ಇದು ನನ್ನ ಅಳಲು ಕೂಡಾ! ನಾವು ಈ ಕಾಲದವರಲ್ಲ ಬಿಡಿ…

ಈ ಶೀರ್ಷಿಕೆಯನ್ನಷ್ಟೇ ಬರೆದು ಸುಮ್ಮನಾಗಬೇಕಿತ್ತು. ಹೀಗೆ ಸುಮ್ಮನಾಗಲು ಬೇಕಷ್ಟು ಕಾರಣಗಳೂ,ಸಬೂಬುಗಳು ಇವೆ. ಬಟ್‌,

ಲಂಕೇಶ್‌ ಕಾಲದಲ್ಲಿ ಬೇಕಷ್ಟು ಲಂಕೇಶ್‌ ಆಗಲು ಅವಕಾಶವಿದ್ದವು. ವಡ್ಡರ್ಸೆ ಕಾಲದಲ್ಲಿ ಹಾಗಿಲ್ಲದೇ ಇದ್ದಿದ್ದರೆ ಶೆಟ್ಟರು ಕನ್ನಡ ಸಾರಸ್ವತ ಲೋಕವನ್ನು ಅಲುಗಾಡಿಸುತಿದ್ದರೆ?

ಹೀಗೆಲ್ಲಾ ಚಿಂತಿಸುವ ಮುನ್ನ ನಮ್ಮ ಕಾಲದ ಲೆಟರ್ಹೆಡ್‌ ಪತ್ರಕರ್ತರು, ಗುರುತಿನ ಚೀಟಿ,ಪ್ರೆಸ್‌ ಲೇಬಲ್‌ ನ ಅಕ್ಷರ ಲೋಕದ ಲಾಭಕೋರರೇ ಎದುರು ಬರುತಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿಯಮಾನುಸಾರ ಸದಸ್ಯನಾಗಲೂ ಅರ್ಹನೇ ಅಲ್ಲ, ಬಹುತೇಕ ಪತ್ರಕರ್ತರು ಪದವಿ,ಅರ್ಹತೆ, ಯೋಗ್ಯತೆಗಳಿಲ್ಲದೆ ಪತ್ರಕರ್ತರು, ಸಂಘದ ಸದಸ್ಯರು, ಪದಾಧಿಕಾರಿಗಳೆಲ್ಲಾ ಆಗುತ್ತಾರೆ. ಸಮಾಜದ ನ್ಯೂನ್ಯತೆ ಹೇಳುವ ಮಾಧ್ಯಮದ ಮಂದಿಗಳಿಗೆ ಗುರುತಿನ ಚೀಟಿ, ಲೆಟರ್ಹೆಡ್‌,ಸಂಘದ ಸದಸ್ಯತ್ವಗಳೇ ಅರ್ಹತೆಗಳಾಗುತ್ತವೆ. ನಾವು ಯೋಗಿ,ಮೋದಿ ಕಾಲದಲ್ಲಿದ್ದೇವೆ. ಆದರೆ ನಾವೆಲ್ಲಾ ಇಲ್ಲದಿದ್ದರೆ ಈ ದುರುಳರು ಇನ್ನಷ್ಟು ನಿರ್ಭೀಡೆಯಿಂದ ಸತ್ಯವನ್ನು ಸುಳ್ಳುಮಾಡುತಿದ್ದರು,ಸುಳ್ಳನ್ನು ಸತ್ಯ ಮಾಡುತಿದ್ದರು. ಈಗಲೂ ಕಾಲ ಮಿಂಚಿಲ್ಲ ಈ ಅಚ್ಚೇ ದಿನ ಮಾಯವಾಗಿ ನಮ್ಮ ವಾಸ್ತವದ ದಿನಗಳು ಭರದಿಂದ ಬರಲು ಸಜ್ಜಾ ಗುತ್ತಿವೆ. ಕಾಯೋಣ ತಾಳ್ಮೆಯಿಂದ ನಿಮಗೆ, ನಿಮ್ಮ ಅಭಿಮಾನಿಗಳಿಗೆ ವಿಶ್ವ ವ್ಯಂಗ್ಯಚಿತ್ರ ದಿನಾಚರಣೆಯ ಶುಭಾಶಯಗಳು.

ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ಕಾರ್ಟೂನ್ ಎನ್ನುವ ಕಲೆಯನ್ನು ನೆಚ್ಚಿ ಇದನ್ನೇ ವೃತ್ತಿಯಾಗಿ ಆಯ್ದುಕೊಂಡು ಕೂತುಬಿಟ್ಟೆ ನಾನು. ಕೈಯಲ್ಲಿ ಎಚ್ ಎ ಎಲ್ ನ ಇಂಟರ್ವ್ಯೂ ಲೆಟರ್ ಇತ್ತು. ಆಗೆಲ್ಲ ಚೂರು ಪಾರು ಲಂಚದೊಂದಿಗೆ ಸುಲಭವಾಗಿ ಸಿಕ್ಕಿ ಬಿಡಬಹುದಾದ ಕೇಂದ್ರ ಸರ್ಕಾರದ ನೌಕರಿಯಾಗಿತ್ತದು. ಕಾರ್ಟೂನ್ ನ ಹುಚ್ಚು ಹಿಡಿಸಿಕೊಂಡ ನಾನು ಅತ್ತ ತಿರುಗಿಯೂ ನೋಡಲಿಲ್ಲ. ಮಡಿಕೇರಿಯ ಸ್ಥಳೀಯ ಪತ್ರಿಕೆಯೊಂದರಲ್ಲಿ ಮಾತಾಡಿಕೊಂಡು ನಿತ್ಯ ಕಾರ್ಟೂನ್ ಆರಂಭಿಸಿಯೇಬಿಟ್ಟೆ. ನನಗೆ ಸರಿಯಾಗಿ ನೆನಪಿದೆ. ನನ್ನ ಮೊತ್ತ ಮೊದಲನೇ ಕಾರ್ಟೂನಿನ ಬಗ್ಗೆಯೇ ಸಂಘಪರಿವಾರದ ಚಿಳ್ಳೆಪಿಳ್ಳೆಗಳು ಎಡಿಟರ್‌ಗೆ ದೂರಿತ್ತವು. ಗಣೇಶಹಬ್ಬದ ದಿನ ವಾಹನ ಪಾರ್ಕಿಂಗ್ ಜಾಗದಲ್ಲಿ ತನ್ನ ವಾಹನವಾದ ಇಲಿಯನ್ನು ಗಣೇಶ ಪಾರ್ಕಿಂಗ್ ಮಾಡಿದ್ದ ಕಾರ್ಟೂನ್ ಅದು. ನನ್ನ ವಾದದ ಮುಂದೆ ಆ ಚಿಳ್ಳೆಪಿಳ್ಳೆಗಳು ಸಪ್ಪೆಹೊಡೆದು ಸುಮ್ಮನಾಗಿಬಿಟ್ಟವು. ಅಲ್ಲಿಂದ ಆರಂಭವಾದ ಕಾರ್ಟೂನ್ ಸಂಬಂಧಿತ ತಗಾದೆಗಳನ್ನು ತೀರಾ ಮೊನ್ನೆ ಮೊನ್ನೆಯವರೆಗೂ ಎದುರುಗೊಳ್ಳುತ್ತಲೇ ಬಂದೆ.ಬರೋಬ್ಬರಿ ಇಪ್ಪತ್ತೆರಡು ವರ್ಷಗಳ ನಂತರ ಸುಮ್ಮನೆ ಒಂದು ನಿಲುದಾಣದಲ್ಲಿ ನಿಂತು ನೋಡುತ್ತಿದ್ದೇನೆ. ಕಾರ್ಟೂನ್ ಕುರಿತಾದ ಅಸಹಿಷ್ಣುತೆಗೆ ಪ್ರಭುತ್ವದ ಬೆಂಬಲ ಸಿಕ್ಕಿದೆ ಈಗ.

ಈಗಲೂ ನನಗೊಮ್ಮೊಮ್ಮೆ ತೀವ್ರವಾಗಿ ಅನಿಸುವುದೇನೆಂದರೆ, ವಡ್ಡರ್ಸೆ ರಘುರಾಮ ಶೆಟ್ಟರ ಕಾಲದಲ್ಲಿ ಕಾರ್ಟೂನಿಸ್ಟ್ ಆಗಿರಬೇಕಿತ್ತು ನಾನು. ಲಂಕೇಶ್ ಕಾಲದಲ್ಲಿ ಚಾಲ್ತಿಯಲ್ಲಿರಬೇಕಾದ ಕಾರ್ಟೂನಿಸ್ಟ್ ಆಗಿರಬೇಕಿತ್ತು ನಾನು. ಹೋಗಿ ಹೋಗಿ ಈಗಿನ ‘ವಾಣಿ’ಗಳ ಕಾಲದಲ್ಲಿ ಹುಟ್ಟಿಬಿಟ್ಟೆ! Write profession in wrong period! ನಮ್ಮ ಸಾಧನೆಯಲ್ಲಿ ನಮ್ಮ ಬೌದ್ಧಿಕ ಸರಕುಗಳ ಪಾಲೆಷ್ಟಿದೆಯೋ, ಅಷ್ಟೇ ಪಾಲು ನಮಗೆ ದಕ್ಕುವ ಅವಕಾಶಗಳದ್ದೂ ಇದೆ. ಅವಕಾಶವೇ ಇಲ್ಲದ ದರಿದ್ರ ಕಾಲದಲ್ಲಿ ಕಾರ್ಟೂನ್ ಎಂಬ ಮುತ್ತನ್ನು ಹಿಡಿದು ನಿಂತಿದ್ದೇನೆ. ನೀವೇನೋ ಹೇಳಬಹುದು; ಸೋಷಿಯಲ್ ಮೀಡಿಯಾ ಇದೆಯಲ್ಲ ಅಂತೆಲ್ಲ. ಇದರಲ್ಲಿ ಹೊಟ್ಟೆ ಪಾಡಿನ ಹುಕಿಯೂ ಇರುವುದನ್ನು ಯಾರೂ ಗಮನಿಸಿಸುವುದೇ ಇಲ್ಲ ನೋಡಿ.ಸಮಾನ ಸಿದ್ಧಾಂತಿಗಳ ಬೆಂಬಲವೋ, ಅವಕಾಶವೋ ವೇದಿಕೆಯೋ- ಇವುಗಳ ಹಿಂದಿನ ಹಿಪಾಕ್ರಸಿಗಳ ಚಿತ್ರಾನ್ನ ಮೆದ್ದು ಅಜೀರ್ಣಗೊಂಡಿದ್ದೇನೆ. ಸುತ್ತಲಿನ ಜಗತ್ತನ್ನು ದೂರುವುದರಲ್ಲಿ ಯಾವ ಅರ್ಥವೂ ಇಲ್ಲ ಅನಿಸುತ್ತಿದೆ.

