ನಾಯಕರ ಪ್ರತಿಷ್ಠೆಯಿಂದ ಕಾಂಗ್ರೆಸ್‌ ಮಂಕಾಗುತ್ತಿದೆಯೆ? ಭಾಗ-೦2

ಕಾಂಗ್ರೆಸ್‌ ಗೆ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ,ಚರಿತ್ರೆಗಳ ಮಹತ್ವವಿದೆಯೋ ಹಾಗೆಯೇ ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ ಗೆ ತನ್ನದೇ ಆದ ಮಹತ್ವ-ಪ್ರಾಮುಖ್ಯತೆಗಳಿವೆ. ದೇಶದಲ್ಲಿ ಸ್ವಾತಂತ್ರ್ಯಾ ನಂತರ ಅಂದಿನ ಜಮೀನ್ಧಾರರು, ಶ್ರೀಮಂತರು,ಶಿಕ್ಷಿತರು ಹೇಗೆ ನಾಯಕರಾದರೋ ಹಾಗೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ, ಶ್ರೀಮಂತಿಕೆ,ಜಾತಿ,ನಾಯಕತ್ವಗಳ ಹಿನ್ನೆಲೆಯಲ್ಲಿ ಬಾಳಿಗಾ,ರಾಮಕೃಷ್ಣ ಹೆಗಡೆ ಸೇರಿದಂತೆ ಅನೇಕರ ನಾಯಕತ್ವವಿತ್ತು.

ಆದರೆ ಬರಬರುತ್ತಾ ಕಾಂಗ್ರೆಸ್‌ ಮೇಲ್ವರ್ಗದ ನಾಯಕರ ಭಾರದಿಂದ ಕುಸಿಯುವ ಅಪಾಯದ ಸಂದರ್ಭದಲ್ಲಿ ನೆಹರೂ ಕಾಂಗ್ರೆಸ್‌ ಗೆ ಸಮಾಜವಾದದ ಕಸಿ ಮಾಡಿ ಕಾಂಗ್ರೆಸ್‌ ನ ಭವಿಷ್ಯ ಫಲವಂತಿಕೆಯನ್ನು ಹೆಚ್ಚಿಸಿದರು. ನಂತರ ಕಾಂಗ್ರೆಸ್ ಮುಖಂಡರಾದ ಇಂದಿರಾಗಾಂಧಿ ಭೂಸುಧಾರಣೆ ಮಸೂದೆ ಜಾರಿ ಮಾಡಿ ಶ್ರೀಮಂತರು, ಪಟ್ಟಭದ್ರರ ವಿರೋಧ ಕಟ್ಟಿಕೊಂಡರು. ( ಮೇಲ್ಜಾತಿ, ಮೇಲ್ವರ್ಗಗಳು ಕಾಂಗ್ರೆಸ್‌ ದ್ವೇಶಿಸುವ ಹಿಂದೆ ಇಂಥ ಅನೇಕ ಕಾರಣಗಳಿವೆ.)

ಆ ಅವಧಿಯಿಂದ ಕಾಂಗ್ರೆಸ್‌ ನಲ್ಲಿರುವ ಮೇಲ್ಜಾತಿ ಮನಸ್ಥಿತಿಯ ಪಟ್ಟಭದ್ರರು,ಮೇಲ್ವರ್ಗದ ನಾಯಕರು ಸಮಾಜವಾದಿಯಾಗಿದ್ದ ಕಾಂಗ್ರೆಸ್‌ ಪಕ್ಷವನ್ನು ಸಿದ್ಧಾಂತವನ್ನು ಕೋಮುವಾದಿ ಮಾಡಲು ಪ್ರಯತ್ನಿಸಿ ಕಾಂಗ್ರೆಸ್‌ ಗೇ ಕೈ ಕೊಟ್ಟಿವೆ. ಈಗಲೂ ಕಾಂಗ್ರೆಸ್‌ ನಲ್ಲಿರುವ ಮೃಧು ಹಿಂದುತ್ವವಾದಿ ನಯವಂಚಕರು ಮತೀಯವಾದಿ ಅಜೆಂಡಾ ಒಪ್ಪುತ್ತಲೇ ಕಾಂಗ್ರೆಸ್‌ ಬುಡ ಅಲುಗಾಡಿಸುತ್ತಿವೆ.

