


ಸಿದ್ದಾಪುರ: ತಾಲೂಕು ಬೇಡ ಜಂಗಮದ ಸಮಾಜದ ವತಿಯಿಂದ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿದ ಮನವಿಯನ್ನು ತಹಶಿಲ್ದಾರ ಸಂತೋಷ ಭಂಡಾರಿ ಯವರ ಮೂಲಕ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರಯ್ಯ ಕಾನಳ್ಳಿಮಠ
ಬೇಡ ಜಂಗಮರಿಗೆ ಸಂವಿಧಾನಾತ್ಮಕವಾಗಿ ಸಿಗುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಆಗ್ರಹಿಸಿ ವಕೀಲರಾದ ಬಿ.ಡಿ ಹಿರೇಮಠ್ ರವರ ನೇತೃತ್ವದಲ್ಲಿ 21 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸತ್ಯ ಪ್ರತಿಪಾದನಾ ಸತ್ಯಾಗ್ರಹ ನಡೆಯುತ್ತಿದೆ. ಇದನ್ನು ತಾಲೂಕು ಬೇಡ ಜಂಗಮ ಸಮುದಾಯವು ಸಹ ಬೆಂಬಲಿಸುತ್ತದೆ. ನಮ್ಮ ಬೇಡಿಕೆ ನ್ಯಾಯಸಮ್ಮತವಾದುದ್ದಾಗಿದೆ. ಬೇಡ ಜಂಗಮ ಸಮುದಾಯವು ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಹಿಂದುಳಿದಿರುವ ಸಮಾಜವಾಗಿದ್ದು ಹಿಂದಿನಿಂದಲೂ ಬೇಡ ಜಂಗಮ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿತ್ತಾ ಬಂದಿದ್ದೇವೆ. ಇದು ಸಂವಿಧಾನಾತ್ಮಕವಾಗಿ ಸಿಗಬೇಕಾದ ಹಕ್ಕು. ಈ ಹಿಂದೆ ಸರಕಾರದ ಕೆಲವು ಸೂತ್ತೋಲೆಗಳು ಹಾಗೂ ಕರ್ನಾಟಕ ಸರಕಾರ ದ ಮುಖ್ಯ ಗೆಜೆಟಿಯರ್ ಸೂರ್ಯನಾಥ ಕಾಮತ್ ರವರ ವರದಿಯಂತೆ ನಮಗೆ ಜಾತಿಪ್ರಮಾಣ ಪತ್ರ ಸಿಗಬೇಕು. ಬೇಡಜಂಗಮ, ಬುಡ್ಗು ಜಂಗಮ, ಮಾಲ ಜಂಗಮರಾದ ನಮಗೆ ಸರಕಾರದ ಸುತ್ತೋಲೆಗಳನ್ನು ಪರಿಶೀಲಿಸಿ ಸಂವಿಧಾನಾತ್ಮಕವಾಗಿ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ ಕಾನಳ್ಳಿಮಠ, ಸಂಗಮೇಶ, ರಾಜಶೇಖರ ಸ್ವಾಮಿ, ವೀರಭದ್ರ ಸ್ವಾಮಿ, ಅರುಣ ತೆಂಗಿನಮಠ, ಶಿವಕುಮಾರ ಹಿರೇಮಠ, ಪುಟ್ಟಯ್ಯ ಅಲಳ್ಳಿಮಠ, ಮಹಾಲಿಂಗಯ್ಯ ಕುಂದುಗೋಳ ಮಠ, ರಾಜು ಕುಂದಗೋಳ್ಳಮಠ, ಸೋಮಶೇಖರ ಸೋಗೆಮಠ, ಶಂವುಲಿಂಗಯ್ಯ ಹಂಚಿನ ಮಠ ಮೊದಲಾದವರು ಉಪಸ್ಥಿತರಿದ್ದರು.


ಅವರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ
ಈ ವರ್ಷ ಸರಕಾರ ಪ್ರಕೃತಿ ವಿಕೋಪ ಪೀಡಿತ ತಾಲೂಕು ಎಂದು ಘೋಷಣೆ ಮಾಡದಿದ್ದರೂ, ಆ ಸಂದರ್ಭದಲ್ಲಿ ಮಳೆ ಹೆಚ್ಚಾಗದಿದ್ದರೂ, ಹಳ್ಳದಲ್ಲಿ ಅತ್ಯಂತ ಕಡಿಮೆ ನೀರು ಹರಿಯುತ್ತಿರುವ ಸಂದರ್ಭದಲ್ಲಿ ತೋಟ ಕಾಲುಸಂಕದಿಂದ ಕಾಲು ಜಾರಿ ಹೊಳೆಯಲ್ಲಿ ಬಿದ್ದು ಮೃತಪಟ್ಟ ತಾರೀಸರ ಗ್ರಾಮದ ಪರಮೇಶ್ವರ ಕೃಷ್ಣಪ್ಪ ಹೆಗಡೆ ಯವರ ಕುಟುಂಬಕ್ಕೆ ಕಾಗೇರಿಯವರು ಮುತವರ್ಜಿ ವಹಿಸಿ ಸರ್ಕಾರದಿಂದ ತಕ್ಷಣ 5 ಲಕ್ಷ ರೂಪಾಯಿ ಪರಿಹಾರ ಹಣ ಬಿಡುಗಡೆ ಮಾಡಿಸಿದ್ದಾರೆ.
ಕಾಗೇರಿಯವರು ಸ್ವತಃ ಮುತವರ್ಜಿ ವಹಿಸಿ ಪರಿಹಾರ ಕೊಡಿಸಿದ್ದಾರೆ. ಇದಕ್ಕೆ ನಮ್ಮ ಸ್ವಾಗತವಿದೆ.
ಆದರೆ ಕಳೆದ ವರ್ಷದಲ್ಲಿ ಪ್ರಕೃತಿ ವಿಕೋಪ ತಾಲೂಕು ಎಂದು ಘೋಷಣೆ ಯಾಗಿದ್ದಾಗ ಮುಟ್ಟಳ್ಳಿ ಗ್ರಾಮದ ಕಂಚಿ ಮನೆ ಭಂಡಾರ ಕೇರಿಯ ನಿವಾಸಿ ನಾಗರಾಜ್ ಮಡಿವಾಳರವರ ಮನೆಗೆ ಧರೆ ಕುಸಿತವಾಗಿ ಬಾಗಿಲು ಚೌಕಟ್ಟು ಜಾರಿ ಅವರ ಮಗಳಾದ ಕುಮಾರಿ ದೀಕ್ಷಾ ನಾಗರಾಜ್ ಮಡಿವಾಳ ರವರ ಮೇಲೆ ಬಿದ್ದು ಬಾಲಕಿ ಮೃತಪಟ್ಟಿದ್ದರು. ಮಾನವೀಯತೆಯಿಂದ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಇದೇ ಕಾಳಜಿಯಿಂದ ತಕ್ಷಣದಲ್ಲಿ ಅವಳಿಗೆ ಪ್ರಕೃತಿ ವಿಕೋಪ ಅಡಿಯಲ್ಲಿ ಪರಿಹಾರ ನೀಡಬಹುದಾಗಿತ್ತು. ಆದರೆ ಅವರಿಗೆ ಪರಿಹಾರವಾಗಲಿ, ಮನೆ ಕಟ್ಟಿಕೊಳ್ಳಲು ಅವರ ಮನೆಯವರಿಗಾಗಲಿ ಪ್ರಕೃತಿ ವಿಕೋಪ ದಡಿಯಲ್ಲಿ ಇನ್ನೂ ತನಕ ಪರಿಹಾರ ನೀಡಲಿಲ್ಲ. ಇದರಲ್ಲಿ ಜಾತಿ ರಾಜಕಾರಣ ಎದ್ದು ಕಾಣುತ್ತಿದೆ.
ಶಾಸಕರು ಮುತುವರ್ಜಿ ವಹಿಸಿ ಪುನರ್ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಬೇಕಿತ್ತು. ಅವಳು ಧರೆ ಕುಸಿದಿದ್ದರಿಂದ ಬಾಗಿಲು ಬಡಿದು ಮೃತಪಟ್ಟಿದ್ದಾಳೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅಧಿಕಾರಿಗಳ ಸಭೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸುವ ಶಾಸಕರ ಮಾನವೀಯತೆ ಸಭೆಯಲ್ಲಿ ಮಾತ್ರವೇ?. ತಮ್ಮ ಜಾತಿಯವರಿಗೆ ಮಾತ್ರವೇ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಬೇಕು ಎಂದರ್ಥವೇ?. ಎಂದು ದೂರಿದ ಅವರು ಎಲ್ಲಾ ಜಾತಿಯವರಿಗೂ ಇದೇ ಕಾಳಜಿ ಮಾನವೀಯತೆ ಇರಬೇಕು. ಶಾಸಕರು ಈ ಪ್ರಕರಣವನ್ನು ಪುನರ್ ಪರಿಶೀಲಿಸಿ ಕುಮಾರಿ ದೀಕ್ಷಾ ನಾಗರಾಜ್ ಮಡಿವಾಳ ಕುಟುಂಬಕ್ಕೆ ಪ್ರಕೃತಿ ವಿಕೋಪ ದಡಿಯಲ್ಲಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸುರೇಂದ್ರ ಗೌಡ, ಗಂಗಾಧರ ಮಡಿವಾಳ, ವಿಶ್ವ ಮಡಿವಾಳ, ಮುಂತಾದವರು ಇದ್ದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
