಕ್ಕೆ ಭೂಷಣವಲ್ಲ ಎಂದೆನಿಸುತ್ತದೆ.
ಕಲ್ಪನೆಯನ್ನು ಕವನವನ್ನಾಗಿಸುವ ಶಕ್ತಿ ಈ ಕವಿಗೆ ಚೆನ್ನಾಗಿದೆ. ತುಂಬಾ ಭಾವಾಭಿವ್ಯಕ್ತಿಯಲ್ಲಿ ಅಭಿವ್ಯಕ್ತಿಸುವ ರೀತಿಯಲ್ಲಿ ಸುತ್ತು ಬಳಸದಿರುವುದು ಒಳ್ಳೆಯದು.
ಉದಾ : ನಾನು ಕವಿಯಲ್ಲ ಕವನ 9 :
ಮೂಡಿದ ಮನದ ಮರದಿ ಭಾವವೆಂಬ ಕೊಂಬೆ !
ಎತ್ತರದಿ ಸಿಗದ ಹಾಗೆ ಹಸಿರು ಎಲೆಗಳ ಚಪ್ಪರ ಮುಗಿಯದ ಹಕ್ಕಿ ಸಾಲಿನ ಆಸನ ನೋಡಿದಾಕ್ಷಣ ಕವನ
ನಾನು ಕವಿಯಲ್ಲ
ಕವಿಯ ವಿಚಾರಧಾರೆ ಹರಿತವಾಗಿದೆ.
ವೈಚಾರಿಕತೆಯ ಹರವು ವಿಶಾಲವಾಗಿದೆ. ಸಂವೇದನಾಶೀಲತೆ ಎಲ್ಲಾ ಕವನಗಳಲ್ಲಿಯೂ ಇದೆ.
ಮನಸ್ಸಿಗೆ ಮುದ ನೀಡುವ ಶಕ್ತಿ ಕವನಗಳಿಗಿದೆ. ಬಸಿರು ಎನ್ನುವ ಶಬ್ದಾರ್ಥವೇ ಹಡೆಯುವ ಮೊದಲು ಇರುವ ತಾಯಿಯ ಸ್ಥಿತಿ. ಹುಟ್ಟುವ ಮಗುವಿನ ಬಗ್ಗೆ ತಾಯಿ ಏನೆಲ್ಲ ಚಿಂತಿಸುತ್ತಾಳೆ. ಏನೆಲ್ಲ ಕನಸು ಕಾಣುತ್ತಾಳೆ. ಹೇಳತೀರದು. ಹುಟ್ಟುವ ಮಗುವಿನ ಬಗ್ಗೆ ತರತರದ ಕನಸು ಕಾಣುತ್ತಾಳೆ. ಸರ್ವಾಂಗ ಸುಂದರವಾಗಿ ಮಗು ಹುಟ್ಟಲಿ ಎಂದು ಹಾರೈಸುತ್ತಾಳೆ. ಈ ಕವಿಯ ಎಲ್ಲ ಕವಿತೆಯಲ್ಲಿಯೂ ಇಂತಹ ಹಾರೈಕೆ ಎದ್ದು ಕಾಣುತ್ತದೆ.
ಶಬ್ದಗಳ ಕೊರತೆ ಈ ಕವಿಗೆ ಇಲ್ಲ. ವಸ್ತುವನ್ನು ಹುಡುಕುವ ದಿವ್ಯ ಶೋಧಕ ಶಕ್ತಿ ತುಂಬಾ ಇದೆ.
