

ಸಿದ್ದಾಪುರದಲ್ಲಿ ಸಿಡಿಲು ಬಡಿದು ಕಾನ್ಮನೆಯ ಮಹಿಳೆಯೊಬ್ಬರು ತೀವೃ ಅಸ್ವಸ್ಥರಾಗಿ ಸ್ಥಳೀಯ ತಾಲೂಕು ಆಸ್ಫತ್ರೆಗೆ ದಾಖಲಾಗಿದ್ದಾರೆ. ಅಸ್ವಸ್ಥಗೊಂಡ ಮಹಿಳೆಯನ್ನು ಹೇಮಗಾರ ಗ್ರಾಮದ ಕಾನ್ಮನೆ ಜ್ಯೋತಿ ಅಣ್ಣಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಬುಧವಾರ ಅಪರಾಹ್ನ ಮೂರು ಗಂಟೆಗೆ ಸಿಡಿಲು ಬಡಿದಿದ್ದು ಶಾಕ್ ಆದ ಮಹಿಳೆಯನ್ನು ಆಸ್ಫತ್ರೆಗೆ ದಾಖಲಿಸಿದ ನಂತರ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