ಈ ವರ್ತಮಾನದ ನಡುವೆ ಹಿಂದೆ ಸಾಂಪ್ರದಾಯಿಕ ಕಾಂಗ್ರೆಸ್‌ ಗೆ ವಿರುದ್ಧವಾಗಿ ಉತ್ತರ ಕನ್ನಡ ಜಿಲ್ಲೆಯ ರಾಜಕೀಯವನ್ನು ಬುಗುರಿಯಂತೆ ತಿರಿಗಿಸುತಿದ್ದ ಸಾರೆಕೊಪ್ಪ ಬಂಗಾರಪ್ಪ ಮೇಲ್ವರ್ಗದ ಜಮೀನ್ಧಾರಿಶಾಹಿ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಸಿಟ್ಟಾಗುತಿದ್ದರು. ಬಹುಸಂಖ್ಯಾತರಿಗೆ ಅಧಿಕಾರ ವಂಚಿಸಿ ಉಳ್ಳವರಿಗೆ ಅಧಿಕಾರ ನೀಡುವ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಪಟ್ಟಭದ್ರರ ರಾಜಕೀಯ ರಾಷ್ಟ್ರಮಟ್ಟದಲ್ಲಿ ಬೆಳೆಯತೊಡಗಿದಾಗ ಉತ್ತರ ಕನ್ನಡಕ್ಕೆ ಎಂಟ್ರಿಕೊಟ್ಟವರು ಮಾರ್ಗರೇಟ್‌ ಆಳ್ವ,

ಆಳ್ವ ಉತ್ತರ ಕನ್ನಡ ಕಾಂಗ್ರೆಸ್‌ ನೇತೃತ್ವದ ಪಾಲು ಕೇಳುವ ಮೊದಲೇ ಮಾರ್ಗರೇಟ್‌ ಮಾವ ಜೋಂಕಿಂ ಆಳ್ವ ಅಂದಿನ ಕನ್ನಡ ಜಿಲ್ಲೆಯ ಸಂಸದರಾಗಿದ್ದರು ಎನ್ನುವುದನ್ನು ಬಿಟ್ಟರೆ ಆಳ್ವ ಉತ್ತರ ಕನ್ನಡ ಪ್ರವೇಶಿಸಲು ಪ್ರಮುಖ ಕಾರಣ ದೇವರಾಯ ನಾಯ್ಕ!

ಆಗತಾನೇ ಚುನಾವಣೆಯ ರೀತಿ-ನೀತಿ ಬದಲಾಗುತ್ತಾ ರಾಜಕೀಯ ದುಬಾರಿ ಎನಿಸತೊಡಗಿದಾಗ ದೇವರಾಯ ನಾಯ್ಕ ಉತ್ತರ ಕನ್ನಡದಿಂದ ಕಾಂಗ್ರೆಸ್‌ ನಿಂದ ಸಂಸತ್‌ ಚುನಾವಣೆ ಎದುರಿಸಲು ಹಿಂದೇಟು ಹಾಕಿದರು. ಈ ಸಮಯಕ್ಕೆ ಸರಿಯಾಗಿ ಜನತಾಪರಿವಾರದಲ್ಲಿದ್ದ ಆರ್.‌ ವಿ. ದೇಶಪಾಂಡೆ ಕಾಂಗ್ರೆಸ್‌ ಗೆ ಮರಳಿದ್ದರು. ಹಳೆ ಕಾಂಗ್ರೆಸ್ಸಿಗರು, ದೇಶಪಾಂಡೆಯವರ ವಲಸೆ ಜನತಾ ಪರಿವಾರ, ಇವರ ಮಧ್ಯೆ ಮಾರ್ಗರೇಟ್‌ ಆಳ್ವರ ಪ್ರಭಾವಿ ರಾಜಕಾರಣ,

ಇವರ ಹಗ್ಗ ಜಗ್ಗಾಟದಲ್ಲಿ ಬಲಿಪಶುವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತರ ರಾಜಕಾರಣ ಇದರ ಲಾಭ ಪಡೆದವರು ಮತಾಂಧ ಪರಿವಾರದ ಸೋಗಲಾಡಿಗಳು. ಉತ್ತರ ಕನ್ನಡ ಜಿಲ್ಲೆಯ ಇತ್ತೀಚಿನ ಕಾಲುಶತಮಾನದ ರಾಜಕಾರಣದಲ್ಲಿ ಅನಾಯಾಸ ಲಾಭ ಪಡೆದವರು ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತಕುಮಾರ್‌ ಹೆಗಡೆ ಮತ್ತು ಆರ್.ವಿ.ದೇಶಪಾಂಡೆ ಇದೇ ಮೇಲ್ಜಾತಿ ರಾಜಕಾರಣದ ಒಳ ಒಪ್ಪಂದ ಕಾಂಗ್ರೆಸ್‌ ವಿಘಟನೆಗೂ ಕಾರಣವಾಯಿತು. ಜಿಲ್ಲೆಯ ಮೂಲನಿವಾಸಿ ಬಹುಸಂಖ್ಯಾತರ ನಾಯಕತ್ವಕ್ಕೂ ಕೊಡಲಿ ಏಟು ಕೊಟ್ಟಿತು. ಈಗ ಅಪಾಯದ ಹಂತಕ್ಕೆ ಬಂದು ಮುಟ್ಟಿರುವ ಕಾಂಗ್ರೆಸ್‌ ನಲ್ಲಿ ಯಾವ, ಯಾರ ಮೇಲಾಟ ನಡೆಯುತ್ತಿದೆ ಎನ್ನುವುದೇ ಮುಂದಿನ ಕಂತಿನ ಹೂರಣ……

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *