

ಸಿದ್ದಾಪುರ: ಇಲ್ಲಿಯ ಸಿವಿಲ್ ಕಿರಿಯನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತನಲ್ಲಿ 394 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಅನೇಕ ವರ್ಷಗಳಿಂದ ಬಾಕಿಯಿದ್ದ ದಾಂಪತ್ಯ ಕಲಹದ ಪ್ರಕರಣವೊಂದು ಸುಖಾಂತ್ಯ ಕಂಡಿದೆ.
ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದ 12 ಸಿವಿಲ್, 382 ಕ್ರಿಮಿನಲ್ ಹಾಗೂ 214 ವ್ಯಾಜ್ಯಪೂರ್ವ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ನ್ಯಾಯಾಧೀಶ ತಿಮ್ಮಯ್ಯ ಜಿ ಅಧ್ಯಕ್ಷತೆಯಲ್ಲಿ ವಕೀಲರಾದ ಕೆ.ಜಿ.ನಾಯ್ಕ, ಬಿ.ಎಲ್.ನಾಯ್ಕ ಹಾಗೂ ಎಂ.ಡಿ.ನಾಯ್ಕ ಸಹಯೋಗದಲ್ಲಿ ಶಾಹಿನಾಬಿ ಹಾಗೂ ಅಬ್ದುಲ್ ಶುಕೂರ್ ಖಾನ್ ರ ದಾಂಪತ್ಯ ಕಲಹವನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಗಿದೆ. ಒಟ್ಟಾರೆ ಲೋಕ ಅದಾಲತನಲ್ಲಿ 25 ಲಕ್ಷ ಹಣ ವಸೂಲಾಗಿದೆ ಎಂದು ನ್ಯಾಯಾಧೀಶ ತಿಮ್ಮಯ್ಯ ತಿಳಿಸಿದ್ದಾರೆ.

