

ಇತ್ತೀಚಿನ ದಿನಗಳಲ್ಲಿ ಬಿದಿರು ಭವಿಷ್ಯದ ಬೆಳೆಯಾಗಿ ರೂಪುಗೊಳ್ಳುತ್ತಿದೆ ಹಾಗೂ ಬದಲಾಗುತ್ತಿರುವ ಕಾಲಘಟ್ಟದಲ್ಲಿ ರೈತರು ಬಿದಿರು ಬೆಳೆದು ಹೆಚ್ಚಿನ ಆದಾಯ ಗಳಿಸಿ ಸ್ವಾವಲಂಬಿಗಳಾಗಬೇಕೆಂದು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಎಂ. ಬಿ. ನಾಯ್ಕ್ ಕಡಕೇರಿಯವರು ರೈತ ಸಮುದಾಯಕ್ಕೆ ಕರೆಕೊಟ್ಟಿದ್ದಾರೆ. ಇಂಡಸ್-ಟ್ರೀ ಫೌಂಡೇಶನ್ ಬೆಂಗಳೂರು ಹಾಗೂ ಕಣಜ ಬಿದಿರು ರೈತ ಉತ್ಪಾದಕ ಸಂಸ್ಥೆ ಸಾಗರ ಆಶ್ರಯದಲ್ಲಿ ಸಾಗರದ ಬಾನ್ಕುಳಿ ಪಂಚಾಯತಿಯ ಬಿಡಸಳ್ಳೆ ಗ್ರಾಮದ ರಮೇಶ್ ಭಟ್ ರ ಜಮೀನಿನಲ್ಲಿ ಹಮ್ಮಿಕೊಳ್ಳಲಾದ ಬಿದಿರು ಸಸಿಗಳನ್ನು ನೆಡುವ ಪ್ರಕ್ರಿಗೆಯೆಗೆ ಚಾಲನೆ ನೀಡುತ್ತಾ ಮಾತನಾಡಿದರು.

ಬಿದಿರಿನ ಬೇಡಿಕೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ರೈತರ, ದೇಶದ ಆದಾಯ ಹೆಚ್ಚಿಸುವಲ್ಲಿ ಹಾಗೂ ಪರಿಸರ ಮತೋಲನ ಕಾಪಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆಯೆಂದು ಇದೇ ಸಂದಭ೯ದಲ್ಲಿ ತಿಳಿಸಿದರು. ಇಂಡಸ್-ಟ್ರೀ ಹಾಗೂ ಕಣಜ ಬಿದಿರು ರೈತ ಉತ್ಪಾದಕ ಸಂಸ್ಥೆಯ ಸಸ್ಯ ತಜ್ಞ ಡಾ. ಶ್ರೀಕಾಂತ್ ಗುನಗಾ ಮಾತನಾಡಿ, ಕಳೆದ ಒಂದು ವಷ೯ ದಿಂದ ಸಂಸ್ಥೆಯು ಸಾಗರ-ಹೊಸನಗರ ತಾಲೂಕುಗಳಲ್ಲಿ ಬಿದಿರು ಕೃಷಿಗೆ ಪ್ರೋತ್ಸಾಹಿಸುತ್ತಿದ್ದು ಇದುವರೆಗೆ 275 ರೈತರಿಗೆ 32000 ಟುಲ್ಡಾ ಬಿದಿರು ತಳಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಫಲಾನುಭವಿ ರೈತ ರಮೇಶ್ ಭಟ್ ವಂದಿಸಿದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
