

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕುಸಿದು ಬಿದ್ದಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಬ್ಬರ್ ಸ್ಟಾಂಪ್,ಗೃಹ ಸಚಿವರಿಗೆ ಸಾಮರ್ಥ್ಯವೇ ಇಲ್ಲ ಉಳಿದ ಸಚಿವರ ಕತೆ ಹೇಳುವುದೇ ಬೇಡ ಇಂಥ ಆಕಸ್ಮಿಕ ಸರ್ಕಾರದಿಂದ ರಾಜ್ಯದ ಉದ್ಧಾರ ಸಾಧ್ಯವಿಲ್ಲ ಎಂದು ಲೇವಡಿಮಾಡಿರುವ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ಈ ಅವ್ಯವಸ್ಥೆಗಳನ್ನು ನೋಡಿ ಬೇಸತ್ತು ಜನ ಕಾಂಗ್ರೆಸ್ ಗೆ ಮತ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ಶಿರಸಿ ಕ್ಷೇತ್ರದ ವೀಕ್ಷಕರಾಗಿ ಆಗಮಿಸಿ ಶಿರಸಿ-ಸಿದ್ಧಾಪುರಗಳಲ್ಲಿ ಕಾಂಗ್ರೆಸ್ ಸಭೆ ನಡೆಸಿದ ಅವರು samajamukhi.net ಪ್ರತಿನಿಧಿ ಜೊತೆ ಮಾತನಾಡಿ ರಾಜ್ಯ, ದೇಶದಲ್ಲಿ ಧಾರ್ಮಿಕತೆ ಮುಂದಿಟ್ಟುಕೊಂಡು ರಾಜಕೀಯ ಮಾಡುವ ಪರಂಪರೆ ಪ್ರಾರಂಭವಾಗಿದೆ. ಈ ಪ್ರಯತ್ನ ಫಲ ನಿಡುವುದಿಲ್ಲ ರಾಹುಲ್ ಗಾಂಧಿಯವರನ್ನು ಟೀಕಿಸಿ, ತೇಜೋವಧೆ ಮಾಡುವ ಪರಿವಾರ ರಾಹುಲ್ ಗಾಂಧಿಯವರನ್ನೇ ಯಾಕೆ ಗುರಿಮಾಡುತ್ತಿದೆ ಎನ್ನುವುದೂ ಜನರಿಗೆ ಅರ್ಥವಾಗುತ್ತಿದೆ ಎಂದರು. ಬೆಲೆ ಏರಿಕೆ, ಕೃಷಿಕರ ತೊಂದರೆ, ಜನಸಾಮಾನ್ಯರ ಬವಣೆ ಈ ಅಂಶಗಳೇ ಬಿ.ಜೆ.ಪಿ. ಸೋಲಿಗೆ ಕಾರಣವಾಗಲಿವೆ ಎಂದರು.