ಅದೇಕೋ ಈ ಕಾಲ ವಿಚಿತ್ರವಾದ ಚರ್ಬಿ ಬೆಳೆಸಿಕೊಂಡು ಬೋರಲು ಬಿದ್ದುಕೊಂಡಂತಿದೆ. ದುಷ್ಕಾಲದಲ್ಲಿ ಹಗ್ಗವೂ ಹಾವಾಗಿ ಕಡಿಯುತ್ತದಂತೆ! ಗಾಂಧಿ ವೇಷದ ಗೋಡ್ಸೆಗಳ ಕಾಲವಿದು. ಪ್ರಜಾಪ್ರಭುತ್ವ ವಿಚಾರವಾಗಿ ಚೀರುತ್ತ ತನ್ನ ಅಂತ್ಯರೋಧನೆಯನ್ನು ಮಾಡುತ್ತಿರುವಂತಿದೆ. ಅದರ ಆರ್ತನಾದದೆದುರು ನಮ್ಮವು ಯಾವುದೋ ರೋಮಸಂಧಿಯ ಅಳಲು ಅಷ್ಟೆ.ನನಗೆ ಖೇದ ಇಷ್ಟೆ. ನಿಮ್ಮ ಕಾಲದ ಕಾರ್ಟೂನಿಸ್ಟ್ ಒಬ್ಬನನ್ನು ನೀವು ಕಳೆದುಕೊಳ್ಳುವ ಬಗೆಗಿನ ವಿಷಾದ ವರ್ತಮಾನ ಇಲ್ಲಿದೆ. ನಿಮ್ಮ ಕಾಲದ ‘ವಾಣಿ’ಗಳು ಮಾಡೊದ ಭೀಕರ ಕಗ್ಗೊಲೆ ಗಳಲ್ಲಿ ಇದೂ ಕೂಡಾ ಒಂದು. ಇತಿಹಾಸದ ಗರ್ಭದಲ್ಲಿ ಸಂದುಹೋದ ಪಿಳ್ಳೆ ಹುಳುವೊಂದರ ಸಾವಿನಂತೆ ಇದೂ ಆಗಿಹೋಗಲಿರುವ ಘಟನೆಯಷ್ಟೆ. ಯಾರ ಅನುಕಂಪವನ್ನೂ ಲೆಕ್ಕಕ್ಕೇ ತೆಗೆದುಕೊಳ್ಳದ ಅದರ ಬಿರುಬೀಸು ನಡಿಗೆಯೆದುರು ಎಲ್ಲ ಹಳಹಳಿಕೆಗಳೂ ನಿರರ್ಥಕ. ಕಡೆಯದಾಗಿ ಹೇಳುತ್ತೇನೆ. ಘೋಷಿತ ಶತ್ದುಗಳನ್ನಾದರೂ ನಂಬಿಬಿಡಬಹುದು. ವೇಷದ ಮಿತ್ರರನ್ನಲ್ಲ..

ನಾವು ನಮ್ಮವರೆಂದುಕೊಂಡವರು ನಮ್ಮವರಲ್ಲ ಅಂತ ಅರ್ಥವಾದಾಗ ಆಗುವ ನೋವು ಅಪಾರವಾದದ್ದು.ಇಪ್ಪತ್ತೆರಡು ವರ್ಷಗಳ ಹಿಂದೆ ಯಾವೆಲ್ಲ ಅವಕಾಶಗಳನ್ನು ನಿರಾಕರಿಸಿ ಕಲೆಯ ಕೈ ಹಿಡಿದಿದ್ದೆನೋ, ಅದೀಗ ನನ್ನನ್ನು ಅಣಕಿಸುತ್ತಿದೆ. ನಿರಾಕರಿಸಿದ ಅವಕಾಶಗಳು ಪ್ರೇತರೂಪಿಯಾಗಿ ಕಿರುಚುತ್ತಿವೆ. ಪಾಪದ ಕಲೆ ಕಾರ್ಟೂನ್! ಅನಾಥಾಶ್ರಮದಲ್ಲಿ ಹೆರಳು ಬಿಚ್ಚುತ್ತ ಸುಳ್ಳೇ ಅಭಿಮಾನ ಪಡುತ್ತಿದೆ.Shame on this time! -ದಿನೇಶ್‌ ಕುಕ್ಕುಜಡ್ಕ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *