

ಬೆಂಗಳೂರಿನ ಕಮಿಷನರ್ ಒಂದೂವರೆ ಕೋಟಿ ಜನರನ್ನ ರಕ್ಷಣೆ ಮಾಡುವ ಕಾರ್ಯ ಮಾಡ್ತಿದ್ದಾರೆ. ಬಿಜೆಪಿ ನಾಯಕರುಗಳು ಇಂತಹ ಹೇಳಿಕೆಯಿಂದ ಸರ್ಕಾರ ಹಾಗೂ ಸಿ.ಎಂ ಗೆ ಅಗೌರವ ತೋರಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು: ಜೆ.ಜೆ.ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಚಂದ್ರು ಕೊಲೆ ಬೈಕ್ ಟಚ್ ಆಗಿದ್ದರಿಂದ ನಡೆದಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದರು. ಆದರೆ ಚಂದ್ರು ಗೆಳೆಯ ಸೈಮನ್ ದಿಢೀರ್ ತನ್ನ ಹೇಳಿಕೆ ಬದಲಾಯಿಸಿ, ಉರ್ದು ಮಾತನಾಡದ್ದಕ್ಕೆ ಕೊಲೆ ನಡೆದಿದೆ ಎಂದು ಹೇಳಿದ್ದರಿಂದ ಬಿಜೆಪಿ ನಾಯಕರ ಕಮಲ್ ಪಂತ್ ವಿರುದ್ಧ ಮುಗಿಬಿದ್ದಿದ್ದರು.
ಮೊನ್ನೆ ಚಂದ್ರು ಸ್ನೇಹಿತ ಸೈಮನ್ ಉರ್ದು ಮಾತನಾಡದ್ದಕ್ಕಾಗಿಯೇ ಕೊಲೆ ಮಾಡಿದ್ರು ಅಂತಾ ಹೇಳಿ, ಇಡೀ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ರೆ. ಇದನ್ನೆ ಇಟ್ಕೊಂಡು ಬಿಜೆಪಿ ನಾಯಕರು ಪೊಲೀಸರ ವಿರುದ್ಧ ಗುಡುಗಿದ್ದಾರೆ. ಸದ್ಯ ಈ ಬಗ್ಗೆ ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮೂಲಕ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನ ಕಮಿಷನರ್ ಒಂದೂವರೆ ಕೋಟಿ ಜನರನ್ನ ರಕ್ಷಣೆ ಮಾಡುವ ಕಾರ್ಯ ಮಾಡ್ತಿದ್ದಾರೆ. ಬಿಜೆಪಿ ನಾಯಕರುಗಳು ಇಂತಹ ಹೇಳಿಕೆಯಿಂದ ಸರ್ಕಾರ ಹಾಗೂ ಸಿ.ಎಂ ಗೆ ಅಗೌರವ ತೋರಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಆಡಳಿತಾರೂಢ ಸರ್ಕಾರ ಮತ್ತು ಅಧಿಕಾರದಲ್ಲಿರುವ ಪಕ್ಷದ ರಾಜಕಾರಣಿಯೊಬ್ಬರು ಮಾಧ್ಯಮಗಳಲ್ಲಿ ಆಯುಕ್ತರನ್ನು “ಸುಳ್ಳುಗಾರ” ಎಂದು ಕರೆಯುವ ಮೂಲಕ ಮುಖ್ಯಮಂತ್ರಿ ಮತ್ತು ಸರ್ಕಾರವನ್ನು ಅವಮಾನಿಸುತ್ತಿದ್ದಾರೆ. ಉತ್ತಮ ಆಡಳಿತ ನೀಡುವಲ್ಲಿ ಸರ್ಕಾರ ಮೇಲುಗೈ ಸಾಧಿಸಲಿ ಎಂದು ಹೇಳಿದ್ದಾರೆ. (kpc)
