

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ತರಬೇತಿ ಹಾಗೂ ಕರಾಟೆ ಪಂದ್ಯಾವಳಿಯಲ್ಲಿ 7 ಚಿನ್ನದ ಪದಕ 7 ಬೆಳ್ಳಿ 5 ಕಂಚಿನ ಪದಕ.
ಮಹಾಕೂಟದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಿದ್ದಾಪುರ ತಾಲೂಕಿನ ಆನಂದ ಕೃಷ್ಣ ನಾಯ್ಕ ತಂಡವು ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತು ಸಿದ್ದಾಪುರ ಕರಾಟೆ ತರಬೇತಿ ಕೇಂದ್ರದ ಮಕ್ಕಳು 7 ಚಿನ್ನ 7 ಬೆಳ್ಳಿ 5 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಚಾಂಪಿಯನ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪದಕ ಪಡೆದ ಕರಾಟೆ ಪಟುಗಳು :
ಜೈ ರಾಜೀವ್ ಕಾಮತ್( ಚಿನ್ನ ) ಶ್ರೀರಾಮ್ ರಾಜೀವ್ ಕಾಮತ್ ( ಬೆಳ್ಳಿ ) ಪ್ರೀತಮ್ ವಿ ಗೌಡ ( ಕಂಚು ) ನಮನ್ ವಿ ಅಂಬಿಗ ( ಬೆಳ್ಳಿ ) ಹರ್ಷಿತ್ ಎಸ್ ಮುರುಡೇಶ್ವರ ( ಚಿನ್ನ ) ಪ್ರತೀಕ್ ವಿ ನಿಲೇಕಣಿ ( ಚಿನ್ನ ) ಸಮರ್ಥ್ ಎಸ್ ಶಿಗ್ಗಾಂವಕರ್ ( ಕಂಚು ) ಸೌಜನ್ಯ ಎಂ ಶೇಟ್ ( ಚಿನ್ನ ) ವಜ್ರಶ್ರೀ ಹೆಚ್ ಗೌಡರ್ ( ಕಂಚು ) ಸಿಂಧೂ ಐ ನಾಯ್ಕ ( ಬೆಳ್ಳಿ ) ಮಿತೇಶ್ಎಮ್ ಮಹಾಲೆ ( ಕಂಚು ) ದಯಾನಂದ್ ಆರ್ ನಾಯ್ಕ ( ಬೆಳ್ಳಿ ) ಜಯಂತ ಎಮ್ ನಾಯ್ಕ ( ಒಂದು ಬೆಳ್ಳಿ ಒಂದು ಕಂಚು ) ಬಾಲಕೃಷ್ಣ ಆರ್ ನಾಯ್ಕ ( ಚಿನ್ನ ) ಪ್ರಸನ್ನ ( ಬೆಳ್ಳಿ ) ಎಂ ಡಿ ಪಝಿಲ್ (ಒಂದು ಚಿನ್ನ 1 ಬೆಳ್ಳಿ ) ಪುನೀತ್ ಕೃಷ್ಣ ನಾಯ್ಕ ( ಚಿನ್ನ ) ಇವರ ಸಾಧನೆಗೆ ತರಬೇತಿ ನೀಡಿದಂತಹ ಆನಂದ್ ಕೃಷ್ಣ ನಾಯಕ್ ಸಂತಸ ವ್ಯಕ್ತಪಡಿಸಿದ್ದಾರೆ.

ಮೇ.೨ ರಿಂದ ಉಚಿತ ಬೇಸಿಗೆ ಶಿಬಿರ
ಸಿದ್ದಾಪುರ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆ, ತಾಲೂಕ ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ
ಯೋಜನೆ ಸಿದ್ದಾಪುರ ಇವುಗಳ ಆಶ್ರ ಯದಲ್ಲಿ
ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರವನ್ನು
ಹಮ್ಮಿಕೊಳ್ಳಲಾಗಿದೆ.ಸದರಿ ಶಿಬಿರವು ಮೇ.೨ ರಿಂದ ೮
ದಿನಗಳ ಕಾಲ ತಾಲೂಕಿನ ಕೋಲಶಿರ್ಸಿ ಸರಕಾರಿ ಹಿರಿಯ
ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಗುತ್ತಿದೆ.
ಪ್ರತಿ ದಿನ ಬೆಳಿಗ್ಗೆ ೯-೦೦ ರಿಂದ ೧೨-೩೦ ರ ವರೆಗೆ ಶಿಬಿರ
ನಡೆಯಲಿದ್ದು, ೫ ವರ್ಷದಿಂದ ೧೪ ವರ್ಷದೊಳಗಿನ
ಮಕ್ಕಳಿಗೆ ಭಾಗವಹಿಸಿಲು ಅವಕಾಶ ಇದೆ. ಮೊದಲು ಹೆಸರು
ನೋಂ ದಾಯಿಸಿದ ೫೦ ಮಕ್ಕಳಿಗೆ ಆದ್ಯತೆ
ನೀಡಲಾಗುತ್ತಿದೆ.ಶಿಬಿರದಲ್ಲಿ ಸಮೂಹ ನೃತ್ಯ, ಸಮೂಹ
ಗೀತೆ, ಚಿತ್ರಕಲೆ, ಕರಾಟೆ, ಜೇಡಿ ಮಣ್ಣಿನ ಕಲೆ,
ಕಸದಿಂದ ರಸ ಮೊದಲಾದ ಸೃಜನಾತ್ಮಕ
ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಆಸಕ್ತ ಅರ್ಹ
ವಿದ್ಯಾರ್ಥಿಗಳು ಶಿಶು ಅಭಿವೃದ್ಧಿ ಯೋಜನೆಯ
ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ
೮೧೦೫೪೦೬೫೧೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು
ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಪ್ರಕಟಣೆಯಲ್ಲಿ ತಿಳಿಸಿದೆ.