ಗೂಡ ನಿಗೂಢವಾಗಿ ವಿಷಯವನ್ನು ಸಾದರಪಡಿಸುವ ರೀತಿ ಓದುಗನಿಗೆ ಸ್ವಲ್ಪ ಕಬ್ಬಿಣದ ಕಡಲೆಯಾದರೂ ಪ್ರಬುದ್ಧ ಓದುಗನಿಗೆ ಏನೂ ಕಷ್ಟವೆನಿಸಲಾರದು. ಇವರ ಬರಹ ಪ್ರಬುದ್ಧತೆಯ ಪ್ರಬಲ ಪ್ರತಿಬಿಂಬ ಇವರ ಮನಸ್ಸು ಎನ್ನಬಹುದು. ಕವಿಗೆ ತುಂಬಾ ಭವಿಷ್ಯವಿದೆ. ವಿಚಾರದ ಅರಿಕೆ ಸಾಕಷ್ಟು ಮನಸ್ಸಿನ ಆಳಕ್ಕಿಳಿದಾಗಲೇ ಚಿಗುರುವ ಸಾಹಿತ್ಯದ ಕೊಂಬೆ ಬಲಿಷ್ಠವಾಗುತ್ತದೆ. ಕಾವ್ಯಕ್ಕೆ ಗಟ್ಟಿತನ ಬರುತ್ತದೆ. ವಿಚಾರವ ಅದುಮಿ ಹಿಡಿದಾಗ ಭಾವನೆಗಳು ಸ್ಪೋಟಗೊಳ್ಳುತ್ತವೆ ಎಂಬುದನ್ನು ಕೆಲವು ಕವನಗಳು ಸಾಬೀತುಪಡಿಸಿವೆ.
ಕಾವ್ಯವೆಂದರೆ ಕಲ್ಪನೆ ಮತ್ತು ಭಾವಗಳ ಸಂಗಮ (ಹ್ಯಾಜ್‍ಲೀಟ್) ಇಂಗ್ಲೀಷ್ ಕವಿಕಾವ್ಯವೆಂದರೆ ಸೌಂದರ್ಯದ ಲಯಬದ್ಧ ಸೃಷ್ಟಿ ಎಂದಿದ್ದಾರೆ. (ಕೆಬ್ಲ) ಕವಿ
ಅಚಿಡಿಟಥಿಟe ಹೇಳಿದ್ದಾರೆ. Poeಣಡಿಥಿ ತಿe ತಿiಟಟ ಛಿಚಿಟಟ musiಛಿಚಿಟ ಣhough ಎohಟಿsoಟಿ ಸಂಗೀತಮಯ ಚಿಂತನೆಯೇ ಕಾವ್ಯ ಹೇಳುತ್ತಾರೆ.
ಎohಟಿsoಟಿ ಹೇಳುತ್ತಾರೆ. Poeಣಡಿಥಿ is meಣಡಿiಛಿಚಿಟ ಛಿomಠಿosiಣioಟಿ (ಕಾವ್ಯವೆಂದರೆ ಚಂದೋಬಂದ ರಚನೆ)
ಎರ್ಡಸ್ ವಿತ್ರ ಹೇಳುತ್ತಾನೆ (Poeಣಡಿಥಿ is ಣhe bಡಿeಚಿಣh ಚಿಟಿಜ ಜಿiಟಿeಡಿ sಠಿiಡಿiಣ oಜಿ ಚಿಟಟ ಞಟಿoತಿಟeಜge ) ಕಾವ್ಯವು ಎಲ್ಲ ಜ್ಞಾನಕ್ಕಿಂತ ಮಿಗಿಲಾದ ಚೈತನ್ಯ ಉಸಿರು.
ಮೇಲೆ ಹೇಳಿದ ಈ ಎಲ್ಲ ಅಂಶಗಳನ್ನು ಈ ಕವಿ ತಿಳಿದುಕೊಂಡು ಮುನ್ನಡೆಯಲಿ.
ಸಮಕಾಲೀನ ಸಮಸ್ಯೆಗಳ ಬಗ್ಗೆ ಕವಿ ದೃಷ್ಟಿ ಹಾಯಿಸಿದರೆ ಒಳಿತು. ಒಟ್ಟಾರೆ ಕವಿಯ ಈ ಎರಡನೆ ಹೆಜ್ಜೆ ಗಟ್ಟಿತನದ ದಿಟ್ಟ ಹೆಜ್ಜೆಯಾಗಿದೆ. ಕವಿಯ ಭವಿಷ್ಯ ಉಜ್ವಲವಾಗಲಿ, ಸಾಹಿತ್ಯಯಾನ ಚೆನ್ನಾಗಿ ಸಾಗಲಿ ಎಂದು ಹಾರೈಸುವೆ. ಇಂತಿ
ಶ್ರೀ ಜಿ.ವಿ. ಕೊಪ್ಪಲತೋಟ
(ಕವಿಗಳು ವಿಮರ್ಶಕರು)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *