
- https://www.youtube.com/watch?v=DkGHAXKxGeY&t=56s

World Earth Day 2022 : ತಿಳಿಯಿರಿ ಈ ದಿನದ ಮಹತ್ವ
ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏ.22ರಂದು ವಿಶ್ವದಾದ್ಯಂತ ‘ಭೂ ದಿನ’ವನ್ನು ಆಚರಿಸಲಾಗುತ್ತದೆ..

ನವದೆಹಲಿ : ಇಂದು ವಿಶ್ವ ಭೂಮಿ ದಿನ. ಇದನ್ನು ‘ಅಂತಾರಾಷ್ಟ್ರೀಯ ಮಾತೃಭೂಮಿ ದಿನ’ ಎಂದೂ ಕರೆಯುತ್ತಾರೆ. ಪ್ರತಿ ವರ್ಷ ಏ. 22ರಂದು ಆಚರಿಸಲಾಗುತ್ತದೆ. ನಮ್ಮ ಪರಿಸರವನ್ನು ರಕ್ಷಿಸುವ ತೀವ್ರ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಹಲವು ದೇಶಗಳು ಈ ದಿನವನ್ನು ಆಚರಿಸುತ್ತವೆ. ಮಾಲಿನ್ಯ, ಅರಣ್ಯನಾಶ ಮತ್ತು ಜಾಗತಿಕ ತಾಪಮಾನ ಸೇರಿದಂತೆ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ.
ಭೂಮಿಯ ದಿನ 2022 ಥೀಮ್ : ಅರ್ಥ್ ಡೇ ಸಂಸ್ಥೆಯ ಪ್ರಕಾರ, 2022ರ ಭೂ ದಿನದ ಥೀಮ್’ನಮ್ಮ ಗ್ರಹದಲ್ಲಿ (ಭೂಮಿ) ಹೂಡಿಕೆ ಮಾಡಿ’. ಇದರ ಪ್ರಮುಖ ಅಂಶವೆಂದರೆ ದಿಟ್ಟ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಮತ್ತು ಸಮಾನ ರೀತಿಯಲ್ಲಿ ಅದನ್ನು ಕಾರ್ಯಗತಗೊಳಿಸುವುದಾಗಿದೆ. ಭೂಮಿಗೆ ಅಥವಾ ಪರಿಸರಕ್ಕೆ ಹಾನಿಕಾರಕ ಕಾರ್ಯಗಳಿಂದ ದೂರವಿರುವ ನಿಮ್ಮ ಚಿಂತನೆಯನ್ನು ದಿಟ್ಟಗೊಳಿಸಿ ಮತ್ತು ಅದನ್ನು ಎಲ್ಲೆಡೆ ಪಸರಿಸುವುದಾಗಿದೆ. ‘ನಮ್ಮ ಭೂಮಿಯನ್ನು ಮರುಸ್ಥಾಪಿಸಿ’ ಎಂಬುದು 2021ರ ಥೀಮ್ ಆಗಿತ್ತು.
ವಿಶ್ವ ಭೂಮಿ ದಿನದ ಇತಿಹಾಸ : ಏ.22, 1970ರಂದು ಭೂಮಿ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. 150 ವರ್ಷಗಳ ಕೈಗಾರಿಕಾ ಅಭಿವೃದ್ಧಿಯ ಪರಿಣಾಮಗಳ ವಿರುದ್ಧ ಪ್ರತಿಭಟಿಸಲು 20 ಮಿಲಿಯನ್ ಜನರು ನಗರಗಳಾದ್ಯಂತ ಬೀದಿಗಿಳಿದರು. ಸ್ಯಾನ್ ಫ್ರಾನ್ಸಿಸ್ಕೋದ ಯುನೆಸ್ಕೊ ಸಮ್ಮೇಳನದಲ್ಲಿ ಶಾಂತಿ ಹೋರಾಟಗಾರ ಜಾನ್ ಮೆಕ್ ಕಾನ್ನೆಲ್ ಮಾತೃ ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ಒಂದು ದಿನ ಬೇಕೆಂದು ಪ್ರಸ್ತಾಪಿಸಿದ್ದರು.
ಬಳಿಕ ಮಾ. 21, 1970ರಂದು ಉತ್ತರ ಗೋಳಾರ್ಧದಲ್ಲಿ ವಿಶ್ವ ಭೂ ದಿನವನ್ನು ವಸಂತ ದಿನವಾಗಿ ಆಚರಿಸಲು ನಿರ್ಧರಿಸಲಾಗಿತ್ತು. ಆ ನಂತರ, ಅಮೆರಿಕದ ಸೆನೆಟ್ ಸದಸ್ಯ ಗೇಲಾರ್ಡ್ ನೆಲ್ಸನ್ ಅವರು ಏ.22, 1970 ರಂದು ರಾಷ್ಟ್ರವ್ಯಾಪಿ ಪರಿಸರ ಜ್ಞಾನೋದಯ ದಿನವನ್ನು ಆಚರಿಸಲು ಪ್ರಸ್ತಾವನೆ ಇಟ್ಟಿದ್ದರು. ನಂತರ ಅದನ್ನು ‘ಅರ್ಥ್ ಡೇ’ ಎಂದು ಮರುನಾಮಕರಣ ಮಾಡಲಾಯಿತು.
ಏಪ್ರಿಲ್ 22ರಂದು ವಿಶ್ವ ಭೂಮಿ ದಿನದ ಆಚರಣೆಯು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ, ಈ ಸಮಯದಲ್ಲಿ ಉತ್ತರ ಗೋಳಾರ್ಧದಲ್ಲಿ ವಸಂತಕಾಲ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಶರತ್ಕಾಲವಿರುತ್ತದೆ. ಹಾಗಾಗಿ, ಹವಾಮಾನ ಸಹ ಸಹನೀಯವಾಗಿರುವುದರಿಂದ, ಭೂ ದಿನದ ಆಚರಣೆ ಹೆಚ್ಚು ಆಹ್ಲಾದಕರವಾಗಿರುತ್ತದೆ.
ಭೂಮಿಯ ದಿನವನ್ನು ಏಕೆ ಆಚರಿಸಲಾಗುತ್ತದೆ? : ಮಿತಿಮೀರಿದ ಜನಸಂಖ್ಯೆ, ಜೀವವೈವಿಧ್ಯತೆಯ ನಷ್ಟ, ಓಝೋನ್ ಪದರದ ನಾಶ, ಜಾಗತಿಕ ತಾಪಮಾನ ಏರಿಕೆ, ಮಾಲಿನ್ಯ ಹೆಚ್ಚಳ ಇವೇ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಸಮಕಾಲೀನ ಹಾಗೂ ಹೊಸ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಒಳಗೊಂಡಿದೆ.
ವಿಶ್ವ ಭೂಮಿಯ ದಿನದಂದು ಪರಿಸರ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಲಕ್ಷಾಂತರ ಜನರು ಒಟ್ಟಿಗೆ ಸೇರುತ್ತಾರೆ. ಈ ದಿನದ ಹೆಸರಲ್ಲಿ ವಿವಿಧ ಹವಾಮಾನ ಸಮಸ್ಯೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು, ಪರಿಸರ ಸಾಕ್ಷರತೆಯ ವಿಷಯಗಳ ಕುರಿತು ಚರ್ಚೆಗಳನ್ನು ನಡೆಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. (etbk)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
